ಕ್ರೀಡಾಸಕ್ತಿ ಜೊತೆಗೆ ಶಾಂತಿ, ಶಿಸ್ತು ಪಾಲನೆ ರೂಢಿಸಿಕೊಳ್ಳಬೇಕು: ವೆಂಕಟೇಶ ಮೂರ್ತಿ

KannadaprabhaNewsNetwork |  
Published : Aug 29, 2024, 12:53 AM ISTUpdated : Aug 29, 2024, 12:54 AM IST
ಕ್ರೀಡಾ ಧ್ವಜಾರೋಹಣ | Kannada Prabha

ಸಾರಾಂಶ

ಮಲೇಬೆನ್ನೂರು: ಇಲ್ಲಿಗೆ ಸಮೀಪದ ನಂದಿಗುಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ಮಲೇಬೆನ್ನೂರು ವಲಯಮಟ್ಟದ ಕ್ರೀಡಾಕೂಟ ಜರುಗಿತು. ಶಾಲೆ ಪ್ರಾಂಶುಪಾಲ ವೆಂಕಟೇಶ್‌ಮೂರ್ತಿ ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡಿ, ಕ್ರೀಡೆಗಳನ್ನು ಬಳಸಿಕೊಂಡು ವಿದ್ಯಾರ್ಥಿ ಜೀವನದಲ್ಲಿ ಶಾಂತತೆ, ಶಿಸ್ತು, ಸಮಯ ಪಾಲನೆ ರೂಢಿಸಿಕೊಳ್ಳಿ ಎಂದರು. ಕ್ರೀಡಾ ಧ್ವಜಾರೋಹಣ ನೆರವೇರಿಸಿದ ಸರ್ಕಾರಿ ಪ್ರೌಢಶಾಲೆ ಉಪ ಪ್ರಾಂಶುಪಾಲ ಜಗದೀಶ್ ಉಜ್ಜಮ್ಮನವರ್ ಮಾತನಾಡಿ, ಮಕ್ಕಳು ಓದು, ಬರವಣಿಗೆಯಂತೆ ಕ್ರೀಡೆಯಲ್ಲಿ ಭಾಗವಹಿಸಿದರೆ ಆರೋಗ್ಯವು ಸುಧಾರಣೆಯಾಗಲು ಸಾಧ್ಯವಿದೆ ಎಂದರು.

ಮಲೇಬೆನ್ನೂರು: ಇಲ್ಲಿಗೆ ಸಮೀಪದ ನಂದಿಗುಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ಮಲೇಬೆನ್ನೂರು ವಲಯಮಟ್ಟದ ಕ್ರೀಡಾಕೂಟ ಜರುಗಿತು.

ಶಾಲೆ ಪ್ರಾಂಶುಪಾಲ ವೆಂಕಟೇಶ್‌ಮೂರ್ತಿ ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡಿ, ಕ್ರೀಡೆಗಳನ್ನು ಬಳಸಿಕೊಂಡು ವಿದ್ಯಾರ್ಥಿ ಜೀವನದಲ್ಲಿ ಶಾಂತತೆ, ಶಿಸ್ತು, ಸಮಯ ಪಾಲನೆ ರೂಢಿಸಿಕೊಳ್ಳಿ ಎಂದರು. ಕ್ರೀಡಾ ಧ್ವಜಾರೋಹಣ ನೆರವೇರಿಸಿದ ಸರ್ಕಾರಿ ಪ್ರೌಢಶಾಲೆ ಉಪ ಪ್ರಾಂಶುಪಾಲ ಜಗದೀಶ್ ಉಜ್ಜಮ್ಮನವರ್ ಮಾತನಾಡಿ, ಮಕ್ಕಳು ಓದು, ಬರವಣಿಗೆಯಂತೆ ಕ್ರೀಡೆಯಲ್ಲಿ ಭಾಗವಹಿಸಿದರೆ ಆರೋಗ್ಯವು ಸುಧಾರಣೆಯಾಗಲು ಸಾಧ್ಯವಿದೆ ಎಂದರು.

ಮಲೇಬೆನ್ನೂರು, ಕಡರನಾಯ್ಕನಹಳ್ಳಿ, ನಂದಿಗುಡಿ, ಕೊಕ್ಕನೂರು, ಜಿ. ಬೇವಿನಹಳ್ಳಿ, ಒಡೆಯರ ಬಸಾಪುರ ಪ್ರೌಢಶಾಲೆಗಳು ಹಾಗೂ ಆರು ಪ್ರಾಥಮಿಕ ಶಾಲಾ ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸಿದ್ದರು. ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕಿ ಮಂಜುಳಾ ಮಾತನಾಡಿ, ತಾಲೂಕಿನ ಕೆಲವೇ ಶಾಲೆಗಳ ಆಚರಣದಲ್ಲಿ ವಿಶಾಲ ಮೈದಾನವಿದ್ದು, ಕ್ರೀಡೆ ಆಯೋಜಿಸಲು ಸೂಕ್ತವಾಗುತ್ತದೆ. ಕೆಲವು ಭಾಗದಲ್ಲಿ ಮೈದಾನವಿದ್ದು, ಮಕ್ಕಳ ಆಟೋಟ ಅಭ್ಯಾಸಕ್ಕೆ ಕೊಡದ ಪರಿಸ್ಥಿತಿ ಇದೆ. ಆದರೂ ಮಕ್ಕಳು ಕ್ರೀಡೆಯಲ್ಲಿ ಗೆಲುವಿನ ನಿರೀಕ್ಷೆಯಿಂದ ಭಾಗವಹಿಸುವ ಆಸಕ್ತಿ ಮೆಚ್ಚುವಂಥದ್ದಾಗಿದೆ. ತೀರ್ಪುಗಾರರು ತಾರತಮ್ಯ ಮಾಡದೇ ತೀರ್ಪು ನೀಡಬೇಕು ಎಂದು ತಿಳಿಸಿದರು.

ಶಿಕ್ಷಕರಾದ ಕರಿಬಸಪ್ಪ, ಚಂದ್ರಶೇಖರ್, ಹಾಲಪ್ಪ, ಭೀಮಪ್ಪ, ಹನುಮಗೌಡ, ಲಕ್ಷ್ಮಿ, ಮಾರುತಿ, ಪ್ರವೀಣ್, ರಜಾಕ್‌ ಅಲಿ, ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ರೇವಣಪ್ಪ, ಗದಿಗೆಪ್ಪ, ಮಂಜುನಾಥ್, ಸದಾನಂದ ಸಂಘಟನೆಗಳ ಮುಖ್ಯಸ್ಥರು, ದೈಹಿಕ ಶಿಕ್ಷಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ