ಪಾಂಡವಪುರ ತಾಲೂಕು ಕರವೇ ಅಧ್ಯಕ್ಷರಾಗಿ ಅಲ್ಪಹಳ್ಳಿ ಎ.ಟಿ.ಮಂಜು ನೇಮಕ

KannadaprabhaNewsNetwork |  
Published : Aug 24, 2025, 02:00 AM IST
23ಕೆಎಂಎನ್ ಡಿ21 | Kannada Prabha

ಸಾರಾಂಶ

ಪಾಂಡವಪುರ ಪಟ್ಟಣದ ಪ್ರವಾಸಿಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿದ ಬಳಿಕ ಜಿಲ್ಲಾಧ್ಯಕ್ಷ ಅಶೋಕ್, ತಾಲೂಕಿನ ಹೊನಗಾನಹಳ್ಳಿ ಗ್ರಾಪಂ ಉಪಾಧ್ಯಕ್ಷರಾಗಿರುವ ಅಲ್ಪಹಳ್ಳಿ ಎ.ಟಿ.ಮಂಜು ಅವರನ್ನು ತಾಲೂಕು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ನೇಮಕ ಪತ್ರ ವಿತರಿಸಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ತಾಲೂಕು ನೂತನ ಅಧ್ಯಕ್ಷರಾಗಿ ಅಲ್ಪಹಳ್ಳಿ ಎ.ಟಿ.ಮಂಜು ಅವರನ್ನು ಜಿಲ್ಲಾಧ್ಯಕ್ಷ ಡಿ.ಅಶೋಕ್ ನೇಮಕ ಮಾಡಿ ಒಮ್ಮತದಿಂದ ಘೋಷಿಸಿದರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿದ ಬಳಿಕ ಜಿಲ್ಲಾಧ್ಯಕ್ಷ ಅಶೋಕ್, ತಾಲೂಕಿನ ಹೊನಗಾನಹಳ್ಳಿ ಗ್ರಾಪಂ ಉಪಾಧ್ಯಕ್ಷರಾಗಿರುವ ಅಲ್ಪಹಳ್ಳಿ ಎ.ಟಿ.ಮಂಜು ಅವರನ್ನು ತಾಲೂಕು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ನೇಮಕ ಪತ್ರ ವಿತರಿಸಿದರು.

ನಂತರ ಜಿಲ್ಲಾಧ್ಯಕ್ಷ ಡಿ.ಅಶೋಕ್ ಮಾತನಾಡಿ, ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸಂಘಟನೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಪಾಂಡವಪುರ ತಾಲೂಕಿಗೆ ನೂತನ ಅಧ್ಯಕ್ಷರಾಗಿ ಎ.ಟಿ.ಮಂಜು ಅವರನ್ನು ನೇಮಕ ಮಾಡಿ ಜವಾಬ್ದಾರಿ ನೀಡಲಾಗಿದೆ. ಕನ್ನಡ ನಾಡು, ನುಡಿ, ಜಲ, ರೈತರ ಸಮಸ್ಯೆಗೆ ಕುರಿತಂತೆ ಬೀದಿಗಿಳಿದು ಹೋರಾಟ ನಡೆಸುವ ಗುರಿ ಇಟ್ಟುಕೊಂಡಿದ್ದೇವೆ. ರಾಜಕೀಯ ಪಕ್ಷಗಳ ಅಥವಾ ರಾಜಕಾರಣಿಗಳ ಹಸ್ತಕ್ಷೇಪ ಇಲ್ಲದೇ, ಸಂಘಟನೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದರು.

ನೂತನ ಅಧ್ಯಕ್ಷ ಎ.ಟಿ.ಮಂಜು ಮಾತನಾಡಿ, ಹೊಸ ಜವಾಬ್ದಾರಿ ವಹಿಸಿಕೊಂಡು ಅಧ್ಯಕ್ಷನಾಗಿ, ನಾಡು, ನುಡಿ ಬಗ್ಗೆ ಸಮಸ್ಯೆ ಬಂದಾಗ ಸಂಘಟನೆ ನೇತೃತ್ವದಲ್ಲಿ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.

ಸಭೆಯಲ್ಲಿ ಕರವೇ ಜಿಲ್ಲಾ ಕಾರ್ಯದರ್ಶಿ ರಾಜೇಶ್, ಉಪಾಧ್ಯಕ್ಷ ಶ್ರೀನಿವಾಸ್, ತಾಲೂಕು ಅಧ್ಯಕ್ಷ ದೇವರಾಜು, ಮಂಡ್ಯ ನಗರ ಅಧ್ಯಕ್ಷ ಯೋಗೇಶ್, ತಾಲೂಕು ಮುಖಂಡರಾದ ಎಣ್ಣೆಹೊಳೆಕೊಪ್ಪಲು ನಿರಂಜನ್, ಗಿರಿಯಾಯರಹಳ್ಳಿ ಕೃಷ್ಣ, ತಿರುಮಲಾಪುರ ಯೋಗೇಶ್, ಕಣಿವೆಕೊಪ್ಪಲು ರವಿ, ವಡ್ಡರಹಳ್ಳಿ ಸುರೇಶ್, ಅಂತನಹಳ್ಳಿ ಗ್ರಾಮದ ಶಿವಸ್ವಾಮಿ, ಮಂಜು, ಪ್ರಕಾಶ್, ಕೃಷ್ಣ, ಅಭಿ, ಲಕ್ಕಪ್ಪ, ಅರಳಕುಪ್ಪೆ ಕೀರ್ತಿ, ಮಹೇಶ್, ಬನ್ನಂಗಾಡಿ ಪ್ರಸನ್ನ, ಬಿಂಡಹಳ್ಳಿ ರಾಮೇಗೌಡ ಸೇರಿದಂತೆ ಅನೇಕರಿದ್ದರು.

PREV

Recommended Stories

ಬುರುಡೆ ಗ್ಯಾಂಗ್‌ಗೆ ಚಿನ್ನಯ್ಯ ಸೇರಿದ್ದು ಹೇಗೆ ? ಪರಿಚಯಿಸಿದ್ದೇ ಸೌಜನ್ಯ ಮಾವ!
ಬುರುಡೆ ತನಿಖೆ ವೇಳೆ ಎಲ್ಲರೂ, ಬಂಧನ ವೇಳೆ ಕೈಕೊಟ್ಟರು!