ಮಾದಾಪುರ ಗ್ರಾಮವನ್ನು ಹೋಬಳಿ ಕೇಂದ್ರವಾಗಿ ಮಾರ್ಪಡಿಸಿ ಗ್ರಾಮದ ಜನತೆಯು ಹತ್ತಾರು ಕಿ.ಮೀ ದೂರ ತೆರಳಿ ಹೋದ ದಾರಿಗೆ ಸುಂಕ ಇಲ್ಲ ಎಂಬತಾಗಿದೆ.

ಕನ್ನಡಪ್ರಭವಾರ್ತೆ ಸುಂಟಿಕೊಪ್ಪಮಾದಾಪುರ ಗ್ರಾಮವನ್ನು ಹೋಬಳಿ ಕೇಂದ್ರವಾಗಿ ಮಾರ್ಪಡಿಸಿ ಗ್ರಾಮದ ಜನತೆಯು ಹತ್ತಾರು ಕಿ.ಮೀ ದೂರ ತೆರಳಿ ಹೋದ ದಾರಿಗೆ ಸುಂಕ ಇಲ್ಲ ಎಂಬತಾಗಿದೆ. ಮಾದಾಪುರ ಸೋಮವಾರಪೇಟೆ ಹೋಬಳಿ ಕೇಂದ್ರದಿಂದ ಬೇರ್ಪಡಿಸಿ ಹಾಗೂ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಗ್ರಾಮಸ್ಥರಿಗೆ ಆಗುತ್ತಿರುವ ಗಂಭೀರ ಸಮಸ್ಯೆಯ ಪರಿಹಾರಕ್ಕೆ ಸಂಬಂಧಿಸಿದ ಮೇಲಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನಹರಿಸಿ ಕ್ರಮಕ್ಕೆ ಮುಂದಾಗಬೇಕು ಎಂದು ನಿವಾಸಿಗಳ ಆಗ್ರಹವಾಗಿದೆ.ಮಾದಾಪುರ ಭಾಗದಲ್ಲಿ ಬಹುಪಾಲು ಸಣ್ಣ ಮತ್ತು ಮಧ್ಯಮ ವರ್ಗದ ಕೃಷಿ ಹೆಚ್ಚಾಗಿದೆ. ಅಲ್ಲದೆ ಕೃಷಿ ಕಾರ್ಮಿಕರೇ ಮಾದಾಪುರದಲ್ಲಿ ಹೆಚ್ಚಾಗಿ ನೆಲೆಸಿದ್ದಾರೆ. ಈ ಮಂದಿಯು ಯಾವುದೇ ಸಣ್ಣ ಪುಟ್ಟ ದಾಖಲಾತಿಗಳನ್ನು ಹೊಂದಿಸಿಕೊಳ್ಳಬೇಕಾದರೆ ಸೋಮವಾರಪೇಟೆಗೆ ತಾಲೂಕು ಕಚೇರಿ ಹೊಂದಿಕೊಂಡಿರುವ ಹಿನ್ನಲೆ ಹೋಬಳಿ ವ್ಯಾಪ್ತಿಯ ಕಾರ್ಯಚಟುವಟಿಕೆಗಳನ್ನು ಅಲ್ಲಿಂದ ನಿರ್ವಹಿಸಬೇಕಾಗಿದೆ. ಅಲ್ಲಿಯೂ ಅಧಿಕಾರಿಗಳು ಸಭೆ ಹಾಗೂ ಗ್ರಾಮಗಳ ವೀಕ್ಷಣೆಗೆ ತೆರಳಿದರೆ ಹೋಗಿರುವ ಬಡವನ ಪಾಡು ದವಡೆಗೆ ಮೂಲ ಎನ್ನುವಂತಾಗಿದೆ ಎಂದು ಗ್ರಾಮಸ್ಥರು ಅಳಲು ವ್ಯಕ್ತಪಡಿಸಿದರು.ಮಾದಾಪುರ ಕೇಂದ್ರವಾಗಿ ಮಾರ್ಪಡಿಸುವಂತೆ ಈ ಭಾಗದ ನಿವಾಸಿಗಳ ಹಲವು ದಶಕಗಳ ಹಿಂದಿನ ಬೇಡಿಕೆಯಾಗಿತ್ತು. ಮಾದಾಪುರ ಸುಂಟಿಕೊಪ್ಪ ಹೋಬಳಿ ಕೇಂದ್ರಕ್ಕೆ ಒಳಗೊಂಡಿರುವ ಸಂದರ್ಭದಲ್ಲಿ ಈ ಭಾಗದ ನಿವಾಸಿಗಳಿಗೆ ತಮ್ಮ ಕಂದಾಯ ಕಚೇರಿಯಲ್ಲಿ ಪ್ರಾಥಮಿಕ ಹಂತದ ಅರ್ಜಿ ಕೆಲಸ ಕಾರ್ಯಗಳನ್ನು ಸುಲಲಿತವಾಗಿ ನಿರ್ವಹಿಸಿಕೊಳ್ಳಬಹುದಿತ್ತು. 2019ರಲ್ಲಿ ಆದರೆ ಕುಶಾಲನಗರವನ್ನು ತಾಲೂಕು ಕೇಂದ್ರವಾಗಿ ಸ್ಥಾಪನೆಗೊಂಡಾಗ ಗಡಿ ಗುರುತುಗೊಳಿಸುವ ಸಂದರ್ಭ ಗರಗಂದೂರು ಮಾದಾಪುರವನ್ನು ಗರ್ವಾಲೆ ಸೇರಿದಂತೆ ಇತರೆ ಗ್ರಾಮ ಪಂಚಾಯಿತಿಗಳನ್ನು ಕೈಬಿಡಲಾಗಿದ್ದು, ಇದರಿಂದ ಗಡಿ ಪ್ರದೇಶದಿಂದ ಹೊರಗುಳಿದ ಗ್ರಾಮ ಪಂಚಾಯಿತಿಗಳನ್ನು ಸೋಮವಾರಪೇಟೆ ತಾಲೂಕಿನ ಹೋಬಳಿ ಕೇಂದ್ರಕ್ಕೆ ಸೇರ್ಪಡೆಗೊಳಿಸಲಾಗಿದ್ದು ಈ ಭಾಗದ ನಿವಾಸಿಗಳು ಯಾವುದೇ ರೀತಿಯ ಪ್ರಾಥಮಿಕ ಅರ್ಜಿಗಳನ್ನು 15 ಕಿ..ಮೀ ದೂರದ ಸೋಮವಾರಪೇಟೆ ಹೋಬಳಿ ಕಚೇರಿಗೆ ತೆರಳಿ ಸಲ್ಲಿಸಬೇಕಾಗಿದೆ. ಈ ಭಾಗದ ನಿವಾಸಿಗಳಿಗೆ ಬಹುದೊಡ್ಡ ಸಮಸ್ಯೆಯಾಗಿದೆ ಅಲ್ಲದೆ ಸಂಪೂರ್ಣ ಸೌಕರ್ಯವಿಲ್ಲದಾಗಿದೆ.ಮಾದಾಪುರ ಸುತ್ತ ಮುತ್ತಲಿನ ಮಾದಾಪುರ, ಕಿರಗಂದೂರು, ಗರ್ವಾಲೆ ಹಾಗೂ ಹರದೂರು ಸೇರಿದಂತೆ 4 ಗ್ರಾಮ ಪಂಚಾಯಿತಿಗಳು ಹೊಂದಿದೆ. 4 ಗ್ರಾಮ ಪಂಚಾಯಿತಿಗಳು ಹೊಂದಿಕೊಂಡಂತೆ ಸಾಕಷ್ಟು ಉಪ ಗ್ರಾಮಗಳನ್ನು ಹೊಂದಿದೆ. ಇಲ್ಲಿನ ನಿವಾಸಿಗಳು ಯಾವುದೇ ಕೆಲಸ ಕಾರ್ಯಕ್ಕೂ ಸೋಮವಾರಪೇಟೆಗೆ ತೆರಳಬೇಕಾದ ಅನಿವಾರ್ಯತೆ ಇದೆ ಎಂದು ಸಂವಾದದಲ್ಲಿ ಸಮಸ್ಯೆಯನ್ನು ತೆರೆದಿಟ್ಟರು. ಈ ವ್ಯಾಪ್ತಿಯಲ್ಲಿ ಅಂದಾಜು 8 ಸಾವಿರಕ್ಕೂ ಮಿಕ್ಕಿ ಜನ ಸಂಖ್ಯೆಯನ್ನು ಹೊಂದಿದೆ. ಮಾದಾಪುರ ಹಾಗೂ ಸುತ್ತ ಮುತ್ತಲಿನ ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟು 20ಕ್ಕೂ ಮಿಕ್ಕಿ ಸರ್ಕಾರಿ ಪ್ರಾಥಮಿಕ ಶಾಲೆಗಳು ಕಾರ್ಯಾಚರಿಸುತ್ತಿವೆ. 50 ಕ್ಕೂ ಮಿಕ್ಕಿ ಅಂಗನವಾಡಿ ಕೇಂದ್ರಗಳು, 1 ಅನುದಾನಿತ ಪದವಿ ಕಾಲೇಜು ಹಾಗೂ ಪ್ರೌಢಶಾಲೆ 5ಕ್ಕೂ ಮಿಕ್ಕಿ ಕಾರ್ಯ ನಿರ್ವಹಿಸುತ್ತಿದೆ.ಮಾದಾಪುರ ಗ್ರಾಮ ಪಂಚಾಯಿತಿ ಒಳಗೊಂಡ ಗ್ರಾಮಗಳಾದ ಕಾಮಡನಕೊಲ್ಲಿ, ಹಾಲೇರಿ, ಕೊಪ್ಪತ್ತೂರು, ಹಟ್ಟಿಹೊಳೆ, ಮೂವತ್ತೋಕ್ಲು ಕುಂಬೂರು ಜಂಬೂರು ಹಾಗೂ ಮಾದಾಪುರ ಗ್ರಾಮಗಳನ್ನು ಒಳಗೊಂಡಿದ್ದು, 16 ಮಂದಿ ಸದಸ್ಯ ಬಲವನ್ನು ಹೊಂದಿರುವ ಗ್ರೇಡ್ 1 ಗ್ರಾಮ ಪಂಚಾಯಿತಿಯಾಗಿದೆ. ಮಾದಾಪುರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಪಶುವೈದ್ಯ ಇಲಾಖೆ ಕಚೇರಿ, ಪೊಲೀಸ್ ಉಪಠಾಣೆ ವಾಣಿಜ್ಯ ಬ್ಯಾಂಕ್, ಕೃಷಿಪತ್ತಿನ ಸಹಕಾರ ಬ್ಯಾಂಕ್ ಹಾಗೂ ಡಿಸಿಸಿ ಬ್ಯಾಂಕ್ ಶಾಖೆಯನ್ನು ತೋಟಗಾರಿಕ ಇಲಾಖೆ, ಜೇನು ಉತ್ಪಾದಾನ ಇಲಾಖೆ ಈ ಭಾಗದಲ್ಲಿ ಕಾರ್ಯಾಚರಿಸುತ್ತಿದೆ.ಸೋಮವಾರಪೇಟೆ ತಾಲೂಕು ಕಚೇರಿ ಮತ್ತು ಹೋಬಳಿ ಕೇಂದ್ರವಾಗಿ ಕಾರ್ಯಚರಿಸುತ್ತಿರುವುದರಿಂದ ಬೆಳಿಗ್ಗೆ ತಾಲೂಕು ಕಚೇರಿಗೆ ಜನ ದಟ್ಟಣೆಯಿಂದ ಸಂಜೆಯೇ ಕೆಲಸ ಕಾರ್ಯಗಳು ನಿರ್ವಹಿಸಿಕೊಂಡು ಬರುವುದು ಅದು ಒಂದು ದಿನದಲ್ಲಿ ಅರ್ಜಿಗಳು ವಿಲೇವಾರಿಗೊಳ್ಳುವುದು ಕಷ್ಟಸಾಧ್ಯವಾಗುತ್ತಿದೆ.ಈ ಭಾಗದಲ್ಲಿ ಸಾಕಷ್ಟು ಪ್ರವಾಸಿ ಕೇಂದ್ರಗಳನ್ನು ಹೊಂದಿರುವ ಹಸಿರು ಕಾನನ ಪ್ರದೇಶವಾಗಿದೆ. ಹೆಸರುವಾಸಿಯಾದ ಗರ್ವಾಲೆ ಪಂಚಾಯಿತಿ ವ್ಯಾಪ್ತಿಯ ಕೊಟ್ಟೆ ಬೆಟ್ಟ, ಕೋಟೆ ಅಭಿಪಾಲ್ಸ್, ಮುಕ್ಕೋಡ್ಲು ಅಭಿಗುಂಡಿ ಸೇರಿದಂತೆ ಜಲಪಾತಗಳಿಗೆ ವೀಕ್ಷಿಸಲು ಮಾದಾಪುರ ಮೂಲಕವೇ ತೆರಳಬೇಕಾಗಿದೆ. ಪ್ರವಾಸಿಗರು ವಾರಂತ್ಯಗಳಲ್ಲಿ ಮತ್ತು ಹಬ್ಬ ಹರಿದಿನ ರಜೆಗಳಲ್ಲಿ ನೂರಾರು ಪ್ರವಾಸಿಗರು ಪ್ರವಾಸಿತಾಣಗಳಲ್ಲಿ ಕಂಡು ಬರುತ್ತಾರೆ. ಆದರೆ ಮೂಲಭೂತ ಸೌಲಭ್ಯಗಳಾದ ರಸ್ತೆ, ಸಂಬಂಧಿಸಿದ ಇಲಾಖೆಗಳು ಮೂಲ ಸೌಲಭ್ಯದ ಕೊರತೆಯಿಂದ ಪ್ರವಾಸಿತಾಣಗಳು ಬಳಲುತ್ತಿದೆ. ಸಂಬಂಧಿಸಿದ ಸರಿಯಾದ ನಿರ್ವಹಣೆ ಕೊರತೆಯಿಂದ ಸರ್ಕಾರದ ಬೋಕಸಕ್ಕೆ ಬರುತ್ತಿದ್ದ ಕೋಟ್ಯಾಂತರ ರು. ಆದಾಯವು ಕಣ್ಮರೆಯಾಗಿದೆ. ಸಂಬಂಧಿಸಿದ ಸರ್ಕಾರವು ಇತ್ತ ಗಮನಹರಿಸಿ ಆದಾಯಕ್ಕೆ ಮೂಲಕ್ಕೆ ಮೂಲಭೂತ ಒದಗಿಸಿಕೊಟ್ಟಲ್ಲಿ ಸರ್ಕಾರದ ಆದಾಯ ಹೆಚ್ಚಾಗಲಿದೆ ಎಂಬುದು ಇಲ್ಲಿನ ನಿವಾಸಿಗಳ ಆಗ್ರಹವಾಗಿದೆ.ಓಬಿರಾಯನ ಕಾಲದ ನೇಮಕಾತಿಯ ನಿಯಮವನ್ನೇ ಪಾಲಿಸುತ್ತಿರುವುದು ವಿಷಾದದ ಸಂಗತಿಯಾಗಿದೆ. ಕೂಡಲೇ ಪೊಲೀಸ್ ಠಾಣೆಯಲ್ಲಿ ಓರ್ವ ಸಿಬ್ಬಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿರುವುದು ವಿಷಾದದ ಸಂಗತಿ. ಇಲ್ಲಿನ ಜನ ಸಂಖ್ಯೆಗೆ ಅನುಗುಣವಾಗಿ ಸಿಬ್ಬಂದಿ ಸಂಖ್ಯೆಯನ್ನು ಏರಿಕೆಗೊಳಿಸಬೇಕು ಮತ್ತು ಠಾಣೆಯನ್ನು ಮೇಲ್ದರ್ಜೆಗೇರಿಸಬೇಕು ಎಂದು ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಇಲಾಖೆಯನ್ನು ಒತ್ತಾಯಿಸಿದ್ದಾರೆ.ಮಾದಾಪುರ ಗ್ರಾಮ ಪಂಚಾಯಿತಿ ವತಿಯಿಂದ ಕಾರ್ಯಚರಿಸುತ್ತಿರುವ ಇಲಾಖೆಗಳಲ್ಲಿರುವ ಸಿಬ್ಬಂದಿ ಕೊರತೆ ಮತ್ತು ಮಾದಾಪುರವನ್ನು ಹೋಬಳಿ ಕೇಂದ್ರವನ್ನಾಗಿ ಮಾರ್ಪಡಿಸಿ ಕಂದಾಯ ಕಚೇರಿಯನ್ನು ತೆರೆಯುವಂತೆ ಮಡಿಕೇರಿ ಕ್ಷೇತ್ರದ ಶಾಸಕರನ್ನು ಭೇಟಿ ಮಾಡಿ ಕಳೆದ 6 ವರ್ಷಗಳಿಂದ ಇಲ್ಲಿನ ಕಂದಾಯ ಇಲಾಖೆಯ ಗಂಭೀರ ಸಮಸ್ಯೆಯ ಬಗ್ಗೆ ಪಂಚಾಯಿತಿಯ ಸದಸ್ಯರು ಮತ್ತು ಸಾರ್ವಜನಿಕರು ನಿಯೋಗ ತೆರಳಿ ಸಮಸ್ಯೆ ಗಂಭೀರತೆಯ ಬಗ್ಗೆ ಹೋಬಳಿ ಕೇಂದ್ರವನ್ನಾಗಿ ಮಾಡಿ ಕಂದಾಯ ಕಚೇರಿಯನ್ನು ಆರಂಭಿಸುವಂತೆ ಮನವಿ ಸಲ್ಲಿಸಲಾಗಿದೆ. ಈ ಭಾಗದ ಉಪಗ್ರಾಮಗಳ ಜನತೆ ಸೋಮವಾರಪೇಟೆಗೆ ಕಂದಾಯ ಕಚೇರಿಗೆ ಕಡಿಮೆ ಎಂದರೂ 40 ಕೀ.ಮೀ ದೂರ ಹೋಗಬೇಕಾಗುತ್ತದೆ. ಈ ಗ್ರಾಮದಲ್ಲಿ ಬಹುಪಾಲು ಮಂದಿ ಕೂಲಿಕಾರ್ಮಿಕರೇ ಬವಣೆ ಹೇಳ ತೀರಾದಾಗಿದೆ. ಈ ಎಲ್ಲ ಸಂಕಷ್ಟಗಳ ಪರಿಹಾರಕ್ಕಾಗಿ ಆದರೆ ಇಂದಿಗೂ ಸಮಸ್ಯೆಗೆ ಪರಿಹಾರ ದೊರೆತ್ತಿಲ್ಲ ಎಂದು ಅಲ್ಲದೆ ಪ್ರತಿ ಗ್ರಾಮ ಸಭೆಯಲ್ಲೂ ಗ್ರಾಮಸ್ಥರು ಹೋಬಳಿ ಕೇಂದ್ರವಾಗಬೇಕು ಎಂದು ಆಗ್ರಹಿಸುತ್ತಿದ್ದು ಇದರ ಪ್ರತಿಯನ್ನು ಜಿಲ್ಲಾಡಳಿತಕ್ಕೆ ಗಂಭೀರ ಸಮಸ್ಯೆಯ ಪತ್ರ ವ್ಯವಹಾರವನ್ನು ನಡೆಸಲಾಗಿದೆ. ಸಂಬಂಧಿಸಿದ ಅಧಿಕಾರಿಗಳು ಜನಪ್ರತಿನಿಧಿಗಳು ಹೋಬಳಿ ಕೇಂದ್ರ ತೆರೆಯುವ ಮೂಲಕ ಈ ಭಾಗದಲ್ಲಿ ಗಂಭೀರ ಸಮಸ್ಯೆಯನ್ನು ನೀಗಿಸಲು ಮುಂದಾಗಬೇಕು

ಸೋಮಣ್ಣ ಗ್ರಾಮ ಪಂಚಾಯಿತಿ ಅಧ್ಯಕ್ಷ

ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಮಂದಿ ನೆಲೆಸಿದ್ದು ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ಒಟ್ಟು 30 ಕಿ.ಮೀ ದೂರದಲ್ಲಿದೆ. ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸೇರಿದ ಹಿಂದುಳಿದ ಜನಾಂಗದವರೇ ಅತೀ ಹೆಚ್ಚು ಮಂದಿ ನೆಲೆಸಿದ್ದು, ಕಂದಾಯ ಇಲಾಖೆಯ ವ್ಯಾಪ್ತಿಗೆ ಒಳಪಡುವ ದಾಖಲಾತಿಗಳಿಗೆ ಸೋಮವಾರಪೇಟೆ ಕಂದಾಯ ಕಚೇರಿಗೆ ಭೇಟಿ ನೀಡಬೇಕಾಗಿದ್ದು ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಒಂದೇ ದಿನದಲ್ಲಿ ಯಾವುದೇ ಕೆಲಸಗಳು ಸಂಪೂರ್ಣ ಪ್ರಮಾಣ ಮುಗಿಯದೆ 4ರಿಂದ 5 ಬಾರೀ ಇಲಾಖೆಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಟಿ.ಕೆ.ಸಂತೋಷ್, ರಾಯಲ್ ಪಾರ್ಮರ್ಸ್ ಕ್ಲಬ್ ಕಾರ್ಯದರ್ಶಿ

ಮಾದಾಪುರ ಕಾಂಡನಕೊಲ್ಲಿ, ಹಾಲೇರಿ, ಹಟ್ಟಿಹೊಳೆ ವ್ಯಾಪ್ತಿಯ ಜನತೆಯು ಯಾವುದೇ ರೀತಿಯ ಭೂ ದಾಖಲೆ ಹಾಗೂ ಆದಾಯ ಜಾತಿ ಪ್ರಮಾಣ ಪತ್ರಗಳಿಗಾಗಿ ದೂರದ ಸೋಮವಾರಪೇಟೆ ಹೋಬಳಿ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬೇಕಾಗಿದ್ದು, ಅಧಿಕಾರಿಗಳು ಸಕಾಲದಲ್ಲಿ ದೊರೆಯದೆ ಬಡ ಜನತೆಯು ಸಾಕಷ್ಟು ಭಾರೀ ತೆರಳಿ ನೀಡಿರುವ ನಿಗದಿತ ಅವಧಿಯೊಳಗೆ ದಾಖಲಾತಿಗಳು ದೊರೆಯದೆ ಹೈರಾಣಗಿರುವುದನ್ನು ನಿತ್ಯ ಕಾಣುವಂತಾಗಿದೆ. ಅಧಿಕಾರಿಗಳಿಗೆ ಸಭೆ ಅಥವಾ ಗ್ರಾಮಗಳ ಸಮಸ್ಯೆ ಭೇಟಿಗೆ ತೆರಳಿದ ಸಂದರ್ಭ ಕುಗ್ರಾಮಗಳಿಂದ ತೆರಳಿದ ಮಂದಿಗೆ ವಾಹನಗಳು ದೊರೆಯದೆ ದುಪ್ಪಟ್ಟು ಹಣ ವ್ಯಯಿಸುವ ಸಂದರ್ಭಗಳು ಬಂದು ಒದಗಿರುವ ಘಟನೆಗಳನ್ನು ನಿತ್ಯ ಕಾಣುತ್ತಿದ್ದೇವೆ ಮತ್ತು ಕೇಳಿ ತಿಳಿದುಕೊಂಡಿದ್ದೇವೆ.

ಬಿ.ಕೆ. ಸತೀಶ್‌ಕುಮಾರ್, ಜಂಬೂರುಬಾಣೆ ನಿವಾಸಿ ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ಮಾಜಿ ಅಧ್ಯಕ್ಷ