ಕೀಟಜನ್ಯಗಳು ಚಿಕ್ಕವಾದರೂ ಹರಡುವ ರೋಗ ದೊಡ್ಡದು: ಡಾ.ಬಿ.ವಿ ಗಿರೀಶ್

KannadaprabhaNewsNetwork |  
Published : Jul 14, 2024, 01:46 AM ISTUpdated : Jul 14, 2024, 09:42 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ | Kannada Prabha

ಸಾರಾಂಶ

ಕೀಟಗಳು ಗಾತ್ರದಲ್ಲಿ ಚಿಕ್ಕದಾದರೂ ಇವುಗಳು ಹರಡುವ ಮಲೇರಿಯಾ, ಡೆಂಘೀ, ಚಿಕೂನ್ ಗುನ್ಯಾ, ಮೆದುಳ ಜ್ವರ, ಆನೆಕಾಲು ರೋಗಗಳ ಪರಿಣಾಮ ಅಪಾಯಕಾರಿಯಾಗಿದೆ.

  ಚಿತ್ರದುರ್ಗ :  ಮಕ್ಕಳ ಮನೋಭಾವ ಬದಲಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.

ನಗರದ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯ ಸಭಾಭವನದಲ್ಲಿ ಆರೋಗ್ಯ ಇಲಾಖೆ ಮತ್ತು ಶಾಲಾ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಶುಕ್ರವಾರ ಚಿತ್ರದುರ್ಗ ತಾಲೂಕಿನ ಪ್ರೌಢಶಾಲಾ ಮತ್ತು ಪ್ರಾಥಮಿಕ ಶಾಲಾ ವಿಜ್ಞಾನ ಶಿಕ್ಷಕರಿಗೆ ಏರ್ಪಡಿಸಿದ ಸಮರ್ಥನಾ ಸಭಾ ಕಾರ್ಯಾಗಾರ ಉಧ್ಘಾಟಿಸಿ ಮಾತನಾಡಿದ ಅವರು, ಕೀಟಜನ್ಯ ರೋಗಗಳು ಪ್ರಪಂಚಾದ್ಯಂತ 110 ದೇಶಗಳಲ್ಲಿ ಪ್ರತಿವರ್ಷ 10 ಕೋಟಿಗೂ ಹೆಚ್ಚು ಪ್ರಕರಣಗಳು ಕಂಡುಬರುತ್ತದೆ. 

ಕೀಟಗಳು ಗಾತ್ರದಲ್ಲಿ ಚಿಕ್ಕದಾದರೂ ಇವುಗಳು ಹರಡುವ ಮಲೇರಿಯಾ, ಡೆಂಘೀ, ಚಿಕೂನ್ ಗುನ್ಯಾ, ಮೆದುಳ ಜ್ವರ, ಆನೆಕಾಲು ರೋಗಗಳ ಪರಿಣಾಮ ಅಪಾಯಕಾರಿಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದೆ. ಶಿಕ್ಷಕರು, ಚುನಾಯಿತ ಪ್ರತಿನಿಧಿಗಳಿಗೆ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ, ಸಮುದಾಯ ಜಾಗೃತೀಕರಣ, ಗುಂಪು ಸಭೆಗಳು ನಡೆಸಿ ಅರಿವು ಮೂಡಿಸಲಾಗುತ್ತಿದೆ ಎಂದರು.

ಜಿಲ್ಲಾ ಕೀಟ ಶಾಸ್ತ್ರಜ್ಞೆ ನಂದಿನಿ ಕಡಿ ಮಾತನಾಡಿ, ಚಿತ್ರದುರ್ಗ ಡೆಂಘೀ ಜ್ವರಕ್ಕೆ ಹೈರಿಸ್ಕ್ ಹಾಟ್‍ಸ್ಪಾಟ್ ಜಿಲ್ಲೆಯಾಗಿದೆ. ಸೊಳ್ಳೆಗಳ ನಿಯಂತ್ರಣಕ್ಕೆ ಕೃತಕ ಸೊಳ್ಳೆ ಬತ್ತಿ ಮಕ್ಕಳು ಶಾಲಾ ಹಂತದಲ್ಲಿ ಹೇಗೆ ತಯಾರಿಸಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಸಾಂಕ್ರಾಮಿಕ ರೋಗಗಳು ಕಲುಷಿತ ನೀರು, ಆಹಾರ ಸೇವನೆಯಿಂದ, ವೈಯಕ್ತಿಕ ಸ್ವಚ್ಛತಾ ಕೊರತೆ, ಕೀಟಗಳಿಂದ ಹರಡುತ್ತವೆ. ಸಾಮಾನ್ಯವಾಗಿ ಸೊಳ್ಳೆಗಳ ಕಡಿತ ಮಲೇರಿಯಾ ಡೆಂಘೀ, ಚಿಕೂನ್ ಗುನ್ಯಾ, ಮೆದುಳ ಜ್ವರ ಹರಡುತ್ತವೆ. ಈಗ ಡೆಂಘೀ ಜ್ವರ ರಾಜ್ಯಾದ್ಯಂತ ಹೆಚ್ಚು ಪ್ರಕರಣಗಳು ಕಂಡು ಬಂದಿದೆ. ಚಿತ್ರದುರ್ಗ ನಗರದಲ್ಲಿ 2024ರ ಜುಲೈನಲ್ಲಿ 5 ಪ್ರಕರಣ ಮತ್ತು ಜನವರಿ 2024 ರಿಂದ ಜುಲೈ 10 ರವರೆಗೆ ಒಟ್ಟು 85 ಪ್ರಕರಣಗಳು ವರದಿಯಾಗಿವೆ. ಯಾವುದೇ ಸಾವು ನೋವು ಸಂಭವಿಸಿರುವುದಿಲ್ಲ ಎಂದರು.

ಆರೋಗ್ಯ ಇಲಾಖೆ ಮಾರ್ಗದರ್ಶನದಂತೆ ಪ್ರತಿ ಶುಕ್ರವಾರ ಎಲ್ಲಾ ಮನೆಗಳಲ್ಲಿ ಒಣ ದಿನ ಆಚರಣೆ ಮಾಡಲಾಗುವುದು. ಎಲ್ಲಾ ಮನೆಗಳಲ್ಲಿ ನೀರು ಸಂಗ್ರಹಿಸುವ ಪರಿಕರಗಳು ಡ್ರಮ್, ಬ್ಯಾರೆಲ್, ತೊಟ್ಟಿ ಸ್ವಚ್ಛವಾಗಿ ತೊಳೆದು ಒಣಗಿಸಿ ನಂತರ ನೀರು ಸಂಗ್ರಹಿಸಲಾಗುವುದು. ಇದರಿಂದ ಸೊಳ್ಳೆಗಳ ಸಂತಾನೋತ್ಪತ್ತಿ ಕಡಿಮೆಯಾಗಿ ಡೆಂಘೀ ಪ್ರಕರಣಗಳು ಇಳಿಮುಖವಾಗುತ್ತವೆ ಎಂದರು.

ಡಯಟ್ ಉಪ ಪ್ರಾಂಶುಪಾಲ ಅಶ್ವತ್ಥ ನಾರಾಯಣ, ಉಪನ್ಯಾಸಕರಾದ ಪೂರ್ಣಿಮಾ, ನಿತ್ಯಾನಂದ ಬಿ.ಎನ್, ಪ್ರಶಾಂತ್ ಕೆ.ಜೆ, ರಾಘವೇಂದ್ರ ಎನ್, ಲಿಂಗರಾಜು ಆರ್, ಆರೋಗ್ಯ ಮೇಲ್ವಿಚಾರಣಾ ಅಧಿಕಾರಿ ಸುರೇಶ್ ಬಾಬು, ಚಿತ್ರದುರ್ಗ ತಾಲೂಕಿನ ವಿವಿಧ ಶಾಲೆಗಳ 30ಕ್ಕೂ ಹೆಚ್ಚು ವಿಜ್ಞಾನ ಶಿಕ್ಷಕರು, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಳಲಿ ಶ್ರೀನಿವಾಸ, ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...