ಹಳೆಯ ವಿದ್ಯಾರ್ಥಿಗಳೇ ಶಿಕ್ಷಣ ಸಂಸ್ಥೆಯ ಕೀರ್ತಿ ಕಳಶ: ಡಾ. ಕಾಳೆ

KannadaprabhaNewsNetwork |  
Published : Apr 13, 2026, 02:15 AM IST
ಕಾರ್ಯಕ್ರಮವನ್ನು ಎಂ.ಎ. ಹಿರೇವಡೆಯರ ಉದ್ಘಾಟಿಸಿದರು. | Kannada Prabha

ಸಾರಾಂಶ

ಇತ್ತೀಚಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳಲ್ಲಿ ಗುರುವಿನ ಬಗೆಗಿನ ಕಳಕಳಿ ಕಡಿಮೆಯಾಗುತ್ತಿರುವ ದಿನಮಾನಗಳಲ್ಲಿ ತಾವೆಲ್ಲ ಎರಡು ದಶಕ ಕಳೆದರೂ ಕಲಿತ ಶಿಕ್ಷಣ ಸಂಸ್ಥೆ ಹಾಗೂ ಗುರುವಿನ ಮೇಲಿನ ಗೌರವವನ್ನು ಕಾಯ್ದುಕೊಂಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.

ನರೇಗಲ್ಲ: ಗ್ರಾಮೀಣ ಪ್ರದೇಶದಲ್ಲಿ 23 ವರ್ಷಗಳ ಹಿಂದೆ ನಮ್ಮ ಶಾಲೆಯಲ್ಲಿ ಅಧ್ಯಯನ ಮಾಡಿ ದೇಶದ ವಿವಿಧ ಮೂಲೆ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾ ಕಲಿತ ಶಾಲೆಯ ಕೀರ್ತಿಯನ್ನು ಬಾನೆತ್ತರಕ್ಕೆ ವಿದ್ಯಾರ್ಥಿಗಳು ಕೊಂಡೊಯ್ದಿದ್ದಾರೆ ಎಂದು ಬಸವೇಶ್ವರ ಶಾಲೆಯ ಆಡಳಿತ ಮಂಡಳಿ ಚೇರಮನ್ ಡಾ. ಜಿ. ಕಾಳೆ ಶ್ಲಾಘಿಸಿದರು.ಸ್ಥಳೀಯ ಬಸವೇಶ್ವರ ಕನ್ನಡ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ನಡೆದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.ಇತ್ತೀಚಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳಲ್ಲಿ ಗುರುವಿನ ಬಗೆಗಿನ ಕಳಕಳಿ ಕಡಿಮೆಯಾಗುತ್ತಿರುವ ದಿನಮಾನಗಳಲ್ಲಿ ತಾವೆಲ್ಲ ಎರಡು ದಶಕ ಕಳೆದರೂ ಕಲಿತ ಶಿಕ್ಷಣ ಸಂಸ್ಥೆ ಹಾಗೂ ಗುರುವಿನ ಮೇಲಿನ ಗೌರವವನ್ನು ಕಾಯ್ದುಕೊಂಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದರು.

ಎಂ.ಎ. ಹಿರೇವಡೆಯರ ಮಾತನಾಡಿ, ಹಿಂದಿನ ದಿನಮಾನಗಳಲ್ಲಿ ವಿದ್ಯಾರ್ಥಿ ಹಾಗೂ ಗುರುವಿನ ಮಧ್ಯೆ ಅವಿನಾಭಾವ ಸಂಬಂಧವಿತ್ತು. ಆಗ ಸಿಗುತ್ತಿದ್ದ ಸಂಬಳ ಅಲ್ಪವಾಗಿದ್ದರೂ ವೃತ್ತಿ ಗೌರವ ಅಲ್ಲಿನ ಪ್ರತಿ ಮಕ್ಕಳನ್ನು ತಮ್ಮ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸುವ ಮೂಲಕ ಅವರೆಲ್ಲರಗೂ ಶಿಕ್ಷಣ ಧಾರೆಯರೆಯಲಾಗಿತ್ತು. ಆ ಪ್ರಭಾವವೇ ಇಂದು ಈ ಗುರುವಂದನೆಯ ದಾರಿದೀಪ ಎಂದರು.ವಿದ್ಯಾರ್ಥಿ ಪ್ರತಿನಿಧಿ ಡಾ. ವಿ.ಸಿ. ಇಲ್ಲೂರ ಮಾತನಾಡಿ, ಈ ಶಾಲೆ ನಮ್ಮಂತ ಸಹಸ್ರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದು, ಇಲ್ಲಿನ ಗುರುವಿನ ಋಣ ತೀರಿಸಲಾಗದು ಎಂದರು.

ಈ ವೇಳೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ, ಮುಖ್ಯೋಪಾಧ್ಯಾಯರಾದ ಬಿ.ಜಿ. ಶಿರ್ಸಿ, ಡಾ. ಜೀತೇಂದ್ರ ಮುಗಳಿ, ಪೂರ್ಣಿಮಾ ಕುರಿ ಮಾತನಾಡಿದರು. ವಿದ್ಯಾರ್ಥಿ ಬಳಗದಿಂದ ಅಗಲಿದ 5 ಜನ ಸ್ನೇಹಿತರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. 33 ಜನ ಶಿಕ್ಷಕರನ್ನು ಸನ್ಮಾನಿಸಲಾಯಿತು.ಸಂಜೀವ ಮೇಟಿ ಸ್ವಾಗತಿಸಿದರು. ವಿಜಯಲಕ್ಷ್ಮೀ ಕೊರಧಾನ್ಯಮಠ ಹಾಗೂ ನೌಶಾದ ಬೇಗಂ ನಿರೂಪಿಸಿದರು. ಜ್ಯೋತಿ ಬಸವರಡ್ಡೇರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನವೀಯ ಮೌಲ್ಯ ಬೆಳೆಸಿಕೊಳ್ಳಿ: ಸುಬ್ರಹ್ಮಣ್ಯ ಶ್ರೀ
ಕಾರ್ಕಳ: 19ರಂದು ಮಸ್ತಕಾಭಿಷೇಕ ಕಾರ್ಯಾಲಯ ಉದ್ಘಾಟನೆ