ಮೇಲುಕೋಟೆ: ಮುಚ್ಚಿ ಹೋದ ಶಾಲೆ ನೆನಪಿಸಿಕೊಂಡು ಹಿರಿಯ ವಿದ್ಯಾರ್ಥಿಗಳು

KannadaprabhaNewsNetwork |  
Published : Sep 22, 2026, 02:00 AM IST
20ಕೆಎಂಎನ್ ಡಿ22  | Kannada Prabha

ಸಾರಾಂಶ

ಗಣೇಶ ಉತ್ಸವದ ವೇಳೆ ಕಳೆದ ವರ್ಷ ಕಣ್ಮುಚ್ಚಿದ ಖಾಸಗಿ ಯದುಶೈಲಾ ಪ್ರೌಢಶಾಲೆಯನ್ನು ಸ್ಮರಿಸಿಕೊಂಡಿದ್ದಾರೆ. ಜೊತೆಗೆ ಶತಮಾನದ ಶಾಲೆಯೊಟ್ಟಿಗಿರುವ ನೂತನ ಸರ್ಕಾರಿ ಪ್ರೌಢಶಾಲೆ ಅಭಿವೃದ್ಧಿತ್ತಸಾಗಲಿ ಎಂದೂ ಪ್ರಾರ್ಥಿಸಿದ್ದಾರೆ. ಸೆಪ್ಟಂಬರ್ 27ರಂದು ಗಣಪತಿ ವಿಸರ್ಜನೆ ಅಂಗವಾಗಿ ಅನ್ನಸಂತರ್ಪಣೆ ಏರ್ಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಮೇಗಲಕೇರಿಯಲ್ಲಿ ಭಜನೆ ಮನೆಯಲ್ಲಿ ಸರ್ವಾತ್ಮ ಮಿತ್ರ ಬಳಗ ಮುಚ್ಚಿ ಹೋದ ಖಾಸಗಿ ಅನುದಾನಿತ ಶಾಲೆಯನ್ನು ನೆನಪಿಸಿಕೊಂಡು ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ವಿಭಿನ್ನತೆಯೊಂದಿಗೆ ಶೈಕ್ಷಣಿಕ ಸಂದೇಶ ನೀಡಿದೆ.

ಮೇಗಲಕೇರಿಯ ಸರ್ವಾತ್ಮ ಮಿತ್ರ ಬಳಗದ ಹಿರಿಯ ವಿದ್ಯಾರ್ಥಿಗಳು ಸೇರಿ ಮುಚ್ಚಿ ಹೋಗಿರುವ ಯದುಶೈಲಾ ಶಾಲೆಯ ಪ್ರತಿರೂಪ ಮಾಡಿ ಮಧ್ಯೆ ಗಣಪತಿಯನ್ನು ಕೂರಿಸಿ ಶಾಲೆ ಶೈಕ್ಷಣಿಕ ಸೇವೆ ನೆನಪಿಸಿಕೊಂಡಿದ್ದಾರೆ.

ಮೇಗಲಕೇರಿ ಭಜನೆ ಮನೆಯಲ್ಲಿ ಸರ್ವಾತ್ಮ ಮಿತ್ರ ಬಳಗ ಪ್ರತಿವರ್ಷ ವಿಭಿನ್ನ ಕಲ್ಪನೆಯ ಮಾದರಿಯ ನಡುವೆ ಗಣೇಶನನ್ನು ಪ್ರತಿಷ್ಠಾಪಿಸುವ ಸಂಪ್ರದಾಯ ರೂಢಿಸಿಕೊಂಡಿದ್ದು, ಈ ವರ್ಷ ಮುಚ್ಚಿಹೋಗಿರುವ ಶಾಲೆಯನ್ನು ನೆನಪಿಸಿಕೊಂಡು ಶಾಲೆ ಆರಂಭದ ವರ್ಷ 1950 ಹಾಗೂ ಈವರೆಗೆ ಶಾಲೆಯಲ್ಲಿ ವ್ಯಾಸಂಗ ಮಾಡಿದ 19,733 ವಿದ್ಯಾರ್ಥಿಗಳ ಸಂಖ್ಯೆಯನ್ನು ಶಾಲಾ ಕಟ್ಟಡದ ಮಾದರಿಯ ಮೇಲೆ ಬರೆದು ಮಧ್ಯೆ ಗಣಪನನ್ನು ಸ್ಥಾಪಿಸಿದ್ದಾರೆ.

ಗಣೇಶ ಉತ್ಸವದ ವೇಳೆ ಕಳೆದ ವರ್ಷ ಕಣ್ಮುಚ್ಚಿದ ಖಾಸಗಿ ಯದುಶೈಲಾ ಪ್ರೌಢಶಾಲೆಯನ್ನು ಸ್ಮರಿಸಿಕೊಂಡಿದ್ದಾರೆ. ಜೊತೆಗೆ ಶತಮಾನದ ಶಾಲೆಯೊಟ್ಟಿಗಿರುವ ನೂತನ ಸರ್ಕಾರಿ ಪ್ರೌಢಶಾಲೆ ಅಭಿವೃದ್ಧಿತ್ತಸಾಗಲಿ ಎಂದೂ ಪ್ರಾರ್ಥಿಸಿದ್ದಾರೆ. ಸೆಪ್ಟಂಬರ್ 27ರಂದು ಗಣಪತಿ ವಿಸರ್ಜನೆ ಅಂಗವಾಗಿ ಅನ್ನಸಂತರ್ಪಣೆ ಏರ್ಪಡಿಸಿದ್ದಾರೆ.

1950ರಲ್ಲಿ ದೇವಾಲಯದ ಹಿರಿಯ ಕೈಂಕರ್ಯ ಕೈಂಕರ್ಯಪರರು ಯದುಶೈಲಾ ಎಂಬ ಖಾಸಗಿ ಪ್ರೌಢಶಾಲೆ ಆರಂಭಿಸಿದ್ದರು, ನಂತರದ ದಿನಗಳಲ್ಲಿ ಶಾಲೆ ಖಾಸಗಿ ಅನುದಾನಿತ ಶಾಲೆಯಾಗಿ ಪರಿವರ್ತಿತವಾಗಿತ್ತು. ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದ ಖಾಸಗಿ ಅನುದಾನಿತ ಪ್ರೌಢಶಾಲೆ 2025-26ನೇ ಸಾಲಿನಲ್ಲಿ ಶೂನ್ಯ ದಾಖಲಾತಿಯಿಂದ ಮುಚ್ಚಿಹೋಗಿತ್ತು.

ಈ ನಡುವೆ ಹಳೆಯ ಖಾಸಗಿ ಶಾಲೆಯನ್ನು ವಿದ್ಯಾರ್ಥಿಗಳು ನೆನಪು ಮಾಡಿಕೊಂಡು ಸರ್ಕಾರಿ ಶಾಲೆ ಅಭಿವೃದ್ಧಿಗೆ ಸಂದೇಶ ನೀಡಿದ್ದಾರೆ.

ಸಾವಿರಾರು ಜನರಿಗೆ ಶಿಕ್ಷಣ ನೀಡಿ ಜೀವನೋಪಾಯ ರೂಪಿಸಿದ ಮೇಲುಕೋಟೆ ಯದುಶೈಲಾ ಪ್ರೌಢಶಾಲೆ ಮುಚ್ಚಿರುವುದು ನೋವಿನ ಸಂಗತಿ. ಗಣೇಶೋತ್ಸವದಲ್ಲಿ ನೆನಪಿಸಿಕೊಂಡಿದ್ದೇವೆ. ಈಗ ಶತಮಾನದ ಶಾಲೆಯಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭವಾಗಿದೆ. ಶಾಲೆ ಅಭಿವೃದ್ಧಿ ಪಡಿಸಿ ಈ ಭಾಗದ ಹಳ್ಳಿಗಳ ಮಕ್ಕಳಿಗೆ ಅನುಕೂಲ ಮಾಡಿಕೊಡಲು ಸರ್ಕಾರದೊಂದಿಗೆ ನಾವೆಲ್ಲ ಕೈಜೋಡಿಸಬೇಕಿದೆ.

ಆಟೋ ರವಿ, ಸದಸ್ಯರು, ಸರ್ವಾತ್ಮ ಮಿತ್ರಬಳಗ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೆಪ್ಟಂಬರ್‌ 25, 26ರಂದು ರಾಜ್ಯ ಗ್ರಂಥಪಾಲಕರ 2ನೇ ಸಮ್ಮೇಳನ
ಇಂದಿನಿಂದ ಆಯುಷ್ ವೈದ್ಯರ ಅನಿರ್ದಿಷ್ಟಾವಧಿ ಮುಷ್ಕರ