ಆಳ್ವಾಸ್: ವರ್ಷದ 4ನೇ ನೇತ್ರ ತಪಾಸಣಾ ಉಚಿತ ಶಿಬಿರ

KannadaprabhaNewsNetwork |  
Published : Jun 19, 2025, 11:49 PM IST
ಆಳ್ವಾಸ್: ವರ್ಷದ  4ನೇ ಉಚಿತ ನೇತ್ರ ತಪಾಸಣಾ ಶಿಬಿರ | Kannada Prabha

ಸಾರಾಂಶ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಮಂಗಳೂರಿನ ಎ.ಜೆ. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಈ ವರ್ಷದ 4ನೇ ನೇತ್ರ ತಪಾಸಣಾ ಶಿಬಿರ ನಡೆಯಿತು. ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಮಂಗಳೂರಿನ ಎ.ಜೆ. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಈ ವರ್ಷದ 4ನೇ ನೇತ್ರ ತಪಾಸಣಾ ಶಿಬಿರ ನಡೆಯಿತು. ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಉದ್ಘಾಟಿಸಿದರು.ಈ ಮೊದಲು ನಡೆಸಿದ ಒಂಬತ್ತು ಶಿಬಿರಗಳಲ್ಲಿ 1,478 ಜನರಿಗೆ ಕಣ್ಣಿನ ತಪಾಸಣೆ ನಡೆಸಲಾಗಿದ್ದು, 784 ಜನರಿಗೆ ಉಚಿತ ಕನ್ನಡಕ ನೀಡಲಾಗಿತ್ತು. ಈ ಪೈಕಿ 221 ಜನರಿಗೆ ಶಸ್ತ್ರಚಿಕಿತ್ಸೆಯ ಶಿಫಾರಸ್ಸು ಮಾಡಲಾಗಿದ್ದು, 109 ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದವು.ಈ ವರ್ಷವೂ ಇದೇ ಹಾದಿಯಲ್ಲಿ ಸಾಗುತ್ತಾ ಈಗಾಗಲೇ ಮೂರು ಶಿಬಿರಗಳು ನಡೆದಿದ್ದು, ಮಂಗಳವಾರ ನಡೆದ 4ನೇ ಶಿಬಿರವು ಸೇರಿದಂತೆ ಒಟ್ಟು 470 ಜನರು ತಪಾಸಣೆಗೆ ಒಳಪಟ್ಟಿದ್ದಾರೆ. 235 ಜನರಿಗೆ ಕನ್ನಡಕ ವಿತರಿಸಲಾಗಿದೆ ಮತ್ತು 45 ಜನರಿಗೆ ಶಸ್ತ್ರಚಿಕಿತ್ಸೆ ಶಿಫಾರಸ್ಸು ಮಾಡಲಾಗಿದೆ. ಇವರಲ್ಲಿ 11 ಜನರಿಗೆ ಶಸ್ತ್ರಚಿಕಿತ್ಸೆ ಪೂರ್ಣಗೊಂಡಿದೆ ಎಂದು ಡಾ. ಆಳ್ವ ತಿಳಿಸಿದರು. ಮುಖ್ಯ ಅತಿಥಿಯಾಗಿ ಎ.ಜೆ. ವೈದ್ಯಕೀಯ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಶರಣ್ ಶೆಟ್ಟಿ ಭಾಗವಹಿಸಿದ್ದರು. ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಸಜೀತ್ ಎಂ. , ಮೂಡುಬಿದಿರೆ ಪುರಸಭೆಯ ಮುಖ್ಯ ಆಡಳಿತಾಧಿಕಾರಿ ಇಂದು ಎಂ., ಬಂಟರ ಸಂಘ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಎಸ್. ಹೆಗ್ಡೆ , ಸಿ.ಎಚ್. ಮೆಡಿಕಲ್ಸ್ ನ ಸಿ. ಎಚ್ ಗಫೂರ್, ಉದ್ಯಮಿಗಳಾದ ಅಬ್ದುಲ್ ಹಮೀದ್, ಸದಾಶಿವ ರಾವ್ ನೆಲ್ಲಿಮಾರು, ನವೀನ್ ಟಿ.ಆರ್., ಶಂಕರ್ ಎ. ಕೋಟ್ಯಾನ್, ಜೈನ್ ಮಿಲನ್ ಸಂಘಟನೆಯ ಅನಂತವೀರ್ ಜೈನ್ , ವಿವಿಧ ಸಮುದಾಯ ಸಂಘಟನೆಗಳ ಹರೀಶ್ ಎಂ.ಕೆ , ಯೋಗೇಶ್ ಭಂಡಾರಿ ಮತ್ತು ಕೆ. ಎನ್. ಪ್ರಕಾಶ್ ಭಂಡಾರಿ, ಉಮೇಶ್ ನಾಯ್ಕ ಉಪಸ್ಥಿತರಿದ್ದರು. ಡಾ ವಿಕ್ರಮ್ ಕುಮಾರ್ ಸ್ವಾಗತಿಸಿ, ಕಿರಿಯ ವೈದ್ಯ ಸುಮಂತ್ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾರ್ಥಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಇಷ್ಟವಿಲ್ಲ: ಡಿಸಿಎಂ
ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ-ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಒತ್ತಾಯ