ದೌರ್ಜನ್ಯ ಮೆಟ್ಟಿನಿಂತಾಗ ಸಮಾಜ ಸುಧಾರಣೆ ಸಾಧ್ಯ

KannadaprabhaNewsNetwork |  
Published : Jun 19, 2025, 11:49 PM IST
ಶಿರ್ಷೆಕೆ- 19ಕೆ.ಎಂ.ಎಲ್.ಆರ್.3-ಮಾಲೂರಿನ ತಾಲೂಕು ಕಚೇರಿ ಹಿಂಭಾಗದಲ್ಲಿ ಪ್ರಾರಂಭಗೊಂಡ  ಅಂಬೇಡ್ಕರ್‌ ವಿವಿಧೋದ್ದೇಶ ಸಹಕಾರ ಸಂಘ ಹಾಗೂ ಸಾರ್ವಜನಿಕರ ಸಮಸ್ಯೆಗಳ ಪರಿಷ್ಕರಣಾ ಸಮಿತಿ ಕಚೇರಿ ಉದ್ಘಾಟನೆ ನೇರವೇರಿಸಿದ ಬಂಗಾರಪೇಟೆ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಅವರನ್ನು ಅತ್ಮೀಯವಾಗಿ ಅಭಿನಂದಿಸಲಾಯಿತು.ಬ್ಯಾಲಹಳ್ಳಿ ಗೋವಿಂದೇ ಗೌಡ,ಹೂಡಿ ವಿಜಯಕುಮಾರ್‌,ಸಿದ್ದಾರ್ಥ ಆನಂದ್‌ ಇನ್ನಿತರರು ಇದ್ದರು. | Kannada Prabha

ಸಾರಾಂಶ

ಸಮಾಜ ಸೇವೆಯಲ್ಲಿ ಅಡೆತಡೆಗಳು ಬರುವುದು ಸಾಮಾನ್ಯ. ಹಣವುಳ್ಳವರು ಪ್ರಭಾವಿಗಳಾಗಿ ದಬ್ಬಾಳಿಕೆ ಮಾಡುತ್ತಾರೆ. ಆನೇಕರು ನಿಂದಿಸಬಹುದು, ದೌರ್ಜನ್ಯ ನಡೆಸಬಹುದು. ಆದರೆ ಇವೆಲ್ಲವನ್ನು ಮೆಟ್ಟಿ ನಿಂತಾಗ ಮಾತ್ರ ಸಮಾಜದಲ್ಲಿ ಸುಧಾರಣೆ ತರಲು ಸಾಧ್ಯ. ಯಾವುದೇ ಕಾರಣಕ್ಕೂ ನ್ಯಾಯ ಪರವಾದ ಹೆಜ್ಜೆಯನ್ನು ಹಿಂದಕ್ಕೆ ಇಡುವಂತಹ ಕೆಲಸ ಮಾಡಬಾರ

ಕನ್ನಡಪ್ರಭ ವಾರ್ತೆ ಮಾಲೂರು

ಸ್ಥಾಪಿಸಿದ ಸಂಘದ ಉದ್ದೇಶವನ್ನೇ ಮರೆತು ಸ್ವಾರ್ಥಕ್ಕಾಗಿ ಸಂಘ ಕಟ್ಟುವ ಈ ಕಾಲಘಟದಲ್ಲಿ ಸಾರ್ವನಿಕರ ಸಮಸ್ಯೆಗಳ ಪರಿಷ್ಕರಣಾ ಸಮಿತಿ ಪ್ರಾರಂಭಿಸುತ್ತಿರುವುದು ದಮನಿತರಿಗೆ ಶುಭ ಸೂಚನೆಯಾಗಿದೆ. ಈ ಸಂಘಟನೆಯ ಅಭಿವೃದ್ಧಿಗಾಗಿ ಹೆಚ್ಚಿನ ಸಹಕಾರ ನೀಡಲಾಗುವುದು ಎಂದು ಬಂಗಾರಪೇಟೆ ಶಾಸಕ ಎಸ್.ಎನ್‌.ನಾರಾಯಣಸ್ವಾಮಿ ಹೇಳಿದರು. ಅವರು ಇಲ್ಲಿನ ತಾಲೂಕು ಕಚೇರಿಯ ಹಿಂಭಾಗದಲ್ಲಿರುವ ಅಂಬೇಡ್ಕರ್‌ ವಿವಿಧೋದ್ದೇಶ ಸಹಕಾರ ಸಂಘ ಹಾಗೂ ಸಾರ್ವಜನಿಕರ ಸಮಸ್ಯೆಗಳ ಪರಿಷ್ಕರಣಾ ಸಮಿತಿಯ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.

ಅಡೆತಡೆ ಮೆಟ್ಟಿ ನಿಂತಾಗ ಸುಧಾರಣೆ

ಸಮಾಜ ಸೇವೆಯಲ್ಲಿ ಅಡೆತಡೆಗಳು ಬರುವುದು ಸಾಮಾನ್ಯ. ಹಣವುಳ್ಳವರು ಪ್ರಭಾವಿಗಳಾಗಿ ದಬ್ಬಾಳಿಕೆ ಮಾಡುತ್ತಾರೆ. ಆನೇಕರು ನಿಂದಿಸಬಹುದು, ದೌರ್ಜನ್ಯ ನಡೆಸಬಹುದು. ಆದರೆ ಇವೆಲ್ಲವನ್ನು ಮೆಟ್ಟಿ ನಿಂತಾಗ ಮಾತ್ರ ಸಮಾಜದಲ್ಲಿ ಸುಧಾರಣೆ ತರಲು ಸಾಧ್ಯ. ನಾನು ಸಹ ಇಂತಹ ಆನೇಕ ನಿಂದನೆ ,ದೌರ್ಜನ್ಯವನ್ನು ಎದುರಿಸಿದ ನಂತರ ಜನತೆ ನಮಗೆ ಸಮಾಜ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಜನರ ದನಿಯಾಗುವ ನೀವು ಒಂಬಟ್ಟಿ ಅಲ್ಲ. ನಿಮ್ಮ ಜತೆ ನಾವೀದ್ದೇವೆ. ಯಾವುದೇ ಕಾರಣಕ್ಕೂ ನ್ಯಾಯ ಪರವಾದ ಹೆಜ್ಜೆಯನ್ನು ಹಿಂದಕ್ಕೆ ಇಡುವಂತಹ ಕೆಲಸ ಮಾಡಬೇಡಿ ಎಂದರು.

ಸರ್ಕಾರಿ ಭೂಮಿ ಮಾಯಸ್ವಾಭಿಮಾನಿ ಜನತಾ ಪಕ್ಷದ ಅಧ್ಯಕ್ಷ ಹೂಡಿ ವಿಜಯಕುಮಾರ್‌ ಮಾತನಾಡಿ, ತಾಲೂಕಿನ ತೊರ್ನಹಳ್ಳಿ ಸಮೀಪ 18 ಎಕರೆ ಸರ್ಕಾರಿ ಜಮೀನನ್ನು ಶಾಸಕರ ಬೆಂಬಲಿಗರ ಹೆಸರಿನಲ್ಲಿ ಅಕ್ರಮವಾಗಿ ಆರ್.ಟಿ.ಸಿ.ಮಾಡಿ ಕುಳ್ಳಿರಿಸಿದ್ದಾರೆ. ಈ ಮೂಲಕ ಕೋಟ್ಯಾಂತರ ರೂ.ಗಳ ಜಮೀನನ್ನು ಗುಳುಂ ಮಾಡುವಂತಹ ಕೆಲಸ ಮಾಡುತ್ತಿದ್ದಾರೆ.ಇದಕ್ಕೆ ತಾಲೂಕು ಆಡಳಿತವು ಸಹಕಾರ ನೀಡುತ್ತಿದೆ. ಇನ್ನೂ ಎರಡು ಮೂರು ವರ್ಷದಲ್ಲೇ ತಾಲೂಕಿನಲ್ಲಿ ಸರ್ಕಾರಿ ಜಮೀನನ್ನು ಹುಡುಕುವಂತಾಗುತ್ತದೆ ಎಂದರು.

ಇನ್ನೂ ಶಾಸಕ ನಂಜೇಗೌಡರು 3 ನೇ ಬಾರಿಗೆ ಆಯ್ಕೆಯಾಗಿದ್ದಾರೆ. ರಾಜಕೀಯವಾಗಿ ಹಲವು ದಶಕಗಳಿಂದ ಎಲ್ಲಾ ಹುದ್ದೆಗಳನ್ನು ನಿರ್ವಹಿಸಿದ್ದೇನೆ ಎಂದು ಪ್ರತಿ ಭಾಷಣದಲ್ಲೂ ಹೇಳುವ ಶಾಸಕರು ನಿಮ್ಮ ಪಕ್ಷದ ಅರ್ಹರಿಗೆ ಏಕೆ ಅವಕಾಶ ಮಾಡಿಕೊಡಲಿಲ್ಲ ಎಂದು ಪ್ರಶ್ನಿಸಿದ ಹೂಡಿ, ಶಾಸಕನಾಗಿರುವಾಗ ಡೇರಿ ಚುನಾವಣೆಗೆ ಬೇರೆ ಕಾರ್ಯಕರ್ತರಿಗೆ ನೀಡಬೇಕಾಗಿತ್ತು ಎಂದರು.

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ

ಸಂರ್ಪೂಣ ಹಾಳಾಗಿದ್ದ ಹೊಸೂರು ರಸ್ತೆ ಡಾಂಬರೀಕರಣ ಮಾಡಲು ಶಾಸಕರು ವಿಫಲವಾಗಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತಾಶಕ್ತಿಯಡಿಯಲ್ಲಿ 4 ಲೋಡ್‌ ಜಲ್ಲಿ ಹಾಕಿಸಿದ್ದನೇ. ಇದನ್ನೇ ಮಹಾಅಪರಾಧ ಎಂಬುಂತೆ ಪೊಲೀಸರನ್ನು ಛೋ ಬಿಟ್ಟ ಶಾಸಕರು ತಮ್ಮ ಹಿಂಬಾಲಕರ ಮೂಲಕ ನನ್ನ ವಿರೋಧ ಮಾತನಾಡಿಸಿದ್ದಾರೆ. ತಾಲೂಕಿನ ಜನತೆ ನನ್ನ ಬೆಂಬಲಕ್ಕೆ ಇರುವರಿಗೂ ಇಂತಹ ದಬ್ಬಾಳಿಕೆಗಳಿಗೆ ಹೆದರುವ ಜಾಯಮಾನ ನನ್ನದಲ್ಲ. ತಾಲೂಕಿನಲ್ಲಿ ಹೆಚ್ಚಾಗಿರುವ ಭ್ರಷ್ಠಾಚಾರಕ್ಕೆ ಕಡಿವಾಣ ಹಾಕಲು ಸಂಘಟನೆ ಮುಂದಾಗಬೇಕು.ನಿಮ್ಮ ಜತೆ ನಾನಿರುತ್ತೇನೆ ಎಂದರು.ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇ ಗೌಡ,ಬಂಗಾರಪೇಟೆ ಪುರಸಭೆ ಮಾಜಿ ಅಧ್ಯಕ್ಷ ಚಂದ್ರಾ ರೆಡ್ಡಿ ಇನ್ನಿತರರು ಮಾತನಾಡಿದರು.ಸಿದ್ದಾರ್ಥ ಆನಂದ್‌,ಕುಡಿಯನೂರು ದೇವರಾಜ್‌ . ಗಜಸೇನೆ ಪೌಂಡೇಶನ್‌ ಅಧ್ಯಕ್ಷ ಗಜೇಂದ್ರ,ಕರವೇ ತಾಲೂಕು ಅಧ್ಯಕ್ಷ ಶ್ರೀನಿವಾಸ್‌ ,ಮುಖಂಡರಾದ ಅಗ್ರೀ ನಾರಾಯಣಪ್ಪ ,ಸೊಣ್ಣೇಗೌಡ,ಬಿ.ಆರ್.ವೆಂಕಟೇಶ್‌,ಸೊಣ್ಣೂರು ವೆಂಕಟೇಶ್‌ ,ಭದ್ರಪ್ಪ.ಚೇತನ್‌ ಇನ್ನಿತರರು ಇದ್ದರು.

PREV

Recommended Stories

ಕಾಂಗ್ರೆಸ್ ಸರ್ಕಾರದಿಂದ ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಒತ್ತು: ಶಾಸಕ ರಮೇಶ್‌ ಬಂಡಿಸಿದ್ದೇಗೌಡ
ಸರ್ಕಾರಿ ಶಾಲೆ ಉನ್ನತಿಗೆ ಎಲ್ಲರ ಸಹಕಾರ ಅಗತ್ಯ