ಕನ್ನಡಪ್ರಭ ವಾರ್ತೆ ಮೂಡುಬಿದಿರೆ
‘ಬದುಕಿನಲ್ಲಿ ಎಲ್ಲರೂ ನಟರೇ. ಆದರೆ, ಅಭಿನಯ ವಿಭಿನ್ನ’. ಮಕ್ಕಳಿಗೆ ಸಮಯ ನೀಡುವುದು ಎಂದರೆ ಅವರ ಭಾವನೆಗಳಿಗೆ ಸ್ಪಂದಿಸುವುದು, ಮುಕ್ತವಾಗಿ ಸಂವಹನ ನಡೆಸುವುದು. ಮಕ್ಕಳಲ್ಲಿ ಅಡಗಿರುವ ಆತಂಕ, ಭಯ, ತುಂಟಾಟ, ಪ್ರತಿಭೆಯನ್ನು ಸರಿಯಾದ ಸಮಯದಲ್ಲಿ ಗುರುತಿಸುವುದು ಬಹಳ ಅವಶ್ಯಕ ಎಂದರು.
ವಿದ್ವಾನ್ ಚಂದ್ರಶೇಖರ ನಾವಡ ಮಾತನಾಡಿ, ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹೆತ್ತವರು ತಮ್ಮ ಮಕ್ಕಳ ವ್ಯಕ್ತಿತ್ವ ಬದಲಾವಣೆ ಅವಲೋಕಿಸಬೇಕು. ವಿದ್ಯಾರ್ಥಿಗಳು ಶಿಬಿರದ ಅನುಭವವನ್ನು ಒಳ್ಳೆಯ ರೀತಿಯಲ್ಲಿ ವಿನಿಯೋಗಿಸಿಕೊಂಡು ದೇಶದ ಸತ್ಪ್ರಜೆಗಳಾಗಿ ರೂಪುಗೊಳ್ಳುವಂತಾಗಲಿ ಎಂದು ಆಶಿಸಿದರು.ಶಿಬಿರದ ನಿರ್ದೇಶಕ, ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನ್ ರಾಂ ಸುಳ್ಯ ಮಾತನಾಡಿ, ಅಭಿನಯನ ಪ್ರಧಾನ ಎಂಬುದು ಸಂವಹನಕ್ಕೆ ಸಂಬಂಧಿಸಿದ ಕಲೆ. ಹಾಡು ಕುಣಿತ, ನಾಟಕ ಕಲೆಯ ಕಲಿಕೆಯಲ್ಲಿ ತೊಡಗಿಕೊಳ್ಳುವುದರ ಜೊತೆಗೆ, ಹಿರಿಯರನ್ನು ಗೌರವಿಸುವ, ಎಲ್ಲರೊಂದಿಗೆ ಬೆರೆತುಕೊಳ್ಳುವ ಮನೋಭಾವವನ್ನು ಬೆಳಸಲಿದೆ ಎಂದರು.
ಚಿಣ್ಣರ ಮೇಳದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 6-15 ವರ್ಷದ ಸುಮಾರು 138 ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಶಿಬಿರದಲ್ಲಿ ಮಕ್ಕಳಿಗೆ ಕ್ರಾಫ್ಟ್ ವರ್ಕ್, ನವರಸ ಕಲಿಕೆ, ಸ್ವರಾಕ್ಷರ ಅಭಿನಯನ, ರಂಗಗೀತೆ, ನಾಟಕ ತರಬೇತಿ, ವಿವಿಧ ವಾದ್ಯಗಳ ಕಲಿಕಾ ಪರಿಚಯ, ರಂಗಭೂಮಿ ಆಟಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುವುದರೊಂದಿಗೆ ಮಕ್ಕಳ ಪ್ರತಿಭಾ ಅನಾವರಣಗೊಳಿಸುವ ಪ್ರಯತ್ನ ನಡೆಯಲಿದೆ ಎಂದರು.ಕಲಾವಿದ ತಾರಾನಾಥ ಕೈರಂಗಳ ಮತ್ತಿತರರು ಇದ್ದರು. ಸುಮನಾ ಪ್ರಸಾದ್ ಆಶಯ ಗೀತೆ ಹಾಡಿದರು. ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ ಯೋಗೀಶ್ ಕೈರೋಡಿ ನಿರೂಪಿಸಿದರು.