ಮಂಗಳೂರು: ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಇಂದು ಹಲವಾರು ಗಂಭೀರವಾದ ಸಮಸ್ಯೆಗಳು ಇವೆ. ಅವುಗಳನ್ನು ಬಗೆಹರಿಸಲು ಸರ್ಕಾರ ಉತ್ತಮವಾಗಿ ಸ್ಪಂದಿಸಬೇಕು. ಸಾರಿಗೆ ಇಲಾಖೆ, ಅರಣ್ಯ ಇಲಾಖೆ, ವಸತಿ ಇಲಾಖೆ, ಪರಿಸರ ಇಲಾಖೆ ಹೀಗೆ ಬೇರೆ ಬೇರೆ ಸರ್ಕಾರಿ ಇಲಾಖೆಗಳು ಅನಗತ್ಯವಾಗಿ ಶಿಕ್ಷಣ ಸಂಸ್ಥೆಗಳಿಗೆ ತೊಂದರೆಯನ್ನು ನೀಡಬಾರದು. ಶಿಕ್ಷಣ ಸಂಸ್ಥೆಗಳು ತಪ್ಪಿದಾಗ ಸೂಕ್ತವಾದ ಪರಿಹಾರಗಳೊಂದಿಗೆ ಮಾರ್ಗದರ್ಶನವನ್ನು ನೀಡಬೇಕು ಎಂದು ಕರ್ನಾಟಕ ಅನುದಾನ ರಹಿತ ಖಾಸಗಿ ಕಾಲೇಜು ಆಡಳಿತ ಮಂಡಳಿಗಳ ಸಂಘ(ಕುಪ್ಮಾ) ರಾಜ್ಯ ಸಮಿತಿ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದ್ದಾರೆ. ಇತ್ತೀಚೆಗೆ ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಕರ್ನಾಟಕ ಅನುದಾನ ರಹಿತ ಖಾಸಗಿ ಕಾಲೇಜು ಆಡಳಿತ ಮಂಡಳಿಗಳ ಸಂಘ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಚಿಂತನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕುಪ್ಮಾ ರಾಜ್ಯ ಸಮಿತಿ ಕಾರ್ಯದರ್ಶಿ ಪ್ರೊ.ನರೇಂದ್ರ ಎಲ್. ನಾಯಕ್ ಅವರು ಖಾಸಗಿ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಪರಿಹಾರಗಳು ವಿಷಯದ ಮೇಲೆ ಮಾತನಾಡಿದರು.
ಕುಪ್ಮಾ ಸಂಘಟನೆಯನ್ನು ಸಂಘಟಿಸಿರುವ ಕಾರಣ ಮೆನೇಜ್‌ಮೆಂಟ್‌ಗಳ ನಡುವೆ ಯಾವುದೇ ರೀತಿಯ ತಪ್ಪು ತಿಳುವಳಿಕೆಗಳಿದ್ದರೆ ಅದು ಕಡಿಮೆಯಾಗುತ್ತದೆ. ಒಬ್ಬರಿಗೊಬ್ಬರು ತಮ್ಮ ಸಮಸ್ಯೆಗಳನ್ನು ಆಲಿಸುವ ಮತ್ತು ಬಗೆಹರಿಸಿಕೊಳ್ಳುವ, ಆಪ್ತವಾಗಿ ಹಂಚಿಕೊಳ್ಳುವ ಒಂದು ಒಳ್ಳೆಯ ವೇದಿಕೆಯಾಗಿದೆ. ಕುಪ್ಮಾ ಸಂಘಟನೆಯನ್ನು ಕಟ್ಟುವುದಕ್ಕಿಂತ ಮುಂಚೆ ನಮ್ಮೆಲ್ಲರ ನಡುವೆ ಒಂದು ರೀತಿಯ ತಪ್ಪು ತಿಳುವಳಿಕೆಗಳಿದ್ದವು. ಅದು ಕುಪ್ಮಾವನ್ನು ಸಂಘಟಿಸಿದ ಕಾರಣ ದೂರವಾಗಿದೆ ಎಂದರು. ಏಕರೂಪದ ಫಲಿತಾಂಶ ಕ್ರಮ ಇರಲಿ: ಶಿಕ್ಷಣ ವ್ಯವಸ್ಥೆಯಲ್ಲಿ ಕಾಲಕಾಲಕ್ಕೆ ಹಲವಾರು ಬದಲಾವಣೆಗಳು ಬಂದ ಕಾರಣ ಅದರದ್ದೇ ಆದ ಸಮಸ್ಯೆಗಳು ಸಹ ಉದ್ಭವವಾಗುತ್ತವೆ. ಆ ಸಮಸ್ಯೆಗಳನ್ನು ಕುಪ್ಮಾದ ಮೂಲಕ ಬಗೆಹರಿಸಿಕೊಂಡಿದ್ದೇವೆ. ಶಿಕ್ಷಣ ಸಂಸ್ಥೆಗಳನ್ನು ನಡೆಸುವ ಆಡಳಿತ ಮಂಡಳಿಯವರು ಕಾನೂನಿನಡಿಯಲ್ಲಿಯೇ ಕ್ರಮಬದ್ಧವಾಗಿ ನಡೆದರೆ ಉತ್ತಮ ಶಿಕ್ಷಣ ಸಂಸ್ಥೆಯನ್ನು ಕಟ್ಟಲು ಸಾಧ್ಯ. ವಿದ್ಯಾರ್ಥಿಗಳಿಗೆ, ಹೆತ್ತವರಿಗೆ ಗುಣಮಟ್ಟದ, ಪರಿಣಾಮಕಾರಿ ಶಿಕ್ಷಣವನ್ನು ನೀಡಿದರೆ ಖಂಡಿತವಾಗಿ ಶಿಕ್ಷಣ ಸಂಸ್ಥೆಗಳು ಬೆಳೆಯಲು ವಿಪುಲವಾದ ಅವಕಾಶಗಳು ಇವೆ. ಪದವಿ ಪೂರ್ವ ಶಿಕ್ಷಣ ಇಲಾಖೆ ನೀಡುವ ವರ್ಗಾವಣೆ ಪತ್ರವನ್ನು ಡಿಜಿಲಾಕರ್ ಮೂಲಕ ವಿದ್ಯಾರ್ಥಿಗಳಿಗೆ ನೇರವಾಗಿ ನೀಡಲು ಕ್ರಮ ಕೈಗೊಂಡಾಗ ಕುಪ್ಮಾ ಇದನ್ನು ವಿರೋಧಿಸಿದ ಕಾರಣ ಇಂದು ಖಾಸಗಿ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಿಗೆ ಈ ಕ್ರಮ ಅನ್ವಯಿಸುವುದಿಲ್ಲ ಎಂದು ಈಗಾಗಲೇ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ. ಇದು ಕುಪ್ಮಾ ಮಾಡಿರುವ ಒಳ್ಳೆಯ ಕೆಲಸದ ಪ್ರತೀಕವಾಗಿದೆ ಎಂದರು.ಆಡಳಿತ್ಮಾಕವಾಗಿ ಪ್ರತಿಯೊಂದು ಶಿಕ್ಷಣ ಸಂಸ್ಥೆಗಳಿಗೂ ಅವರದ್ದೇ ಆದ ಸವಾಲು ಇರುತ್ತವೆ. ಆ ಸವಾಲುಗಳನ್ನು ಎದುರಿಸಲು ಎಲ್ಲ ಶಿಕ್ಷಣ ಸಂಸ್ಥೆಗಳು ಸಮರ್ಥವಾಗಿದೆ. ಆದರೆ ಆ ಸಮಸ್ಯೆಗಳು ಸಾಮೂಹಿಕವಾಗಿದ್ದಾಗ ಕುಪ್ಮಾದಂತಹ ಸಂಘಟನೆ ಅಗತ್ಯವಾಗಿ ಬೇಕು. ಶಿಕ್ಷಣ ಸಂಸ್ಥೆಗಳಿಗೆ ಸಮಸ್ಯೆ ಬಂದಾಗ ನಾವೆಲ್ಲರೂ ಒಗ್ಗಟ್ಟಾಗಿರಬೇಕು. ಪ್ರತಿ ಕಾಲೇಜುಗಳು ಫಲಿತಾಂಶವನ್ನು ಪ್ರಕಟಿಸುವಾಗ ಏಕರೂಪದ ಕ್ರಮವನ್ನು ಅಳವಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ನೈತಿಕತೆಯನ್ನು ಪ್ರದರ್ಶಿಸಬೇಕು ಎಂದು ಹೇಳಿದರು.
ಸರ್ಕಾರ ತಕ್ಷಣಕ್ಕೆ ಸ್ಪಂದಿಸುವ ಮೂಲಕ ಪರಿಹಾರವನ್ನು ನೀಡಬೇಕು ಮತ್ತು ಎಸ್‌ಟಿಪಿಯನ್ನು ಶಿಕ್ಷಣ ಸಂಸ್ಥೆಗಳಲ್ಲಿ
ವಾಣಿ ಕಾಲೇಜಿನ ಆಡಳಿತ ಮಂಡಳಿಯವರು, ಕಾಲೇಜು ಬಸ್ಸುಗಳಲ್ಲಿ ಅಳವಡಿಸುವ ಪ್ಯಾನಿಕ್ ಬಟನ್‌ಗಳ ವಾರ್ಷಿಕ
ಉಪನ್ಯಾಸಕ ಕರುಣಾಕರ ಬಳ್ಕೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.