ಕನಸನ್ನು ನನಸಾಗಿಸುವುದೇ ಆಳ್ವಾಸ್ ಹೆಚ್ಚುಗಾರಿಕೆ: ಡಾ. ಸದಾಕತ್

KannadaprabhaNewsNetwork |  
Published : May 30, 2025, 12:18 AM IST
ಕನಸನ್ನು ನನಸಾಗಿಸುವುದೇ ಆಳ್ವಾಸ್ ಹೆಚ್ಚುಗಾರಿಕೆ: ಡಾ. ಸದಾಕತ್ | Kannada Prabha

ಸಾರಾಂಶ

ವಿದ್ಯಾಗಿರಿಯ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಪಿಯು (ವಿಜ್ಞಾನ) ಪ್ರಥಮ ವರ್ಷದ ವಿದ್ಯಾರ್ಥಿಗಳ ಅಭಿವಿನ್ಯಾಸ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಭವಿಷ್ಯದ ದೊಡ್ಡ ಕನಸಿನೊಂದಿಗೆ ಆಳ್ವಾಸ್ ಸಂಸ್ಥೆಗೆ ಸೇರಿದ್ದೀರಿ, ನಿಮ್ಮ ಕನಸು ನನಸಾಗಿಸುವವರೆಗೆ ಆಳ್ವಾಸ್ ನಿಮ್ಮ ಜತೆ ಸಾಗಲಿದೆ ಎಂದು ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಸದಾಕಾತ್ ಹೇಳಿದರು.ವಿದ್ಯಾಗಿರಿಯ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ ಪಿಯು (ವಿಜ್ಞಾನ) ಪ್ರಥಮ ವರ್ಷದ ವಿದ್ಯಾರ್ಥಿಗಳ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಟ್ಟಕಡೆಯ ವಿದ್ಯಾರ್ಥಿಗೂ ಸಮಾನ ಅವಕಾಶಗನ್ನು ಒದಗಿಸುವುದು ಆಳ್ವಾಸ್‌ನ ಗುರಿಯಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ಕನಸುಗಳನ್ನು ನನಸಾಗಿಸಲು ಆಳ್ವಾಸ್ ಸದಾ ಜತೆಯಾಗಿ ನಿಲ್ಲಲಿದೆ. ಇದಕ್ಕಾಗಿ ಆಡಳಿತ ವರ್ಗ, ಶಿಕ್ಷಕರು, ಶಿಕ್ಷಕೇತರ ವೃಂದ, ಪೋಷಕರು ಮತ್ತು ವಿದ್ಯಾರ್ಥಿಗಳು ಜತೆಗೂಡಿ ಕಾರ್ಯ ನಿರ್ವಹಿಸಬೇಕು ಎಂದರು.ಹತ್ತನೇ ತರಗತಿ ವರೆಗಿನ ಕಲಿಕೆ ವಾರ್ಷಿಕ ಪರೀಕ್ಷೆಯ ಮುಖ್ಯ ಉದ್ದೇಶವನ್ನು ಹೊಂದಿದೆ. ಆದರೆ ಪಿಯು ಶಿಕ್ಷಣ, ಭವಿಷ್ಯದ ವೃತ್ತಿ ಶಿಕ್ಷಣದ ನಿರ್ಧಾರದ ಹಂತ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಳ್ವಾಸ್ ಫಲಿತಾಂಶಗನ್ನು ವಿವರಿಸಿದ ಅವರು, ಯಾವುದೇ ಪರೀಕ್ಷೆಗಳು ಅಸಾಧ್ಯವಲ್ಲ ಪ್ರಯತ್ನಪಟ್ಟರೆ ಎಲ್ಲವು ಸುಲಭ. ಆಳ್ವಾಸ್ ಪದವಿಪೂರ್ವ ಇದಕ್ಕೆ ಜ್ವಲಂತ ಸಾಕ್ಷಿ ಎಂದು ಹೇಳಿದರು.ಕಾರ್ಯಕ್ರಮವನ್ನು ಆಳ್ವಾಸ್ ಪಿಯು ಕಾಲೇಜಿನ ಇಂಗ್ಲಿಷ್ ಉಪನ್ಯಾಸಕ ರಾಜೇಶ್ ಡಿಸೋಜ ನಿರೂಪಿಸಿದರು. ಪಿಯು ಒಂದನೇ ಶೈಕ್ಷಣಿಕ ಬ್ಲಾಕಿನ ಮುಖ್ಯಸ್ಥೆ ಜ್ಯೋತಿ ಎಂ.ಎನ್., ಎರಡನೇ ಬ್ಲಾಕ್ ಮುಖ್ಯಸ್ಥ ಕುಮಾರ್ ಎನ್., ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲೆ ಜಾನ್ಸಿ ಪಿ.ಎನ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ