ಆಳ್ವಾಸ್ ವಿರಾಸತ್‌: ಕೃಷಿಕರ ಮನಗೆದ್ದ ಕೃಷಿ ಉತ್ಪನ್ನ ಮಳಿಗೆ

KannadaprabhaNewsNetwork | Published : Dec 17, 2023 1:45 AM

ಸಾರಾಂಶ

ಆಳ್ವಾಸ್ ವಿರಾಸತ್ ನಲ್ಲಿ ಕೃಷಿ ಉತ್ಪನ್ನ ಗಳ ಮಾರಾಟ ಮಳಿಗೆಯಲ್ಲಿ ಬೆಳ್ತಂಗಡಿ ತಾಲೂಕಿನ ನಾರಾವಿಯ ಜಾನ್ ಡಿಸೋಜ ರವರ ಮಂಗಗಳನ್ನು ಓಡಿಸುವ ಮಾಸ್ಟರ್ ಗನ್, ಪಿಸ್ತೂಲ್, ಅವೆ ಮಣ್ಣಿನ ಒಲೆ, ಬ್ಯಾಟರಿ ಆಧಾರಿತ ಒಲೆ, ಮರ ಏರುವ ಟ್ರೀ ಸೈಕಲ್ ಗಳು ಕೃಷಿಕರ ಮನಗೆದ್ದಿವೆ‌.

ಕನ್ನಡಪ್ರಭ ವಾರ್ತೆ ಕಾರ್ಕಳಆಳ್ವಾಸ್ ವಿರಾಸತ್ ನಲ್ಲಿ ಕೃಷಿ ಉತ್ಪನ್ನ ಗಳ ಮಾರಾಟ ಮಳಿಗೆಯಲ್ಲಿ ಬೆಳ್ತಂಗಡಿ ತಾಲೂಕಿನ ನಾರಾವಿಯ ಜಾನ್ ಡಿಸೋಜ ರವರ ಮಂಗಗಳನ್ನು ಓಡಿಸುವ ಮಾಸ್ಟರ್ ಗನ್, ಪಿಸ್ತೂಲ್, ಅವೆ ಮಣ್ಣಿನ ಒಲೆ, ಬ್ಯಾಟರಿ ಆಧಾರಿತ ಒಲೆ, ಮರ ಏರುವ ಟ್ರೀ ಸೈಕಲ್ ಗಳು ಕೃಷಿಕರ ಮನಗೆದ್ದಿವೆ‌ .

ಅಡಕೆ ಕೃಷಿಕರಿಗೆ ಔಷಧಿ ಸಿಂಪಡಣೆ ಮರವೇರಿ ಅಡಕೆ ಕೊಯ್ಲು ಮಾಡುವುದು ದೊಡ್ಡ ಸವಾಲು. ಈ ಕೌಶಲದ ಕಾರ್ಮಿಕರ ಕೊರತೆ ಜತೆಗೆ ಕೃಷಿ ಕಾರ್ಮಿಕರು ಕ್ಲಪ್ತಕಾಲಕ್ಕೆ ಲಭ್ಯವಾಗದಿರುವುದರಿಂದ ಬೆಳೆಗಾರರು ಹೈರಾಣರಾಗುವುದೇ ಹೆಚ್ಚು.ಈ ಸಮಸ್ಯೆಗೆ ಪರಿಹಾರವಾಗಿ ಹೈಟೆಕ್ ದೋಟಿಗಳು, ಅಡಕೆ ಮರವೇರುವ ಬೈಕುಗಳು, ಇತರ ಉಪಕರಣಗಳು ಬಂದಿವೆ. ಕೆಲವೊಂದು ಕೃಷಿಕರ ಕೈಗೆಟಕುವ ದರದಲ್ಲಿ ಇಲ್ಲ. ದರ ಕಡಿಮೆಯಿದ್ದರೂ ಕೆಲವೊಂದು ತಾಂತ್ರಿಕ ಸಮಸ್ಯೆಗಳು. ಇದನ್ನು ಮನಗಂಡು ಜಾನ್ ಅವರು ಅಡಕೆ ಬೆಳೆಗಾರರಿಗೆ ಅನುಕೂಲವಾಗಬಲ್ಲ ಸರಳವಾದ ‘ಟ್ರಿ ಸೈಕಲ್’ ತಯಾರಿಸಿದ್ದಾರೆ. ಇದರಲ್ಲಿ ಜಾರುವ ಹಾಗೂ ನಯವಾದ ಮರಗಳನ್ನು ಏರಬಹುದಾಗಿದೆ.

ಅದರ ಜೊತೆ ಕಾರ್ಖಾನೆಗಳಲ್ಲಿ ಸಿಗುವ ಮರದ ತುಂಡುಗಳು, ಮರದ ಹುಡಿ ಹಾಗೂ ಹಳ್ಳಿಗಳಲ್ಲಿ ಸಿಗುವ ಒಣ ಕಡ್ಡಿಗಳು ಅಥವಾ ಸಣ್ಣ ಸಣ್ಣ ಕಟ್ಟಿಗೆ ತುಂಡುಗಳನ್ನು ಬಳಸಿಕೊಂಡು ಬ್ಯಾಟರಿ ಚಾಲಿತ ಹೊಗೆ ರಹಿತ ಒಲೆಯನ್ನು ಆವಿಷ್ಕಾರ ಮಾಡಿದ್ದಾರೆ.ಈ ಒಲೆಯಲ್ಲಿ ಶೇ.80 ರಷ್ಟು ಗ್ಯಾಸ್ ಉಳಿತಾಯ ಮಾಡಬಹುದು. ಈಗಾಗಲೇ ಎರಡು ಸಾವಿರಕ್ಕೂ ಹೆಚ್ಚು ಸ್ಟೌವ್‌ಗಳನ್ನು ಮಾರಾಟ ಮಾಡಿದ್ದಾರೆ.

ಮಾಸ್ಟರ್ ಗನ್ ನಲ್ಲಿ ಪರಿಣತಿ: ಕಬ್ಬಿಣದ ಕೊಳವೆ ಮೂಲಕ ತಯಾರಿಸಿದ ಮಾಸ್ಟರ್ ಗನ್ ಪಟಾಕಿ ಹಾಗು ಕಲ್ಲುಗಳನ್ನು ಬಳಸಿ ಕಾಡುಪ್ರಾಣಿಗಳ ಹಾವಳಿಯನ್ನು ತಪ್ಪಿಸಬಹುದಾಗಿದೆ. ಪಟಾಕಿಯ ಸದ್ದಿಗೆ ಮಂಗಗಳಾಗಲಿ ಅಥವಾ ಕಾಡುಪ್ರಾಣಿಗಳಾಗಲಿ ಬೆಚ್ಚಿ ಓಡುತ್ತವೆ ಎನ್ನುತ್ತಾರೆ ಜಾನ್. ಐಟಿಐ ಕಲಿತು ವೇಣೂರಿನಲ್ಲಿ ಜೋವಿನ್ ವುಡ್ ಆ್ಯಂಡ್ ಎಂಜಿನಿಯರಿಂಗ್ ವರ್ಕ್ಸ್ ಎಂಬ ಸಣ್ಣ ಉದ್ಯಮವನ್ನು ಆರಂಭಿಸಿ ಕೃಷಿ ಹಾಗೂ ರೈತರಿಗೆ ಸಂಬಂಧಿಸಿದ ಹೊಸ ಅನ್ವೇಷಣಾ ರೂಪದ ವಸ್ತುಗಳನ್ನು ತಯಾರಿಸುತ್ತಿದ್ದಾರೆ‌

ಗ್ರಾಮೀಣ ಭಾಗಗಳಲ್ಲಿ ಸ್ವ ಉದ್ಯೋಗಕ್ಕೆ ಹೆಚ್ಚಿನ ಮಹತ್ವ ನೀಡಿದರೆ ಉದ್ಯೋಗಾವಕಾಶಗಳು ಹೆಚ್ಚು. ರೈತರಿಗು ಕೈಗೆಟುಕುವ ದರದಲ್ಲಿ ವಸ್ತುಗಳು ಸಿಗಲು ಸಹಕಾರಿಯಾಗಿದೆ. ಪರಿಸರ ಸ್ನೇಹಿ ಉದ್ಯಮಗಳಾಗಿವೆ.

। ಜಾನ್ ಡಿಸೋಜ .

Share this article