ಆಳ್ವಾಸ್ ವಿರಾಸತ್ ವೇದಿಕೆಯಲ್ಲಿ ರಂಜಿಸಿದ ‘ಸ್ಟೆಕೇಟೋ’

KannadaprabhaNewsNetwork |  
Published : Dec 15, 2024, 02:01 AM IST
ಆಳ್ವಾಸ್ ವಿರಾಸತ್ ವೇದಿಕೆಯಲ್ಲಿ ರಂಜಿಸಿದ ‘ಸ್ಟೆಕೇಟೋ’ ನಡೆಯಿತು. | Kannada Prabha

ಸಾರಾಂಶ

30ನೇ ಆಳ್ವಾಸ್ ವಿರಾಸತ್''ನಲ್ಲಿ ಉತ್ತರದ ಹಿಂದೂಸ್ತಾನಿ, ಪಶ್ಚಿಮದ ಗುಜರಾತಿ, ಪೂರ್ವದ ಕೋಲ್ಕತ್ತಾ ಸಂಗೀತದ ನಿನಾದ ಸವಿದ ಪ್ರೇಕ್ಷಕರಿಗೆ ಶನಿವಾರ ದಕ್ಷಿಣ ದ್ರಾವಿಡ ಸಾಹಿತ್ಯ-ಸಂಗೀತ ಲೋಕದ ಸಂಭ್ರಮ. ಕನ್ನಡ, ತಮಿಳು, ತೆಲುಗು, ಮಲೆಯಾಳಂ ‘ವುಡ್’ಗಳ ಸಿನಿಮಾ ಹಾಡುಗಳ ಸಿಂಚನ. ಸ್ವಲ್ಪ ಹಿಂದಿ ಮಿಶ್ರಣ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

30ನೇ ಆಳ್ವಾಸ್ ವಿರಾಸತ್''''ನಲ್ಲಿ ಉತ್ತರದ ಹಿಂದೂಸ್ತಾನಿ, ಪಶ್ಚಿಮದ ಗುಜರಾತಿ, ಪೂರ್ವದ ಕೋಲ್ಕತ್ತಾ ಸಂಗೀತದ ನಿನಾದ ಸವಿದ ಪ್ರೇಕ್ಷಕರಿಗೆ ಶನಿವಾರ ದಕ್ಷಿಣ ದ್ರಾವಿಡ ಸಾಹಿತ್ಯ-ಸಂಗೀತ ಲೋಕದ ಸಂಭ್ರಮ. ಕನ್ನಡ, ತಮಿಳು, ತೆಲುಗು, ಮಲೆಯಾಳಂ ‘ವುಡ್’ಗಳ ಸಿನಿಮಾ ಹಾಡುಗಳ ಸಿಂಚನ. ಸ್ವಲ್ಪ ಹಿಂದಿ ಮಿಶ್ರಣ.ಇದು ಆಳ್ವಾಸ್ ವಿರಾಸತ್‌ನ ಶ್ರೀಮತಿ ವನಜಾಕ್ಷಿ ಕೆ., ಶ್ರೀಪತಿ ಭಟ್ ವೇದಿಕೆಯಲ್ಲಿ ಚೆನ್ನೈಯ ಸ್ಟೆಕೇಟೋ ಬ್ಯಾಂಡ್ ತಂಡವು ನಿರಂತರ ಅಬ್ಬರದಲ್ಲಿ ನಡೆಸಿಕೊಟ್ಟ ಸಂಗೀತ ರಸಸಂಜೆಯ ಸಂಪ್ರೀತಿ.ಆರಂಭದಲ್ಲಿ ವಯೋಲಿನ್‌ನಲ್ಲಿ ಸಾಯಿ ರಕ್ಷಿತ್ ಅವರು ಮಣಿರತ್ನಂ ನಿರ್ದೇಶನದ ''''ರೋಜಾ'''' ಸಿನಿಮಾದ ''''ರೋಜಾ ಜಾನೇ ಮನ್'''' ನುಡಿಸುವ ಮೂಲಕ ಸಂಗೀತ ರಸ ಸಂಜೆಗೆ ನಾಂದಿ ಹಾಡಿದರು. ಬಳಿಕ '''' ಅಲೈಪಾಯಿದೆ'''' ''''ಕಚ್ಚೇ ಮಿರಮೇ'''' ಪ್ರೇಮ ಗೀತೆಯನ್ನು ಗೌತಮ್ ಭಾರಧ್ವಾಜ್ ಹಾಡಿದಾಗ ''''ಎಲ್ಫ್'''' ತಂಡವು ''''ಸಾಥಿಯೇ'''' ಎಂದು ಕೋರಸ್ ನೀಡಿತು. ಸಿನಿಮಾದ ಮಾಧವನ್ -ಶಾಲಿನಿಯ ಪ್ರೇಮದ ಭಾವಕ್ಕೆ ಯುವಮನಸ್ಸುಗಳು ಜಾರಿದವು.ಏರುದನಿಯಲ್ಲಿ ಹಾಡುತ್ತಲೇ ವೇದಿಕೆ ಬಂದದ್ದು ಗಾಯಕ ದೀಪಕ್, ಕರಾವಳಿ ಕುವರ ರಕ್ಷಿತ್ ಶೆಟ್ಟಿಯ ''''ಅವನೇ ಶ್ರೀಮನ್ನಾರಾಯಣ'''' ಸಿನಿಮಾದ, ''''ಚರಿತ್ರೆ ಸೃಷ್ಟಿಸೋ ಅವತಾರ'''' ಹಾಡಿದರು. ''''ಹೇಗಿದ್ದೀರಿ... ಜೋಶ್'''' ಎಂದು ಹುರಿ ದುಂಬಿಸಿದರುಮತ್ತೆ ಬಂದದ್ದು ಗಾಯಕಿ ನಿರಂಜನಾ ರಮಣನ್, ''''ದಿಲ್ ಸೇ'''' ಸಿನಿಮಾಗೆ ಲತಾಮಂಗೇಷ್ಕರ್ ಹಾಡಿದ ''''ಜಿಯಾ ಝಲೇ ಜಾನ್ ಝಲೇ'''' ಹಾಗೂ ಅದರ ತಮಿಳು ಅವತರಣಿಕೆಯ ಮಿಶ್ರಣ ಮಾಡಿ ಹಾಡಿದರು. ''''ನಮಸ್ಕಾರ ಆಳ್ವಾಸ್'''' ಎಂದು ಸ್ವಾಗತಿಸಿದರು.ಅಲಿ ಸೇತಿ ಬರೆದ ಹಾಗೂ ಶಾಯ್ ಗಿಲ್ ಹಾಡಿದ ಪಂಜಾಬಿ ಹಾಗೂ ಉರ್ದು ಭಾಷೆಯ ''''ಪಸೂರಿ, ಕೋಕ್ ಸ್ಟುಡಿಯೋ ಹಾಡನ್ನು ಗೌತಮ್ ಭಾರಧ್ವಾಜ್ ಹಾಗೂ ನಿರಂಜನಾ ರಮಣನ್ ಹಾಡಿದರು.ಬಳಿಕ ದೀಪಕ್ ''''ಪುಷ್ಪ'''' ಸಿನಿಮಾದ ''''ನೋಟ ಬಂಗಾರವಾಯಿತೇ ಶ್ರೀವಲ್ಲಿ ಮಾತೇ ಮಾಣಿಕ್ಯವಾಯಿತೇ''''ಯ ತೆಲುಗು ಹಾಡು ಹಾಡಿದರು.''''ಈ ಹಾಡು ಮಹಿಳೆಯರಿಗಾಗಿ'''' ಎಂದ ನಿರಂಜನಾ ರಮಣನ್ ''''ಜಬ್ ತಕ್ ಹೇ ಜಾನ್'''' ಸಿನಿಮಾದ '''' ಜಿಯಾ ಜಿಯಾ ರೇ ಜಿಯಾ'''' ಹೆಜ್ಜೆ ಹಾಕುತ್ತಲೇ ಹಾಡಿದರು.ಎ.ಆರ್.ರೆಹಮಾನ್ ಸಂಗೀತ ಸಂಯೋಜನೆಯ ಹೆಚ್ಚಿನ ಹಾಡುಗಳನ್ನು ಆಯ್ಕೆ ಮಾಡಿಕೊಂಡರು.ನಂತರ ಕನ್ನಡ ಮಧುರ ಗೀತೆಗೆ ಬಂದ ಗಾನ ಮಂಜರಿಯು, ಮಣಿರತ್ನಂ ನಿರ್ದೇಶನದ ''''ಪಲ್ಲವಿ ಅನು ಪಲ್ಲವಿ'''' ಸಿನಿಮಾದ ''''ನಗುವಾ ನಯನಾ ಮಧುರಾ ಮೌನ'''', ಹಾಡನ್ನು ಹಾಡಿದರು. ಇಳೆಯರಾಜ ಸಂಗೀತ ಸಂಯೋಜಿಸಿದ ಸಿನಿಮಾದ ಹಾಡು ಸಂಚಲನ ಸೃಷ್ಟುಸಿತು. ಪ್ರೇಕ್ಷಕರೂ, ''''ನಗುವಾ ನಯನಾ'''' ಎಂದು ಜೊತೆಯಾದರು.ಬಳಿಕ, ''''ಜೀವ ಹೂವಾಗಿದೆ... ಸಂಜೆ ತಂಗಾಳಿ'''' ಹಾಡಿದರು. ಪ್ರೇಕ್ಷಕರೆಲ್ಲ ಮೊಬೈಲ್ ಬೆಳಕನ್ನು ಬೀಸಿದಾಗ ಹೊಸ ಲೋಕ ಸೃಷ್ಟಿಯಾಯಿತು. ನಂತರ ಶಂಕರನಾಗ್ ಅವರ ''''ಗೀತಾ'''' ಸಿನಿಮಾದ '''' ಜೊತೆಯಲಿ ಜೊತೆಯಲಿ'''' ಹಾಡಿದರು. ಪ್ರೇಕ್ಷಕರೂ ಹಾಡಿದರು. ನಂತರ ತೆಲುಗಿನಲ್ಲಿ ''''ಪುಷ್ಪ'''' ಸಿನಿಮಾದ ''''ಪುಷ್ಪ ಪುಷ್ಪ ಪುಷ್ಪ'''' ಹಾಡು ದೀಪಕ್ ಹಾಡಿದರು.ವೈರಲ್ ಆಗಿರುವ ಮೊಬೈಲ್ ರಿಂಗ್ ಟೋನ್ ನಾದವನ್ನು ಸಾಯಿ ರಕ್ಷಿತ್ ವಯೋಲಿನ್ ನಲ್ಲಿ ನುಡಿಸಿದರು. ತಮಿಳು ಹಾಡನ್ನು ಗೌತಮ್ ಹಾಡಿದರು.ನಂತರ ಗೌತಮ್ ಅವರು ರಾಜ್ ಕುಮಾರ್ ನಟಸಿ, ಹಾಡಿದ ಆಕಸ್ಮಿಕ ಸಿನಿಮಾದ ಹಂಸಲೇಖ ಸಂಯೋಜನೆಯ ''''ಹುಟ್ಟಿದರೇ ಕನ್ನಡ ನಾಡಿನಲ್ಲಿ ಹುಟ್ಟಬೇಕು'''' ಹಾಡಿದರು.ನಿರಂಜನಾ ''''ದಿಲ್ ಸೇ'''' ಸಿನಿಮಾದ '''' ಚಲೇ ಛಯ್ಯಾಂ ಛಯ್ಯಾಂ'''' ಹಾಡಿದಾಗ ಕೇಳುಗರೆಲ್ಲ ರೈಲಿನ ಪ್ರಯಾಣದ ಸಂಭ್ರಮದಲ್ಲಿ ಮುಳುಗಿದರು.

''''ಸ್ಟೆಕೇಟೋ'''' ಎಂದರೆ ಪ್ರತಿ ಸ್ವರವನ್ನು ತೀವ್ರವಾಗಿ ನಿರ್ವಹಿಸುವುದು ಎಂದರ್ಥ. ಹೆಸರಿಗೆ ತಕ್ಕಂತೆ ತಂಡವು ಪ್ರದರ್ಶನ ನೀಡಿದ್ದು, ಸುಮಾರು 75 ಸಾವಿರಕ್ಕೂ ಅಧಿಕ ಜನ ಹಿಡಿಯುವ ಸಭಾಂಗಣ ಕಿಕ್ಕಿರಿದು ತುಂಬಿತ್ತು. ಜನ ಸಾಗರ ಲಕ್ಷದ ಲಕ್ಷ್ಯ ಹರಿಸಿತು.

ಶಾಸ್ತ್ರೀಯ ಸಂಗೀತ, ಆಧುನಿಕ ಸಂಗೀತ, ಸಿನಿಮಾ ಸಂಗೀತ, ಲಘು ಸಂಗೀತಗಳ ಮಿಶ್ರಣದ ಜೊತೆ ಆಧುನಿಕ ಸಂಗೀತದ ರಸದೌತಣ ದೊರೆಯಿತು2011ರಲ್ಲಿ ಆರಂಭಗೊಂಡ ಸ್ಟೆಕೇಟೋ ತಂಡ, ಲಂಡನ್ ಒಲಿಂಪಿಕ್ಸ್ ನಲ್ಲಿ ಪ್ರದರ್ಶನ ನೀಡಿದ್ದು,, ರಿಯೊ ಡಿ ಜನಿರೊ, ಬಾಲಿ, ಮಿಲಾನ್ ಸಾಂಸ್ಕೃತಿಕ ನಗರಿಗಳು ಸೇರಿದಂತೆ 12ಕ್ಕೂ ಹೆಚ್ಚು ದೇಶಗಳಲ್ಲಿ ಸಾವಿರಕ್ಕೂ ಹೆಚ್ಚಿನ ಕಛೇರಿಗಳನ್ನು ನೀಡಿದೆ. ‘ಇಲೆ’ ಸ್ಟೆಕೇಟೋ ತಂಡದ ಆಲ್ಬಂ. ಸಂಸ್ಥಾಪಕರಾದ ಆರ್.ಎಚ್. ವಿಕ್ರಂ ಅವರ ಸಂಗೀತ ಸಂಯೋಜನೆ ಹಾಗೂ ಕೀ ಬೋರ್ಡ್ ನಲ್ಲಿ ಶಲ್ಲು ವರುಣ್ (ಬೇಸ್ ಗಿಟಾರ್), ಅಭಿನಂದನ್ (ಗಿಟಾರ್ ವಾದಕ), ಸಂದೀಪ್ ರಮಣನ್ (ಡ್ರಮ್ಸ್), ಸೌರಭ್ ಜೋಶಿ (ವಾದ್ಯಮೇಳ ), ಸಾಯಿ ರಕ್ಷಿತ್ (ವಯೋಲಿನ್) ವಿಕ್ರಂ ಸಾರದಿ (ಕೀ ಬೋರ್ಡ್) ಹಾಗೂ ಹಾನೆಸ್ಟ್, ಶರತ್ ಹಾಗೂ ಗೋಕುಲ್ ಧ್ವನಿ ನಿರ್ವಹಣೆಯಲ್ಲಿ ಸಹಕರಿಸಿದರು. ''''ಎಲ್ಫೆ'''' ಕೋರಸ್ ನೀಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಎಂ ಗಾದಿ ಸಂಚಲನ : ನಾನು ಸಿಎಂ ಆಗಲಿ ಎಂಬುದು ಜನರ ಬಯಕೆ ಎಂದರು ಡಿಕೆಶಿ
ರೈಲ್ವೆ ಯೋಜನೆಗೆ ಭೂಮಿ ನೀಡಲು ರಾಜ್ಯ ಹಿಂದೇಟು