ಭಾರತಾಂಬೆ ಸೇವೆಗೆ ಸದಾಸಿದ್ದ, ಪಾಕ್‌ಗೆ ಬುದ್ದಿ ಕಲಿಸುತ್ತೇವೆ

KannadaprabhaNewsNetwork |  
Published : May 11, 2025, 01:28 AM IST
10ಐಎನ್‌ಡಿ1, ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಯೋಧನಿಗೆ ಗ್ರಾಮಸ್ಥರು ಸನ್ಮಾನಿಸಿ ಬಿಳ್ಕೊಟ್ಟರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ದೇಶ ಸೇವೆಯೇ ಈಶ ಸೇವೆ. ಲಚ್ಯಾಣ ಗ್ರಾಮದಲ್ಲಿ ಹುಟ್ಟಿ, ಬಂಥನಾಳದ ಶ್ರೀ ಸಂಗನಬಸವ ಮಹಾಶಿವಯೋಗಿಗಳ ಕೃಪೆಯಿಂದ ದೇಶ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ಭಾರತಾಂಬೆಯ ಸೇವೆ ಮಾಡಲು ಸದಾ ಸಿದ್ದನಿದ್ದು, ಪಾಕಿಸ್ತಾನಕ್ಕೆ ಬುದ್ದಿ ಕಲಿಸುತ್ತೇವೆ ಎಂದು ಲಚ್ಯಾಣ ಗ್ರಾಮದ ಸಿಆರ್‌ಪಿಎಫ್‌ ಯೋಧ ರಮೇಶ ಅಹಿರಸಂಗ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ದೇಶ ಸೇವೆಯೇ ಈಶ ಸೇವೆ. ಲಚ್ಯಾಣ ಗ್ರಾಮದಲ್ಲಿ ಹುಟ್ಟಿ, ಬಂಥನಾಳದ ಶ್ರೀ ಸಂಗನಬಸವ ಮಹಾಶಿವಯೋಗಿಗಳ ಕೃಪೆಯಿಂದ ದೇಶ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ಭಾರತಾಂಬೆಯ ಸೇವೆ ಮಾಡಲು ಸದಾ ಸಿದ್ದನಿದ್ದು, ಪಾಕಿಸ್ತಾನಕ್ಕೆ ಬುದ್ದಿ ಕಲಿಸುತ್ತೇವೆ ಎಂದು ಲಚ್ಯಾಣ ಗ್ರಾಮದ ಸಿಆರ್‌ಪಿಎಫ್‌ ಯೋಧ ರಮೇಶ ಅಹಿರಸಂಗ ಹೇಳಿದರು.ರಜೆಯ ಮೇಲೆ ಬಂದಿದ್ದ ತಾಲೂಕಿನ ಲಚ್ಯಾಣ ಗ್ರಾಮದ ಸಿಆರ್‌ಪಿಎಫ್‌ ಯೋಧ ರಮೇಶ ಅಹಿರಸಂಗ ಹಾಗೂ ಶಿರಶ್ಯಾಡ ಗ್ರಾಮದ ಯೋಧ ಶಿವಾನಂದ ಮಾಶ್ಯಾಳಗೆ ಭಾರತೀಯ ಸೇನೆಯ ಕಚೇರಿಯಿಂದ ತುರ್ತು ಕರೆ ಬಂದ ಹಿನ್ನಲೆಯಲ್ಲಿ ಅವರು ತಮ್ಮ ರಜೆಯನ್ನು ಮೊಟಕುಗೊಳಿಸಿ ಶನಿವಾರ ಬೆಳಿಗ್ಗೆ ಸಿದ್ಧಲಿಂಗ ಮಹಾರಾಜರ ಆಶೀರ್ವಾದ ಪಡೆದು ಜಮ್ಮು ಕಾಶ್ಮೀರದತ್ತ ಪ್ರಯಾಣ ಬೆಳೆಸಿದರು. ಈ ವೇಳೆ ರಮೇಶಗೆ ಗ್ರಾಮದ ಮುಖಂಡರು ಹಾಗೂ ತಂದೆ-ತಾಯಿ ಸನ್ಮಾನಿಸಿ ಬೀಳ್ಕೊಟ್ಟರು. ಲಚ್ಯಾಣ ಗ್ರಾಮದ ಸಿದ್ದಲಿಂಗ ಮಹಾರಾಜರ ಮಠದಲ್ಲಿ ಯೋಧ ರಮೇಶ ಹಾಗೂ ಅವರ ತಂದೆಗೆ ಗ್ರಾಮಸ್ಥರು ಸನ್ಮಾನಿಸಿ ಪಾಕಿಸ್ತಾನವನ್ನು ನಿರ್ಮಾನ ಮಾಡಿ ಗೆದ್ದು ಬರುವಂತೆ ಘೋಷಣೆ ಕೂಗಿದರು. ಅಲ್ಲದೇ, ಇಂಡಿ ಪಟ್ಟಣ ಬಸವೇಶ್ವರ, ಅಂಬೇಡ್ಕರ ವೃತ್ತದಲ್ಲಿ ಪಟ್ಟಣದ ನಾಗರಿಕರು, ವಿವಿಧ ಸಂಘಟನೆಯ ಮುಖಂಡರು ಯೋಧ ರಮೇಶ ಅಹಿರಸಂಗ ಹಾಗೂ ಶಿರಶ್ಯಾಡ ಗ್ರಾಮದ ಯೋಧ ಶಿವಾನಂದ ಮಾಶ್ಯಾಳ ಅವರಿಗೆ ಹೂಮಳೆ ಸುರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಯೋಧ ರಮೇಶ ಅಹಿರಸಂಗ ಮಾತನಾಡಿದರು.ಧನರಾಜ ಮುಜಗೊಂಡ, ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ, ಜೆಡಿಎಸ್‌ ಮುಖಂಡ ಬಿ.ಡಿ.ಪಾಟೀಲ, ಕಾಂಗ್ರೆಸ್‌ ಮುಖಂಡ ಜಾವೀದ ಮೋಮಿನ,ಜಗದೀಶ ಕ್ಷತ್ರಿ, ಯಮುನಾಜಿ ಸಾಳುಂಕೆ, ಅನೀಲಗೌಡ ಬಿರಾದಾರ, ದೇವೆಂದ್ರ ಕುಂಬಾರ, ಶ್ರೀಶೈಲಗೌಡ ಪಾಟೀಲ, ಸೋಮು ನಿಂಬರಗಿಮಠ ಮಾತನಾಡಿ, ಪಾಕಿಸ್ಥಾನದಲ್ಲಿನ ಉಗ್ರರ ವಿರುದ್ಧ ಭಾರತ ಅಪರೇಷನ್ ಸಿಂದೂರ ಕಾರ್ಯಾಚರಣೆಯಿಂದ ದೃತಿಗೆಟ್ಟಿದೆ. ಪಾಕಿಸ್ತಾನಕ್ಕೆ ಭಾರತೀಯ ಸೇನೆಯ ತಾಕತ್ತು ತೋರಿಸಲಾಗಿದೆ. ಭಯೋತ್ಪಾದಕರ ಹುಟ್ಟಡಗಿಸಲು ಭಾರತೀಯ ಸೇನೆ ಮುಂದಿರುವುದು ಸಾಬೀತಾಗಿದೆ ಎಂದು ಹೇಳಿದರು.ಚನ್ನುಗೌಡ ಪಾಟೀಲ, ಜಗದೀಶ ಕ್ಷತ್ರಿ, ರಾಮಸಿಂಗ ಕನ್ನೊಳ್ಳಿ, ವಿಜು ಮಾನೆ, ಮಹೇಶ ಕುಂಬಾರ, ಭೀಮು ಪ್ರಚಂಡಿ, ಸಾಗರ ಬಿರಾದಾರ, ಪ್ರಶಾಂತ ಗವಳಿ, ಸುನಂದಾ ಗಿರಣಿವಡ್ಡರ, ಶ್ರೀಕಾಂತ ಪಾಟೀಲ, ಈರಣ್ಣ ಮುಜಗೊಂಡ, ಬಾಳು ಮುಳಜಿ, ಸಂಜೀವ ದಶವಂತ, ಪ್ರಶಾಂತ ಲಾಳಸಂಗಿ, ಸಂತೋಷಗೌಡ ಪಾಟೀಲ, ಮಂಜು ದೇವರ, ಅವಿನಾಶ ಬಗಲಿ, ಅಶೋಕ ಅಕಲಾದಿ, ಬಾಗೇಶ ಮಲಘಾಣ, ಶ್ರೀಕಾಂತ ಬಡಿಗೇರ, ಯೋಧನ ತಂದೆ ಈರಣ್ಣ ಅಹಿರಸಂಗ, ಸಹೋದರ ಮಹೇಶ ಅಹಿರಸಂಗ, ನಿವೃತ್ತ ಶಿಕ್ಷಕ ವ್ಹಿ.ಎಂ.ಕರಾಳೆ, ಧರ್ಮರಾಯ ಮುಜಗೊಂಡ, ಧನರಾಜ್ ಮುಜಗೊಂಡ, ಮಲಕಣ್ಣಾ ಗುಬ್ಯಾಡ, ಯಶವಂತ ಬಿರಾದಾರ, ಮಾಜಿ ಸೈನಿಕರು, ಕ್ರೀಡಾಪಟುಗಳು ಸೇರಿ ಎಲ್ಲರೂ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ