ರೋಣ: ಅಮರಶಿಲ್ಪಿ ಜಕಣಾಚಾರಿ ಶಿಲ್ಪಕಲಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದು,ಅವರು ಕೆತ್ತನೆಯ ಶಿಲ್ಪಕಲೆಗಳು ಇಂದಿಗೂ ಆಕರ್ಷನೀಯವಾಗಿವೆ ಎಂದು ತಹಸೀಲ್ದಾರ ನಾಗರಾಜ.ಕೆ ಹೇಳಿದರು.
ಅಮರಶಿಲ್ಪಿ ಜಕಣಾಚಾರಿ ಬೇಲೂರು ಹಳೆಬೀಡಿನ ಚನ್ನಕೇಶವ ದೇವಾಲಯದಲ್ಲಿ ಶಿಲ್ಪಗಳನ್ನು ಆಕರ್ಷಣೀಯವಾಗಿ ಕೆತ್ತನೆ ಮಾಡಿದ್ದಾರೆ. ಹೀಗೆ ಅನೇಕ ಕಡೆಗಳಲ್ಲಿ ಜಕಣಾಚಾರಿ ತಮ್ಮ ಶಿಲ್ಪಕಲೆ ಕೆತ್ತನೆ ಮಾಡಿ ಹೆಸರುವಾಸಿಯಾಗಿದ್ದಾರೆ. ತಮ್ಮ ಇಡೀ ಜೀವನ ಶಿಲ್ಪಕಲಾ ಕೆತ್ತನೆಯಲ್ಲಿಯೇ ತೋಡಗಿಸಿಕೊಂಡಿದ್ದರು. ಜಕಣಾಚಾರಿ ಜೀವನ ಆದರ್ಶನಿಯವಾಗಿದ್ದು, ಯುವ ಪೀಳಿಗೆ ಅಮರ ಶಿಲ್ಪಿ ಜಕಣಾಚಾರಿ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಕಾಳಕಾದೇವಿ ದೇವಸ್ಥಾನ ಸಮಿತಿ ವತಿಯಿಂದ ತಹಸೀಲ್ದಾರ ನಾಗರಾಜ.ಕೆ ಸೇರಿದಂತೆ ಅನೇಕ ಗಣ್ಯರು, ಸಾಧಕರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಕಾಳೇಶ ಪೋತದಾರ, ಪ್ರಭುಗೌಡ ಪಾಟೀಲ, ಈಶ್ವರ ಪತ್ತಾರ, ವೀರುಪಾಕ್ಷಪ್ಪ ಬಡಿಗೇರಿ, ವಿಷ್ಣು ಕಮ್ಮಾರ, ವೀರೇಶ ಪತ್ತಾರ, ಯಚ್ಚರಪ್ಪ ಬಡಿಗೇರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.