ಅಮರವೀರ ಗೀತ ಗಾಯನ ಸ್ಪರ್ಧೆ: ಬಹುಮಾನ ವಿತರಣೆ

KannadaprabhaNewsNetwork |  
Published : Aug 21, 2025, 02:00 AM IST
18ಅಮರವೀರ | Kannada Prabha

ಸಾರಾಂಶ

ಮಣಿಪಾಲ ಮಂಚಿಯ ಶ್ರೀ ದುರ್ಗಾ ಮ್ಯೂಸಿಕ್ ಮೀಟ್ ಹಾಗೂ ಯುವಜನ ಸೇವಾ ಸಂಘ ದುಗ್ಲಿಪದವು ಆಶ್ರಯದಲ್ಲಿ 79ನೇ ಸ್ವಾತಂತ್ರ್ಯ ಪ್ರಯುಕ್ತ ಅಮರವೀರ ಗೀತ ಗಾಯನ ಸ್ಪರ್ಧೆ ಏರ್ಪಡಿಸಿ, ಬಹುಮಾನ ವಿತರಣಾ ಕಾರ್ಯಕ್ರಮವು ಯುವ ಸೇವಾ ಸಂಘ ದುಗ್ಲಿಪದವು ಸಭಾಂಗಣದಲ್ಲಿ ನಡೆಯಿತು.

ಉಡುಪಿ: ಇಲ್ಲಿನ ಮಣಿಪಾಲ ಮಂಚಿಯ ಶ್ರೀ ದುರ್ಗಾ ಮ್ಯೂಸಿಕ್ ಮೀಟ್ ಹಾಗೂ ಯುವಜನ ಸೇವಾ ಸಂಘ ದುಗ್ಲಿಪದವು ಆಶ್ರಯದಲ್ಲಿ 79ನೇ ಸ್ವಾತಂತ್ರ್ಯ ಪ್ರಯುಕ್ತ ಅಮರವೀರ ಗೀತ ಗಾಯನ ಸ್ಪರ್ಧೆ ಏರ್ಪಡಿಸಿ, ಬಹುಮಾನ ವಿತರಣಾ ಕಾರ್ಯಕ್ರಮವು ಯುವ ಸೇವಾ ಸಂಘ ದುಗ್ಲಿಪದವು ಸಭಾಂಗಣದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ದುರ್ಗಾ ಮ್ಯೂಸಿಕ್ ಮಿಟ್ ಮುಖ್ಯಸ್ಥೆ ತೇಜಸ್ವಿನಿ ಅನಿಲ್ ರಾಜ್ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಯುವಜನ ಸೇವಾ ಸಂಘ ದಿನೇಶ್ ಶೆಟ್ಟಿ ವಹಿಸಿದ್ದರು, ಸತೀಶ್ ಕುಮಾರ್ ಮಂಚಿ ಬಹುಮಾನಗಳನ್ನು ವಿತರಿಸಿದರು. ಮುಖ್ಯ ಅತಿಥಿಗಳಾಗಿ ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್, ಕಲ್ಯಾಣ್ಪುರ ಲಯನ್ಸ್ ಅಧ್ಯಕ್ಷ ರಿಚರ್ಡ್ ಕ್ರಾಸ್ಟೋ, ಸಂತೆಕಟ್ಟೆ ಲಯನ್ಸ್ ಅಧ್ಯಕ್ಷ ಜ್ಯೋತಿ ಶೆಟ್, ಮಣಿಪಾಲ ವ್ಯಾಲಿ ಲಯನ್ಸ್ ಕ್ಲಬ್ ಸದಸ್ಯೆ ಸಾಧನ ಕಿಣಿ, ಲಯನ್ಸ್ ಕ್ಲಬ್ ಮಣಿಪಾಲ ಯುಕ್ತಿ ಸದಸ್ಯರಾದ ವಿದ್ಯಾದರಿ ಹಾಗೂ ಶ್ರೀವಿಕ್ರಂ ಮಂಚಿ ಉಪಸ್ಥಿತರಿದ್ದರು.ಕಾರ್ಯಕ್ರಮದ ಸಂಯೋಜಕ ಲಯನ್ ನಂದಕಿಶೋರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಶ್ರೀಲತಾ ಹಾಗೂ ಡಾ.ಸಚಿನ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿ, ಅನಿಲ್ ರಾಜ್ ವಂದಿಸಿದರು

ಬಹುಮಾನ ವಿಜೇತರು:

ಸ್ಪರ್ಧೆಯಲ್ಲಿ ಕ್ರಮವಾಗಿ ಮೊದಲ 3 ಸ್ಥಾನಗಳ‍ನ್ನು 6 - 12 ವರ್ಷವಿಭಾಗದಲ್ಲಿ ಮೈಥಿಲಿ ಆಚಾರ್ಯ, ವೈಷ್ಣವಿ, ಅಶ್ವಿಕ, 12 - 18 ವರ್ಷದ ವಿಭಾಗದಲ್ಲಿ ತುಷಾರ ಶಂಕರ್, ನಿರಂಜನ್, ವಿದ್ಯಾಶ್ರೀ ಮತ್ತು ಸಮಾಧಾನಕರ ಬಹುಮಾನಗಳನ್ನು ಸೆಲ್ವಿನ್ ಡಿಸೋಜಾ, ಕಶ್ವಿ ರಾವ್. ಶಮಿಕ ಎಸ್. ಪೂಜಾರಿ, ಪಿ. ಪ್ರಣವ್, ಸುಜನಾ ಪಡೆದುಕೊಂಡರು. ರಂಗಸೌರಭ ಬಿರುದಾಂಕಿತ ರಂಗಭೂಮಿ ಕಲಾವಿದ ವಿಕ್ರಮ್ ಮಂಚಿ ಅವರನ್ನು ಗೌರವಿಸಲಾಯಿತು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ