ಅಮಾವಾಸ್ಯೆ: ಮಹದೇಶ್ವರ ಬೆಟ್ಟಕ್ಕೆ ಭಕ್ತರ ದಂಡು

KannadaprabhaNewsNetwork |  
Published : Oct 11, 2026, 02:30 AM IST
ಮಹದೇಶ್ವರ ಬೆಟ್ಟದಲ್ಲಿ ಹರಿದು  | Kannada Prabha

ಸಾರಾಂಶ

ಜಿಲ್ಲೆಯ ಹನೂರು ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ಪೂಜಾ ಕಾರ್ಯಕ್ರಮಗಳನ್ನು ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ದಿವ್ಯ ಸಾನ್ನಿಧ್ಯದಲ್ಲಿ ಮಾದೇಶ್ವರನಿಗೆ ಎಣ್ಣೆ ಮಜ್ಜನ ಸೇವೆ ಧೂಪದ ಅಭಿಷೇಕ ಹಾಗೂ ಮಹಾಮಂಗಳಾರತಿ ಪೂಜಾ ಕಾರ್ಯಕ್ರಮವು ಧಾರ್ಮಿಕವಾಗಿ ಬೇಡಗಂಪಣ ಸಮುದಾಯದ ಅರ್ಚಕರಿಂದ ಕಾರ್ಯಕ್ರಮವು ಸಂಭ್ರಮ ಸಡಗರದಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಹನೂರು

ಜಿಲ್ಲೆಯ ಹನೂರು ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ಪೂಜಾ ಕಾರ್ಯಕ್ರಮಗಳನ್ನು ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ದಿವ್ಯ ಸಾನ್ನಿಧ್ಯದಲ್ಲಿ ಮಾದೇಶ್ವರನಿಗೆ ಎಣ್ಣೆ ಮಜ್ಜನ ಸೇವೆ ಧೂಪದ ಅಭಿಷೇಕ ಹಾಗೂ ಮಹಾಮಂಗಳಾರತಿ ಪೂಜಾ ಕಾರ್ಯಕ್ರಮವು ಧಾರ್ಮಿಕವಾಗಿ ಬೇಡಗಂಪಣ ಸಮುದಾಯದ ಅರ್ಚಕರಿಂದ ಕಾರ್ಯಕ್ರಮವು ಸಂಭ್ರಮ ಸಡಗರದಿಂದ ನಡೆಯಿತು.

ಉಘೇ ಉಘೇ ಎಂದ ಮಾದಪ್ಪನ ಭಕ್ತರು:

ಮಹಾಲಯ ಅಮಾವಾಸ್ಯೆ ಪೂಜೆಗೆ ಬಂದಂತ ಮಾದಪ್ಪನ ಭಕ್ತಾದಿಗಳು ಬೆಳ್ಳಿ ರಥೋತ್ಸವ ಹಾಗೂ ಹುಲಿವಾಹನ ಉತ್ಸವ ಮತ್ತು ಮಾದಪ್ಪನ ಉತ್ಸವ ದೂಪದ ಅಭಿಷೇಕ ಪಂಜಿನ ಸೇವೆ ಮತ್ತು ಉರುಳು ಸೇವೆ ಹಾಗೂ ಮುಡಿ ಸೇವೆಯೊಂದಿಗೆ ಹಲವು ಉತ್ಸವಗಳ ಸಂಭ್ರಮ ಸಡಗರದೊಂದಿಗೆ ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ಮಾದಪ್ಪನ ದರ್ಶನ ಪಡೆದು ಉಘೇ ಉಘೇ ಎಂದು ಘೋಷಣೆಗಳನ್ನು ಕೂಗಿ ಇಷ್ಟಾರ್ಥ ಸಿದ್ಧಿಸುವಂತೆ ನಿವೇದನೆ ಮಾಡಿಕೊಂಡರು.

ಗಮನಸೆಳೆದ ಬೆಳ್ಳಿ ರಥೋತ್ಸವ, ಹೂವಿನ ಅಲಂಕಾರ:

ದೇವಾಲಯದಲ್ಲಿ ವಿಶೇಷ ಬಗೆ ಬಗೆಯ ಹೂಗಳಿಂದ ಮಾದಪ್ಪನ ಭಕ್ತರ ಸೆಳೆಯುವಂತೆ ಹೂವಿನ ಅಲಂಕಾರವನ್ನು ಮಾಡಲಾಗಿತ್ತು. ಮಹಾಲಯ ಅಮಾವಾಸ್ಯೆ ಪ್ರಯುಕ್ತ ಸಾಂಪ್ರದಾಯದಂತೆ ನಡೆಯುವ ಬೆಳ್ಳಿ ರಥೋತ್ಸವ ಸಂಭ್ರಮ ಸಡಗರದೊಂದಿಗೆ ಮಲೆ ಮಹದೇಶ್ವರ ಬೆಟ್ಟದ ಆನೆಯ ಸ್ವಾಗತದೊಂದಿಗೆ ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕುವ ಮೂಲಕ ಹರಕೆ ಹೊತ್ತು ಭಕ್ತರಿಂದ ರಥೋತ್ಸವಕ್ಕೆ ರೈತರು ತಾವು ಬೆಳೆದ ದವಸ ಧಾನ್ಯಗಳನ್ನು ಎರಚುವ ಮೂಲಕ ಇನ್ನಷ್ಟು ಇಷ್ಟಾರ್ಥಗಳನ್ನು ವೃದ್ಧಿಸುವಂತೆ ಬೆಳೆಗಳನ್ನು ರಕ್ಷಿಸುವಂತೆ ಭಕ್ತರು ಬೇಡಿಕೊಂಡರು.

ಜಗಮಗಿಸುತ್ತಿರುವ ವಿದ್ಯುತ್ ದೀಪಾಲಂಕಾರ:

ಮಾದಪ್ಪನ ದೇವಾಲಯದ ರಾಜಗೋಪುರ ಸೇರಿ ವಿವಿಧ ಭಾಗಗಳಲ್ಲಿ ವಿಶೇಷವಾದ ವಿದ್ಯುತ್ ದೀಪ ಅಲಂಕಾರ ಮಾಡಲಾಗಿತ್ತು.

ವಿಶೇಷ ದಾಸೋಹ ವ್ಯವಸ್ಥೆ:

ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪುರುಷೋತ್ತಮ್ ಮಲೆ ಮಾದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಮಹಾಲಯ ಅಮಾವಾಸ್ಯೆ ಪೂಜೆಗೆ ಬಂದಿದ್ದ ಭಕ್ತಾದಿಗಳಿಗೆ ಯಾವುದೇ ಲೋಪದೋಷಗಳು ಬರದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪರಿಶೀಲನೆ ನಡೆಸಿ ದಾಸೋಹ ಭವನದಲ್ಲಿ ಭೇಟಿ ನೀಡಿ ಭಕ್ತರಿಗೆ ನೀಡುವ ಪ್ರಸಾದ ವ್ಯವಸ್ಥೆಯನ್ನು ಸಹ ಪರಿಶೀಲಿಸಿ ಬರುವಂತ ಭಕ್ತಾದಿಗಳಿಗೆ ಲೋಪದೋಷಗಳು ಬರದಂತೆ ಅಧಿಕಾರಿ ಸಿಬ್ಬಂದಿ ಕ್ರಮವಹಿಸುವಂತೆ ಸೂಚನೆ ನೀಡಿದರು.

ಅಮಾವಾಸ್ಯೆಗೆ ಪೂಜೆಗೆ ಭಕ್ತಸಾಗರ:

ಮಹಾಲಯ ಅಮಾವಾಸ್ಯೆ ಪೂಜೆಗೆ ರಾಜ್ಯದ ನಾನಾ ಭಾಗಗಳಿಂದ ಹಾಗೂ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ವಿವಿಧ ಭಾಗಗಳಿಂದ ಮತ್ತು ತಮಿಳುನಾಡಿನಿಂದಲೂ ಅಮಾವಾಸ್ಯೆ ಪೂಜೆಗೆ ಅಪಾರ ಸಂಖ್ಯೆಯ ಭಕ್ತಾದಿಗಳು ಭಾಗವಹಿಸುವ ಮೂಲಕ ಎಲ್ಲಿ ನೋಡಿದರೂ ಬಾರಿ ಭಕ್ತ ಸಾಗರವೇ ಮಲೆ ಮಾದೇಶ್ವರ ಬೆಟ್ಟದಲ್ಲಿ ಕಂಡುಬಂದಿದ್ದು ವಿಶೇಷವಾಗಿತ್ತು ಜೊತೆಗೆ ಹಿರಿಯ ನಾಗರಿಕರಿಗೂ ವಿಶೇಷ ಸಾಲಿನಲ್ಲಿ ಮಾದೇಶ್ವರನ ದರುಶನ ಪಡೆಯಲು ಕ್ಷೇತ್ರಭಿವೃದ್ಧಿ ಪ್ರಾಧಿಕಾರ ವ್ಯವಸ್ಥೆಯನ್ನು ಕಲ್ಪಿಸಿತು.

ಸಾಲೂರು ಮಠದಲ್ಲೂ ಭಕ್ತ ಸಮೂಹ:

ಮಲೆ ಮಾದೇಶ್ವರ ಬೆಟ್ಟಕ್ಕೆ ಮಹಾಲಯ ಅಮಾವಾಸ್ಯೆ ಪೂಜೆಗೆ ಬಂದ ಭಕ್ತಾದಿಗಳು ಮಾದಪ್ಪನ ದರ್ಶನ ಪಡೆದು ನಂತರ ಇತಿಹಾಸ ಪ್ರಸಿದ್ಧ ಪಡೆದ ಸಾಲೂರು ಮಠಕ್ಕೆ ಭೇಟಿ ನೀಡಿ ಶ್ರೀಗಳಾದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಅವರಿಂದ ಭಕ್ತಾದಿಗಳು ಆಶೀರ್ವಾದ ಪಡೆದುಕೊಂಡರು.

ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಮಹಾಲಯ ಅಮಾವಾಸ್ಯೆ ಪೂಜೆಗೆ ಬರುವ ಮಾದಪ್ಪನ ಭಕ್ತಾದಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲಯ ವ್ಯವಸ್ಥೆ ಮತ್ತು ನೆರಳಿನ ವ್ಯವಸ್ಥೆ ದಾಸೋಹ ವ್ಯವಸ್ಥೆಯನ್ನು ಸಹ ಕ್ರಮ ಕೈಗೊಳ್ಳಲಾಗಿದೆ. ಮಾದಪ್ಪನ ಭಕ್ತಾದಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ.

ಪುರುಷೋತ್ತಮ್ ಕಾರ್ಯದರ್ಶಿ, ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಮಲೆ ಮಹದೇಶ್ವರ ಬೆಟ್ಟ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ ಫ್ರೀಡಂ ಪಾರ್ಕ್‌, ವಿಧಾನಸೌಧ ಬಳಿ ರೈತರ ಪ್ರತಿಭಟನೆ
ಮಂತ್ರಾಲಯ ಮಠಕ್ಕೆ ತಲೆನೋವಾದ ಆನ್ಲೈನ್ ವಂಚಕರು