ಏ.14ಕ್ಕೆ ಅಂಬೇಡ್ಕರ್, ಬಾಬೂಜಿ ಜಯಂತಿ

KannadaprabhaNewsNetwork | Published : Mar 29, 2025 12:32 AM

ಸಾರಾಂಶ

ನಗರದ ಸರ್ಕಾರಿ ಶಾಲೆಯ ಆವರಣದಲ್ಲಿ ಕಳೆದ ೬ ತಿಂಗಳಿನಿಂದ ಅಂಬೇಡ್ಕರ್ ಪುತ್ಥಳಿಗೆ ಬಟ್ಟೆಯನ್ನು ಸುತ್ತಿರುವ ಕೊಳಕು ಬಟ್ಟೆಯನ್ನು ತೆಗೆಯದೆ ಅವರಿಗೆ ಅವಮಾನ ಮಾಡುತ್ತಿದ್ದೀರಿ. ಈಗ ಪೂರ್ವಭಾವಿ ಸಭೆಯನ್ನು ಮುಂದೂಡಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪೂರ್ವಬಾವಿ ಸಭೆ ಮಾಡಬೇಕೆಂದು ದಲಿತ ಮುಖಂಡರು ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ನಗರದ ಪಾಲಿಟೆಕ್ನಿಕ್ ಮೈದಾನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಬಾಬುಜಗಜೀವನ್ ರಾಮ್ ಜಯಂತಿಯನ್ನು ಏಪ್ರಿಲ್ ೧೪ ರಂದು ಆಚರಿಸಲಾಗುವುದೆಂದು ತಹಸೀಲ್ದಾರ್ ಸುದರ್ಶನ್ ಯಾದವ್ ತಿಳಿಸಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಅಂಬೇಡ್ಕರ್ ಮತ್ತು ಬಾಬು ಜಗಜೀವನ್‌ರಾಮ್ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಈ ಬಾರಿ ಏಪ್ರಿಲ್ ೫ ರಂದು ಮಾಜಿ ಪ್ರಧಾನಿ ಡಾ.ಜಗಜೀವನರಾಮ್ ಜನ್ಮ ದಿನವನ್ನು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸರಳವಾಗಿ ಆಚರಿಸಿ, ಏ.೧೪ ರಂದು ಡಾ. ಅಂಬೇಡ್ಕರ್‌ ಮತ್ತು ಬಾಬೂಜಿ ಜಯಂತಿಯನ್ನು ಒಂದೇ ದಿನ ಆಚರಿಸಲು ಸೂಚಿಸಿದರು.

ಡಾ.ಅಂಬೇಡ್ಕರ್‌ಗೆ ಅವಮಾನ

ವಿವಿಧ ದಲಿತಪರ ಸಂಘಟನೆಗಳ ಮುಖಂಡರುಗಳಾದ ಕೊಡಿಗಲ್ ರಮೇಶ್, ಕವಾಲಿ ವೆಣಕಟರವಣಪ್ಪ, ಜನಾನಾಗಪ್ಪ, ವಕೀಲಗೋಪಿ, ವಿಜಯನರಸಿಂಹ, ಜನಾರ್ದನ್, ಆನಂದ್ ಮಾತನಾಡಿ ನಗರದ ಸರ್ಕಾರಿ ಶಾಲೆಯ ಆವರಣದಲ್ಲಿ ಕಳೆದ ೬ ತಿಂಗಳಿನಿಂದ ಅಂಬೇಡ್ಕರ್ ಪುತ್ಥಳಿಗೆ ಬಟ್ಟೆಯನ್ನು ಸುತ್ತಿರುವ ಕೊಳಕು ಬಟ್ಟೆಯನ್ನು ತೆಗೆಯದೆ ಅವರಿಗೆ ಅವಮಾನ ಮಾಡುತ್ತಿದ್ದೀರಿ. ಈಗ ಪೂರ್ವಭಾವಿ ಸಭೆಯನ್ನು ಮುಂದೂಡಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪೂರ್ವಬಾವಿ ಸಭೆ ಮಾಡಬೇಕೆಂದು ಪಟ್ಟುಹಿಡಿದರು.

ಪ್ರತಿಕ್ರಿಯಿಸಿದ ತಹಸೀಲ್ದಾರ್ ಸುದರ್ಶನ್ ಯಾದವ್, ಈ ವಿವಾದ ಉಚ್ಚ ನ್ಯಾಯಾಲಯದಲ್ಲಿದೆ. ಸರ್ಕಾರದ ಆದೇಶ ಬಂದ ಕೂಡಲೇ ಅಂಬೇಡ್ಕರ್ ಪುತ್ಥಳಿಗೆ ಸುತ್ತಿರುವ ಬಟ್ಟೆಯನ್ನು ತೆರವುಗೊಳಿಸಲಾಗುವುದು ಎಂದರು. ಇದಕ್ಕೆ ಒಪ್ಪದ ಕೆಲವು ಮುಖಂಡರು ಸಭೆಯಿಂದ ಹೊರ ನಡೆದರು.

ತಾಪಂ ಇಒ ಎಸ್ ಆನಂದ್, ನಗರಸಭಾ ಸದಸ್ಯ ರೆಡ್ಡಪ್ಪ, ತಾಪಂ ಮಾಜಿ ಉಪಾಧ್ಯಕ್ಷ ನಡಂಪಲ್ಲಿ ಶ್ರೀನಿವಾಸ ಮಾತನಾಡಿದರು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್ ನಾಯಕ, ಬಿಇಒ ಉಮಾದೇವಿ, ಸಿಡಿಪಿಒ ಮಹೇಶ್ ಬಾಬು ಮತ್ತಿತರರು ಉಪಸ್ಥಿತರಿದ್ದರು.

Share this article