ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಪಟ್ಟಣದಲ್ಲಿ ಎರಡು ದಶಕಗಳಿಂದಲೂ ಸಹಾ ಅಂಬೇಡ್ಕರ್ ಭವನ ಕಾಮಗಾರಿ ನಡೆಯುತ್ತಿದ್ದರೂ ಸಹಾ ಕಾಮಗಾರಿ ಗುಣಮಟ್ಟದಲ್ಲಿರುವುದು ಹಾಗೂ ವಿಶಾಲವಾದ ಜಾಗದಲ್ಲಿ ಭವನ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ವಿಚಾರ ಎಂದು ಸಚಿವ ಎಚ್.ಸಿ. ಮಹದೇವಪ್ಪ ಹೇಳಿದರು.ಅವರು ಶನಿವಾರ ಮಧ್ಯಾಹ್ನ ಕೊಳ್ಳೇಗಾಲದಲ್ಲಿ ನಿರ್ಮಾಣವಾಗಿರುವ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಭವನ ಕಾಮಗಾರಿ ಕುರಿತು ಮಾಹಿತಿ ಪಡೆದ ಬಳಿಕ ಮಾತನಾಡಿದರು.
ಭವನ ಕಾಮಗಾರಿಗೆ ಅನುದಾನಕ್ಕೆ ಯಾರು ಅನುದಾನ ಕೇಳಲಿಲ್ಲ, ಶಾಸಕರು ಕೇಳಿದ್ದರು. ನಾನೇ 3 ಕೋಟಿ ಅನುದಾನ ನೀಡಿದ್ದೆ. ಭವನ ಬೇಗ ಮುಗಿಯಲಿ ಎಂಬ ಕಾರಣಕ್ಕೆ ಬೇರೆ ಇಲಾಖೆಯಿಂದಲೂ ಅನುದಾನ ನೀಡಲು ಯತ್ನಿಸಿದ್ದೆ. ಆದರೆ ಫಲಕಾರಿಯಾಗಲಿಲ್ಲ, ಇದು ಸಮಾಜದ ಆಸ್ತಿ, ಎಲ್ಲರೂ ಒಗ್ಗೂಡಿ ಬೇಗ ಕಾಮಗಾರಿ ಮುಗಿಸಿ ಸಮುದಾಯಕ್ಕೆ ಬಳಕೆ ಮಾಡಿಕೊಳ್ಳಿ, ಸಭೆ, ಸಮಾರಂಭಗಳಿಗೆ ಭವನ ಉಪಯೋಗಿಸಿಕೊಳ್ಳಿ ಎಂದು ಸೂಚಿಸಿದರು.ಭವನ ನಿರ್ಮಾಣಕ್ಕಿರುವ ಅಡ್ಡಿ, ಆತಂಕ ನಿವಾರಿಸುವ ನಿಟ್ಟಿನಲ್ಲಿ ಸಮಾಜದ ಎಲ್ಲಾ ಬಂಧುಗಳು ಒಗ್ಗೂಡಿ ಬಗೆಹರಿಸಬೇಕು. ಅಸಮಾಧಾನಿತರ ಜೊತೆಯೂ ಸಹಾ ಅಂಬೇಡ್ಕರ್ ಸಂಘದ ಪದಾಧಿಕಾರಿಗಳು, ಮುಖಂಡರು ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಿ, ಇಷ್ಟೊಂದು ವಿಶಾಲವಾದ ಜಾಗ ಯಾವುದೇ ಊರಲ್ಲೂ ಭವನ ನಿರ್ಮಾಣಕ್ಕೆ ದೊರೆತಿಲ್ಲ ಎಂದು ಹೇಳಿದರು.
ತಕರಾರು ಮಾಡದಂತೆ ಕಾಮಗಾರಿ ನಡೆಸಿ:ಭವನದ ಮುಂದುವರೆದ ಕಾಮಗಾರಿ ಪ್ರಾರಂಭಿಸಿ ಯಾರೇ ತಕರಾರು ಮಾಡಿದರೂ ಸಹಾ ಅಡ್ಡಿಯಾಗದ ರೀತಿ ಉತ್ತಮ ರೀತಿ ಕಾಮಗಾರಿ ಮಾಡಿ, ಕಾಮಗಾರಿ ಉತ್ತಮ ರೀತಿಯಾದರೆ ಯಾರು ಸಹಾ ತಕರಾರು ಮಾಡಲಾಗಲ್ಲ ಎಂದು ಸಚಿವರು ಇದೆ ವೇಳೆ ತಾಕೀತು ಮಾಡಿದರು.ಹೊಸ ಕಾಮಗಾರಿ ಮಾಡಲ್ಲ:
ಇದೇ ವೇಳೆ ಸಚಿವರ ಜೊತೆ ಮಾತನಾಡಿದ ಭೂಸೇನ ನಿಗಮದ ಅಧಿಕಾರಿ ಚಿಕ್ಕಲಿಂಗಯ್ಯ, ಅವರು ನಾನು ಹೊಸ ಕಾಮಗಾರಿ ಮಾಡಲ್ಲ, ಈಗಾಗಲೇ ಕೆಲವರು ನನ್ನ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ ಹಿನ್ನೆಲೆ ಈಗಿನ ಕಾಮಗಾರಿ ಮುಗಿಸುವೆ, ಹೊಸದಾಗಿ ಯಾವುದೇ ಕಾಮಗಾರಿ ನಡೆಸಲ್ಲ ಎಂದು ಸಚಿವರಿಗೆ ಹೇಳುತ್ತಿದ್ದಂತೆ ನಿಮ್ಮ ಕಾಮಗಾರಿ ಗುಣಮಟ್ಟದ್ದಾಗಿದೆ. ಹೊಸದಾಗಿ ಮಾಡುವುದಾರೆ ಮಾಡಿ ಇಲ್ಲದಿದ್ದರೆ ಲೋಕೋಪಯೋಗಿ ಅಧಿಕಾರಿಗಳಿಂದ ಕಾಮಗಾರಿ ನಡೆಸುವೆ ಎಂದರು.ಕಾಮಗಾರಿಗೆ ಶಾಸಕರ ಪ್ರಶಂಸೆ:
ಇದೇ ವೇಳೆ ಮಾತನಾಡಿದ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಭವನ ಕಾಮಗಾರಿಗೆ ಲೋಕಾಯುಕ್ತ ಅಧಿಕಾರಿಗಳೇ ಪ್ರಶಂಸೆ ವ್ಯಕ್ತಪಡಿಸಿದ್ದು ಅವರು ಕಾಮಗಾರಿ ಗುಣಮಟ್ಟದಲ್ಲಿದೆ ಎಂದಿದ್ದಾರೆ, ಹಾಗಾಗಿ ನೀವು ಧೃತಿಗಡೆದಿರಿ, ಕಾಮಗಾರಿ ನಿರ್ವಹಿಸಿ ಎಂದರು.ಈ ವೇಳೆ ನಗರಸಭಾಧ್ಯಕ್ಷೆ ರೇಖಾ, ಜಿಪಂನ ಮಾಜಿ ಸದಸ್ಯ ಕೊಪ್ಪಾಳಿ ನಾಯಕ, ಲಿಂಗರಾಜು, ಮುಡಿಗುಂಡ ಶಾಂತು, ಮಂಗಲ ಪುಟ್ಟರಾಜು, ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷ ಆನಂದಮೂರ್ತಿ, ಉಪಾಧ್ಯಕ್ಷ ಕಿರಣ್, ರಾಜೇಶ್, ಡಾ. ಗುರುಪ್ರಸಾದ್, ಕೃಷ್ಣರಾಜು, ನಾಗರಾಜು, ನಗರಸಭೆ ಮಾಜಿ ಅಧ್ಯಕ್ಷ ಬಸ್ತಿಪುರ ಶಾಂತರಾಜು, ರಮೇಶ್, ಸದಸ್ಯರಾದ ಸ್ವಾಮಿ ನಂಜಪ್ಪ, ಮಂಜುನಾಥ್, ಸುರೇಶ, ಬಸ್ತಿಪುರ ರವಿ, ಶಂಕರ್ ಇನ್ನಿತರಿದ್ದರು.
---------18ಕೆಜಿಎಲ್5ಕೊಳ್ಳೇಗಾಲಕ್ಕೆ ಶನಿವಾರ ಆಗಮಿಸಿದ ಸಚಿವ ಎಚ್ ಸಿ ಮಹದೇವಪ್ಪ ಅವರು ಡಾ. ಬಿ ಆರ್ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಕೊಪ್ಪಾಳಿನಾಯಕ, ರೇಖಾ ರಮೇಶ್, ಶಾಂತರಾಜು, ಬಸ್ತಿಪುರ ರವಿ ಇನ್ನಿತರಿದ್ದರು.-