ನೆಮ್ಮದಿಯ ಬದುಕಿಗೆ ಅಂಬೇಡ್ಕರ್‌ಸಂವಿಧಾನವೇ ಕಾರಣ: ಬಾಲಕೃಷ್ಣ

KannadaprabhaNewsNetwork |  
Published : Dec 07, 2024, 12:31 AM IST
ದೇವನಹಳ್ಳಿ ಡಾ. ಅಂಬೇಡ್ಕರ್‌ರವರ ಪರಿನಿರ್ವಾಣ ದಿನ ನಡೆದ ಸಮಾರಂಭದಲ್ಲಿ ತಹಸೀಲ್ದಾರ್‌ ಬಾಲಕೃಷ್ಣ, ತಾ. ಪಂ. ಇಒ ಶ್ರೀನಾಥಗೌಡ, ಕಾರಹಳ್ಳಿ ಶ್ರೀನಿವಾಸ್‌, ಡಾ. ಎಂ. ಮೂರ್ತಿ ಇದ್ದಾರೆ | Kannada Prabha

ಸಾರಾಂಶ

ದೇವನಹಳ್ಳಿ: ಡಾ.ಅಂಬೇಡ್ಕರ್‌ ಸಂವಿಧಾನದಡಿ ಕಾರ್ಯಾಂಗ, ನ್ಯಾಯಾಂಗ ಹಾಗೂ ಶಾಸಕಾಂಗಗಳು ಕಾರ್ಯ ನಿರ್ವಹಿಸುತ್ತಿದ್ದು, ಸಮಾಜದಲ್ಲಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕು ಕಲ್ಪಿಸಿಕೊಡಲಾಗಿದೆ ಎಂದು ತಹಸೀಲ್ದಾರ್‌ ಬಾಲಕೃಷ್ಣ ತಿಳಿಸಿದರು.

ದೇವನಹಳ್ಳಿ: ಡಾ.ಅಂಬೇಡ್ಕರ್‌ ಸಂವಿಧಾನದಡಿ ಕಾರ್ಯಾಂಗ, ನ್ಯಾಯಾಂಗ ಹಾಗೂ ಶಾಸಕಾಂಗಗಳು ಕಾರ್ಯ ನಿರ್ವಹಿಸುತ್ತಿದ್ದು, ಸಮಾಜದಲ್ಲಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕು ಕಲ್ಪಿಸಿಕೊಡಲಾಗಿದೆ ಎಂದು ತಹಸೀಲ್ದಾರ್‌ ಬಾಲಕೃಷ್ಣ ತಿಳಿಸಿದರು.

ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಡಾ.ಅಂಬೇಡ್ಕರ್‌ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನೇಕ ದೇಶಗಳ ಸಂವಿಧಾನ ಅಧ್ಯಯನ ಮಾಡಿ ದೇಶಕ್ಕೆ ಅತ್ಯುತ್ತಮ ಸಂವಿಧಾನ ರಚನೆ ಮಾಡಿಕೊಟ್ಟಿರುವ ಮಹಾ ಚೇತನ. ನಾವೆಲ್ಲರೂ ಹೆಮ್ಮೆಯಿಂದ ಬದುಕುತ್ತಿದ್ದೇವೆ ಅಂದರೆ ಅದಕ್ಕೆ ಅವರ ಸಂವಿಧಾನವೇ ಕಾರಣ ಎಂದರು.

ತಾಪಂ ಮಾಜಿ ಸದಸ್ಯ ಕಾರಹಳ್ಳಿ ಶ್ರೀನಿವಾಸ್‌ ಮಾತನಾಡಿ, ಕತ್ತಲ ಕೋಣೆಯಿಂದ ಬೆಳಕಿನ ಕಡೆಗೆ ಕೈ ಹಿಡಿದು ನಡೆಸಿದ ಮಹಾಚೇತನ ಡಾ. ಅಂಬೇಡ್ಕರ್‌. ಅವರು ಹುಟ್ಟದಿದ್ದರೆ ದಲಿತರು ಮತ್ತು ಹಿಂದುಳಿದ ವರ್ಗದವರು ಶಿಕ್ಷಣ, ಅಧಿಕಾರ ಮತ್ತು ಸಕಲ ಸಂಪತ್ತು ಪಡೆಯುವ ಅವಕಾಶ ಇರುತ್ತಿರಲಿಲ್ಲ. ನಾವಿಂದು ಸಮಾಜದಲ್ಲಿ ಗೌರವದಿಮದ ಬದುಕಲು ಅವರ ಸಂವಿಧಾನ ಕಾರಣ ಎಂದರು. ಕಾರ್ಯಕ್ರಮದಲ್ಲಿ ತಾಪಂ ಇಲ ಡಾ.ನಾರಾಯಣಸ್ವಾಮಿ, ದಲಿತ ಸಂಘಟನೆಯ ಮಾರಪ್ಪ, ಪುರಸಭೆ ಮಾಜಿ ಅಧ್ಯಕ್ಷ ಡಾ. ಎಂ.ಮೂರ್ತಿ, ಲೋಕೇಶ್‌, ಎಲ್‌. ಮುನಿರಾಜು, ತಿಮ್ಮರಾಯಪ್ಪ ಹಾಗೂ ದಲಿತ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು. ಸಮಾರಂಭಕ್ಕೆ ಮುನ್ನ ಜಾನಪದ ಕಲಾವಿದರೊಂದಿಗೆ ದಲಿತ ಮುಖಂಡರು ಮೆರವಣಿಗೆ ಮಾಡಿದರು. ಡಾ.ಅಂಬೇಡ್ಕರ್‌ ಪುತ್ಥಳಿಗೆ ತಹಸೀಲ್ದಾರ್‌ ಬಾಲಕೃಷ್ಣ ಮಾಲಾರ್ಪಣೆ ಮಾಡಿದರು.

(ಫೋಟೊ ಕ್ಯಾಫ್ಷನ್‌)

ದೇವನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್‌ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ತಹಸೀಲ್ದಾರ್‌ ಬಾಲಕೃಷ್ಣ, ತಾಪಂ ಇಒ ಶ್ರೀನಾಥಗೌಡ, ಕಾರಹಳ್ಳಿ ಶ್ರೀನಿವಾಸ್‌, ಡಾ. ಎಂ.ಮೂರ್ತಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ