ಅಂಬೇಡ್ಕರ್ ಫ್ಲೆಕ್ಸ್‌, ಬೋರ್ಡ್‌ ವಿರೂಪ ಖಂಡನೀಯ

KannadaprabhaNewsNetwork |  
Published : Oct 26, 2025, 02:00 AM IST
ಜ್ಯೋತಿಗೌಡನಪುರ ಘಟನೆ ಖಂಡನೀಯ: ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಿ-ಎನ್. ನಾಗಯ್ಯ | Kannada Prabha

ಸಾರಾಂಶ

ತಾಲೂಕಿನ ಜ್ಯೋತಿಗೌಡನಪುರದಲ್ಲಿ ಅಂಬೇಡ್ಕರ್ ಫ್ಲೆಕ್ಸ್‌ ಮತ್ತು ಬೋರ್ಡ್ ವಿರೂಪ, ಬುದ್ಧರ ಮೂರ್ತಿ ಧ್ವಂಸ ಮಾಡಿರುವುದು ಖಂಡನೀಯ, ತಕ್ಷಣ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಎನ್. ನಾಗಯ್ಯ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ತಾಲೂಕಿನ ಜ್ಯೋತಿಗೌಡನಪುರದಲ್ಲಿ ಅಂಬೇಡ್ಕರ್ ಫ್ಲೆಕ್ಸ್‌ ಮತ್ತು ಬೋರ್ಡ್ ವಿರೂಪ, ಬುದ್ಧರ ಮೂರ್ತಿ ಧ್ವಂಸ ಮಾಡಿರುವುದು ಖಂಡನೀಯ, ತಕ್ಷಣ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಎನ್. ನಾಗಯ್ಯ ಆಗ್ರಹಿಸಿದರು.

ನಗರರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಘಟನೆ ಇಡೀ ಮಾನವ ಕುಲ ತಲೆತಗ್ಗಿಸುವಂತಹ ಹೇಯ ಕೃತ್ಯವಾಗಿದೆ. ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಬೇಕು. ಅವರ ಮೇಲೆ ದೇಶದ್ರೋಹದ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಅವರನ್ನು ದೇಶದಿಂದಲೇ ಗಡಿಪಾರು ಮಾಡಬೇಕು ಎಂದರು.

ಹತ್ತಾರು ಧರ್ಮಗಳು, ಸಾವಿರಾರು ಜಾತಿಗಳು, ಸಾವಿರಾರು ಭಾಷೆಗಳ ವೈವಿಧ್ಯತೆ ಇರುವ ನಮ್ಮ ದೇಶದಲ್ಲಿ ಏಕತೆಯನ್ನು ಸಾರುವ ಸಂವಿಧಾನವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ನೀಡುವ ಮೂಲಕ ಸರ್ವರಿಗೂ ಸಮಪಾಲು ಸರ್ವರಿಗೂ ನಮಬಾಳು ಸಿಗುವ ಆಶಯ ಹೊಂದಿದ್ದರು. ಇಂತಹ ವ್ಯಕ್ತಿಗೆ ಅಪಮಾನ ಮಾಡುವಂತ ನೀಚ ವ್ಯಕ್ತಿಗಳು ಮಾನವ ಕುಲಕ್ಕೆ ಕಳಂಕವಾಗಿದ್ದಾರೆ ಎಂದರು.ಈ ದೇಶದ ಸಂವಿಧಾನವನ್ನು ಒಪ್ಪದ ಜನ ಈ ದೇಶದಲ್ಲಿ ಇರಲು ಯೋಗ್ಯರಲ್ಲ ಇಂಥವರ ನಾಗರಿಕತೆಯನ್ನು ರದ್ದುಪಡಿಸಿ ಗಡಿಪಾರು ಮಾಡಬೇಕು. ಇಲ್ಲದಿದ್ದರೆ ಇಂತಹ ಘಟನೆಗಳು ಪದೇಪದೇ ಮರುಕಳಿಸುತ್ತಾ ಕೋಮು ದ್ವೇಷ, ಜಾತಿ ಗಲಭೆಗಳು ನಡೆದು ದೇಶದಲ್ಲಿ ಆಶಾಂತಿ ಇಂತಹ ಘಟನೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಸಿದರು.

ದೇಶ ಮತ್ತು ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ, ಜಾತೀಯತೆ, ಭ್ರಷ್ಟಾಚಾರ, ಕೋಮು ದ್ವೇಷ, ರೈತರ ಸಮಸ್ಯೆ, ಅತ್ಯಾಚಾರ, ಮೂಲಭೂತ ಸೌಕರ್ಯಗಳ ಕೊರತೆ ಇನ್ನೂ ಹಲವಾರು ಜ್ವಲಂತ ಸಮಸ್ಯೆಗಳಿವೆ. ಇವುಗಳ ವಿರುದ್ಧ ಹೋರಾಡುವ ಬದಲ ಪಾದಯಾತ್ರೆ ಪ್ರತಿಭಟನೆ ಮಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ ಎಂದರು.

ಬದನಗುಪ್ಪೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬೋರ್ಡ್ ತೆರವುಗೊಳಿಸಲು ಅಲ್ಲಿನ ನಾಯಕ ಸಮಾಜದ ಕೆಲವು ವ್ಯಕ್ತಿಗಳು ಒತ್ತಾಯಿಸುವುದು ಬಹಳ ಖಂಡನೆ ಇದು ಸಮುದಾಯಗಳ ನಡುವೆ ದ್ವೇಷವನ್ನು ಉಂಟುಮಾಡುತ್ತದೆ. ಆದ್ದರಿಂದ ಸಮಾಜದ ವಿದ್ಯಾರ್ಥಿ ಪ್ರಜ್ಞಾವಂತ ಮುಖಂಡರು ನಮುದಾಯದಲ್ಲಿ ಜಾಗೃತಿಯನ್ನು ಮೂಡಿಸುವುದು ಅರಿವನ್ನು ಮೂಡಿಸಬೇಕಾಗಿದೆ ಎಂದರು.

ರಾಜ್ಯಕಾರಿಣಿ ಸದಸ್ಯ ಬ್ಯಾಡಮೂಡ್ಲು ಬಸವಣ್ಣ, ಜಿಲ್ಲಾಧ್ಯಕ್ಷ ಬ.ಮ. ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಅಮಚವಾಡಿ ಪ್ರಕಾಶ್, ಶಿವಶಂಕರ್, ಅಭಿ ಅರಳೀಪುರ, ಚಂದ್ರಕಾಂತ್ ಇದ್ದರು.

PREV

Recommended Stories

ಸ್ವಸ್ಥ ಶರದ್ ಋತು ಪ್ರಕೃತಿಯ ಲಯದಲ್ಲಿ ಸ್ವಸ್ಥತೆ ! ಶರದ್ ಋತುವಿನ ಆಹಾರ ಮತ್ತು ದಿನಚರ್ಯೆ
ನಟ ದರ್ಶನ್‌ಗೆ ಜೈಲಿನಲ್ಲಿ ಹರಿದ ಚಾದರ : ವಕೀಲರ ವಾದ