ಮತದಾನವೆಂಬ ಬ್ರಹ್ಮಸ್ತ್ರವನ್ನು ಅಂಬೇಡ್ಕರ್ ನೀಡಿದ್ದಾರೆ: ಸಿ.ಟಿ. ರವಿ

KannadaprabhaNewsNetwork |  
Published : Apr 15, 2025, 01:03 AM IST
ಚಿಕ್ಕಮಗಳೂರಿನ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಡಾ.ಬಿ.ಆರ್‌. ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮ ನಡೆಯಿತು. ಸಿ.ಟಿ. ರವಿ, ದೇವರಾಜ್‌ ಶೆಟ್ಟಿ, ಪುಷ್ಪರಾಜ್‌ ಇದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ಡಾ. ಬಿ.ಆರ್.ಅಂಬೇಡ್ಕರ್ ಹಲವಾರು ನೋವು, ಅವಮಾನ ಸಹಿಸಿಕೊಂಡು ಸಂವಿಧಾನ ರಚಿಸಿ, ಅಮೂಲ್ಯವಾದ ಮತದಾನವೆಂಬ ದ ಬ್ರಹ್ಮಸ್ತ್ರವನ್ನು ಜನತೆಗೆ ನೀಡಿ ರಾಷ್ಟ್ರದ ಪರಿವರ್ತನೆಗೆ ಭದ್ರ ಕೋಟೆ ನಿರ್ಮಿಸಿದರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.

ಜಿಲ್ಲಾ ಪಾಂಚಜನ್ಯ ಕಚೇರಿಯಲ್ಲಿ ನಡೆದ ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಡಾ. ಬಿ.ಆರ್.ಅಂಬೇಡ್ಕರ್ ಹಲವಾರು ನೋವು, ಅವಮಾನ ಸಹಿಸಿಕೊಂಡು ಸಂವಿಧಾನ ರಚಿಸಿ, ಅಮೂಲ್ಯವಾದ ಮತದಾನವೆಂಬ ದ ಬ್ರಹ್ಮಸ್ತ್ರವನ್ನು ಜನತೆಗೆ ನೀಡಿ ರಾಷ್ಟ್ರದ ಪರಿವರ್ತನೆಗೆ ಭದ್ರ ಕೋಟೆ ನಿರ್ಮಿಸಿದರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು. ಜಿಲ್ಲಾ ಪಾಂಚಜನ್ಯ ಕಚೇರಿಯಲ್ಲಿ ಸೋಮವಾರ ನಡೆದ ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಯಲ್ಲಿ ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪಾನಮನ ಸಲ್ಲಿಸಿ ಮಾತನಾಡಿದರು. ಮತದಾನ ಯಾವುದೇ ಸ್ಥಾನ ಪಲ್ಲಟ ಹಾಗೂ ಭವ್ಯಭಾರತ ನಿರ್ಮಾಣಕ್ಕೆ ಪ್ರಮುಖ ಅಸ್ತ್ರ. ಆ ನಿಟ್ಟಿನಲ್ಲಿ ಅಂಬೇಡ್ಕರ್ ಸಂವಿಧಾನ ರಚಿಸುವ ಕಾಲಘಟ್ಟದಲ್ಲಿ ಶ್ರೀಮಂತರು, ತೆರಿಗೆ ಕಟ್ಟುವವರು ಸೀಮಿತಗೊಳಿಸದೇ ದೇಶದ ಪ್ರತಿಯೊಬ್ಬ ಪ್ರಜೆಗೂ ಹಕ್ಕನ್ನು ಚಲಾಯಿಸಲು ಅವಕಾಶ ಕಲ್ಪಿಸಿ ರಾಷ್ಟ್ರದ ಸಮಸ್ತ ವರ್ಗಕ್ಕೂ ಆಸರೆಯಾದರು ಎಂದರು.

ವಿಶ್ವವೇ ಭಾರತದತ್ತ ತಿರುಗಿ ನೋಡುವಂಥ ಸಂವಿಧಾನ ರಚಿಸಿದ ಅಂಬೇಡ್ಕರ್ ಬಡತನ, ಅಸ್ಪೃಶ್ಯತೆ ಹೋಗಲಾಡಿಸಲು ಚುನಾವಣೆ ಅಖಾಡಕ್ಕೆ ಕಾಲಿಟ್ಟರು. ಆದರೆ, ಕಾಂಗ್ರೆಸ್ ಕೆಲವು ಕಮ್ಯೂನಿಸ್ಟ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅಂಬೇಡ್ಕರ್ ವಿರುದ್ಧವೇ ಪರಿಶಿಷ್ಟರನ್ನು ಎತ್ತಿಕಟ್ಟಿ ಸೋಲಿಸಿ, ಅಪಮಾನಿಸಿದರು ಎಂದರು.ಅಂಬೇಡ್ಕರ್‌ಗೆ ಭಾರತ ರತ್ನ ಕೊಡುವಲ್ಲಿ ಕಾಂಗ್ರೆಸ್ ವಿಫಲವಾಗಿತ್ತು. ಬದುಕಿದ್ದಾಗಲೇ ನೆಹರು, ಇಂದಿರಾಗಾಂಧಿ ತಮಗೇ ತಾವೇ ಶ್ರೇಷ್ಠರು ಎಂದು ಭಾರತ ರತ್ನ ಪಡೆದುಕೊಂಡರು. ಸ್ಮಾರಕ ವಿಚಾರದಲ್ಲೂ ಕಾಂಗ್ರೆಸ್ ಹಿನ್ನೆಡೆ ತೋರಿತು. ತದ ನಂತರ ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ 1991ರಲ್ಲಿ ಅಧಿಕಾರ ಹಿಡಿದು ಮೊಟ್ಟಮೊದಲು ಸ್ಮಾರಕ ನಿರ್ಮಿಸಿ ಗೌರವ ಸೂಚಿಸಿತು ಎಂದರು.ಕಾಂಗ್ರೆಸ್ ಅಧಿಕಾರ ಉಳಿವು, ವೈಯಕ್ತಿಕ ಸ್ವಾತಂತ್ರ್ಯಕ್ಕಾಗಿ ಸಂವಿಧಾನ ಅನೇಕ ಬಾರಿ ತಿದ್ದುಪಡಿ ಮಾಡಿದೆ. ಇದೀಗ ಅಧಿಕಾರ ಕಳೆದುಕೊಳ್ಳಲಿದೆ ಎಂಬ ಭಯದಿಂದ ಸಂವಿಧಾನ ಕೈಪಿಡಿ ಹಿಡಿದುಕೊಂಡಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಸಂವಿಧಾನ ಅಂಬೇಡ್ಕರ್ ರಚನೆಯಲ್ಲ, ಹಿಂದೆಯೇ ರಚಿಸಲಾಗಿತ್ತು ಎಂದು ಹೇಳಿ ಅಂಬೇಡ್ಕರ್ ಆಶಯಕ್ಕೆ ಕೊಡಲಿ ಪೆಟ್ಟು ಹಾಕಿದ್ದು ಈ ಬಗ್ಗೆ ಕ್ರಮ ಯಾವ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಕುರುವಂಗಿ ವೆಂಕಟೇಶ್, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಮಾತನಾಡಿದರು. ರಾಜ್ಯ ಎಸ್ಸಿ ಮೋರ್ಚಾ ಕಾರ್ಯದರ್ಶಿ ಸೀತರಾಮಭರಣ್ಯ, ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಮಹಿಳಾ ಜಿಲ್ಲಾಧ್ಯಕ್ಷೆ ಜಸಂತಾ ಅನಿಲ್‌ಕುಮಾರ್, ನಗರಸಭೆ ಉಪಾಧ್ಯಾಕ್ಷೆ ಅನು ಮಧುಕರ್, ಸದಸ್ಯೆ ರೂಪ, ಮುಖಂಡರಾದ ಕೆಂಪನಹಳ್ಳಿ ಪುಷ್ಪರಾಜ್, ಕೋಟೆ ರಂಗನಾಥ್, ಸೋಮಶೇಖರ್, ಬಿ.ರಾಜಪ್ಪ, ನಾಗರಾಜ್, ನೆಟ್ಟೆಕೆರೆಹಳ್ಳಿ ಜಯಣ್ಣ ಉಪಸ್ಥಿತರಿದ್ದರು. 14 ಕೆಸಿಕೆಎಂ 3ಚಿಕ್ಕಮಗಳೂರಿನ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಡಾ.ಬಿ.ಆರ್‌. ಅಂಬೇಡ್ಕರ್‌ ಜಯಂತಿ ನಡೆಯಿತು. ಸಿ.ಟಿ. ರವಿ, ದೇವರಾಜ್‌ ಶೆಟ್ಟಿ, ಪುಷ್ಪರಾಜ್‌ ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...