ಕನ್ನಡಪ್ರಭ ವಾರ್ತೆ ಹೊಸಪೇಟೆ
ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿಯ ಅಂಗವಾಗಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯಗಳು ಹಾಗೂ ಸಂಘರ್ಷ ಎಂಬ ವಿಷಯ ಕುರಿತು ಗುರುವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೇವಲ ಭಾರತ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಬಾಬಾ ಸಾಹೇಬ್ ಮಾನವ ಹಕ್ಕುಗಳ ಬಗ್ಗೆ ಸಂಘಟನೆ ಮಾಡಿದರು. ಆದ್ದರಿಂದ ಅಮೆರಿಕದಲ್ಲಿಯೂ ಅವರ ಬೃಹತ್ ಪ್ರತಿಮೆಯನ್ನು ಸಮಾನತೆಯ ಪ್ರತಿಮೆಯ ದ್ಯೋತಕವಾಗಿ ಸ್ಥಾಪಿಸಲಾಗಿದೆ ಎಂದರು.ಭಾರತದ ಸಮಾಜದ ರಚನೆ ಸನಾತನ ವೈದಿಕ ಸಂಸ್ಕೃತಿಯ ಶ್ರೇಣೀಕರಣದ ವ್ಯವಸ್ಥೆಯ ಪರಿಧಿಯಲ್ಲಿ ರೂಪುಗೊಂಡಿದೆ. ಜಾತಿ ವ್ಯವಸ್ಥೆಯು ಭಾರತದ ಅಭಿವೃದ್ಧಿಗೆ ಮಾರಕವಾಗಿದೆ. ಸ್ವಾತಂತ್ರ್ಯ ಬಂದರೆ ಸಾಕಾಗುವುದಿಲ್ಲ, ಸಮಾನತೆ ಬೇಕು, ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯ ಎಲ್ಲ ಜನಸಾಮಾನ್ಯರಿಗೂ ಸಿಗಬೇಕು ಎಂಬುದು ಡಾ.ಬಿ.ಆರ್ ಅಂಬೇಡ್ಕರ್ ಅವರ ಆಶಯವಾಗಿತ್ತು. ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ರೋಲ್ ಮಾಡೆಲ್ ಆಗಿ ಅನುಸರಿಸಬೇಕು ಎಂದರು.
ಕೃಷಿ ವ್ಯವಸ್ಥೆಯಲ್ಲಿ ಜಮೀನ್ದಾರಿ ಪದ್ದತಿಯನ್ನು ಹೋಗಲಾಡಿಸಿ ಗ್ರಾಪಂ ಕೇಂದ್ರಗಳಲ್ಲಿ ಸಹಕಾರಿ ತತ್ವದ ಅಡಿಯಲ್ಲಿ ಕೃಷಿಯನ್ನು ತರುವ ಆಶಯವನ್ನು ಅವರು ಹೊಂದಿದ್ದರು. ಆರ್ಥಿಕ ತಜ್ಞರಾದ ಬಾಬಾ ಸಾಹೇಬ್ ಭಾರತದ ಅರ್ಥವ್ಯವಸ್ಥೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಕಲ್ಪನೆಯನ್ನು ತಂದರು. ಕೈಗಾರಿಕಾ ಉದ್ಯಮಗಳು ಸರ್ಕಾರದ ಅಧೀನದಲ್ಲಿ ಇರಬೇಕು ಎಂದು ಭಾವಿಸಿದ್ದರು, ಈ ರೀತಿ ಅವರ ಕನಸಿನ ಸಂವಿಧಾನ ಇನ್ನೂ ಸುಂದರವಾಗಿ ಕಟ್ಟುವ ಆಶಯ ಅವರದಾಗಿತ್ತು ಎಂದರು.
ಪಿಡಿಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಯು.ಎಂ. ರೋಹಿತ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಪಿಡಿಐಟಿ ಕಾಲೇಜಿನ ಆಡಳಿತ ಮಂಡಳಿಯ ನೂತನ ಅಧ್ಯಕ್ಷ ಕಲ್ಗುಡಿ ಮಂಜುನಾಥ್, ಸಂವಿಧಾನ ರಕ್ಷಣಾ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು. ಪ್ರೊ. ರವಿಕುಮಾರ್ ನಿರ್ವಹಿಸಿದರು.