ಅಂಬೇಡ್ಕರ ಹಿಮಾಲಯ ಪರ್ವತವಿದ್ದಂತೆ, ಜ್ಞಾನಶಿಖರ

KannadaprabhaNewsNetwork |  
Published : May 30, 2026, 04:00 AM IST
ಭೀಮೋತ್ಸವ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಹುಕ್ಕೇರಿ ಜಗತ್ತಿಗೆ ಶಿಕ್ಷಣದಿಂದ ಸಾಧನೆ ಮಾಡಬಹುದು ಎಂದು ತೋರಿಸಿಕೊಟ್ಟ ಡಾ.ಬಿ.ಆರ್.ಅಂಬೇಡ್ಕರ ಅವರು ಹಿಮಾಲಯ ಪರ್ವತವಿದ್ದಂತೆ. ಎಂದೆಂದಿಗೂ ಕರಗದ ಜ್ಞಾನ ಶಿಖರ. ಪ್ರಸ್ತುತ ದಿನಗಳಲ್ಲಿ ಅವರಂಥ ಮಹಾನಾಯಕರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳುವುದು ಇಂದಿನ ಅಗತ್ಯ ಎಂದು ಮಾಜಿ ಸಂಸದ ರಮೇಶ ಕತ್ತಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಜಗತ್ತಿಗೆ ಶಿಕ್ಷಣದಿಂದ ಸಾಧನೆ ಮಾಡಬಹುದು ಎಂದು ತೋರಿಸಿಕೊಟ್ಟ ಡಾ.ಬಿ.ಆರ್.ಅಂಬೇಡ್ಕರ ಅವರು ಹಿಮಾಲಯ ಪರ್ವತವಿದ್ದಂತೆ. ಎಂದೆಂದಿಗೂ ಕರಗದ ಜ್ಞಾನ ಶಿಖರ. ಪ್ರಸ್ತುತ ದಿನಗಳಲ್ಲಿ ಅವರಂಥ ಮಹಾನಾಯಕರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳುವುದು ಇಂದಿನ ಅಗತ್ಯ ಎಂದು ಮಾಜಿ ಸಂಸದ ರಮೇಶ ಕತ್ತಿ ಅಭಿಪ್ರಾಯಪಟ್ಟರು.

ತಾಲೂಕಿನ ಗುಡಸ ಗ್ರಾಮದಲ್ಲಿ ಶುಕ್ರವಾರ ಸುಲ್ತಾನಪೂರದ ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನಸೇವಾ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ ಅಂಬೇಡ್ಕರ ಅವರ 135ನೇ ಜಯಂತಿ ಹಾಗೂ ತಾಲೂಕು ಮಟ್ಟದ ಭೀಮೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಪ್ರಭುದ್ಧ ಭಾರತ ನಿರ್ಮಾಣಕ್ಕೆ ಅಂಬೇಡ್ಕರ ಅವರು ತಮ್ಮನ್ನು ತಾವು ತೊಡಗಿಸಿಕೊಂಡವರು. ಅವರ ಚಿಂತನೆಗಳು ಇಂದಿಗೂ ಪ್ರಸ್ತುತ ಎಂದರು.

ಭಾರತದ ರಾಜಕೀಯ, ಸಾಮಾಜಿಕ-ಸಾಂಸ್ಕೃತಿಕ ವ್ಯವಸ್ಥೆ ರೂಪಿಸುವಲ್ಲಿ ಅಂಬೇಡ್ಕರರು ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆ. ಸಂವಿಧಾನ ಮೂಲಕ ದೇಶದ ಸಮಗ್ರ ಅಭಿವೃದ್ಧಿಗೆ ಬಾಬಾಸಾಹೇಬ ಅಂಬೇಡ್ಕರರು ನೀಡಿರುವ ಕೊಡುಗೆ ಅನನ್ಯವಾಗಿದೆ. ಅಸಮಾನತೆ ವಿರುದ್ಧ ಹೋರಾಡಿ ಗೆದ್ದ ಅಂಬೇಡ್ಕರರ ವಿಚಾರಧಾರೆಗಳನ್ನು ದೇಶದ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ದಲಿತರು ಸಂಘಟಿತರಾಗಿ ತಮ್ಮ ಹಕ್ಕುಗಳನ್ನು ಪಡೆಯಬೇಕು. ಲಿಂಗ ತಾರತಮ್ಯ ಮತ್ತು ಮಹಿಳೆಯರಲ್ಲಿ ಅಸಮಾನತೆ ಹೋಗಲಾಡಬೇಕು ಎಂದು ಹೇಳಿದರು.ರಾಜ್ಯ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ನಿರ್ದೇಶಕ ಸುರೇಶ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಭೀಮೋತ್ಸವದ ಮೂಲಕ ಅಂಬೇಡ್ಕರರ ಜೀವನ ಚರಿತ್ರೆ, ಹೋರಾಟಗಳ ಸ್ಮರಣೆ ಮತ್ತು ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಲಾಗಿದೆ. ತಮ್ಮ ಎನ್‌ಜಿಒ ಮೂಲಕ ಕಾಗವಾಡದಲ್ಲಿ ಮಹಿಳಾ ಸಾಂತ್ವನ ಕೇಂದ್ರ, ಬೈಲಹೊಂಗಲದಲ್ಲಿ ವೃದ್ಧಾಶ್ರಮ ನಡೆಸಲಾಗುತ್ತಿದೆ. ಜೊತೆಗೆ ಮಹಿಳೆಯರು ಮತ್ತು ನಿರುದ್ಯೋಗ ಯುವಕರಿಗೆ ಸ್ವಯಂ ಉದ್ಯೋಗಕ್ಕಾಗಿ ಸರಕಾರದಿಂದ ಆರ್ಥಿಕ ನೆರವು ಕಲ್ಪಿಸುವುದು ಸೇರಿದಂತೆ ವಿವಿಧ ರೀತಿಯ ಸಮಾಜಮುಖಿ ಕೆಲಸ ಮಾಡಲಾಗುತ್ತಿದೆ ಎಂದರು.ಪ್ರೊ.ಬಸವರಾಜ ಜಾಲವಾದಿ ಉಪನ್ಯಾಸ ನೀಡಿದರು. ಯಮಕನಮರಡಿ ಹುಣಸಿಕೊಳ್ಳಮಠದ ಸಿದ್ಧಬಸವ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶಾಸಕ ನಿಖಿಲ್ ಕತ್ತಿ, ಅಧಿಕಾರಿಗಳಾದ ಗುರುಶಾಂತ ಪಾವಟೆ, ಡಾ.ಉದಯ ಕುಡಚಿ, ಎಚ್.ಹೊಳೆಪ್ಪ, ಪಿಡಿಒ ನಿರಂಜನ ಕುರಬೇಟ, ಮುಖಂಡರಾದ ಮಲ್ಲಿಕಾರ್ಜುನ ನರಸನ್ನವರ, ರಾಯಪ್ಪ ಢೂಗ, ಸದಾನಂದ ಹಿರೇಮಠ, ಸುನೀಲ ನೇರ್ಲಿ, ಶಿವನಗೌಡ ಪಾಟೀಲ, ಸತ್ಯಪ್ಪಾ ಚಂದರಗಿ, ಉದಯ ಹುಕ್ಕೇರಿ, ಅಪ್ಪಣ್ಣ ಖಾತೇದಾರ, ಶ್ರೀಕಾಂತ ತಳವಾರ, ಸದಾಶಿವ ಕಾಂಬಳೆ, ದೀಪಕ ವೀರಮುಖ, ಕುಮಾರ ತಳವಾರ, ಗಂಗಾರಾಮ ಭೂಸಗೋಳ, ಬಸವರಾಜ ತಳವಾರ, ಪ್ರಮೋದ ಹೊಸಮನಿ, ರಮೇಶ ಹುಂಜಿ, ಕೆಂಪಣ್ಣಾ ಶಿರಹಟ್ಟಿ, ಮಹಾಂತೇಶ ತಳವಾರ, ಯಲ್ಲಪ್ಪ ಡಪ್ಪರಿ, ಅಮರ ಶಿಂಗೆ, ಮುತ್ತು ಕಾಂಬಳೆ, ಮಂಜು ಕಾಮತ, ಮುತ್ತು ರಾಯಣ್ಣವರ, ಮಂಗಲ ಮಾನೆ, ರೇಖಾ ದಾದುಗೋಳ ಮತ್ತಿತರರು ಉಪಸ್ಥಿತರಿದ್ದರು.ಆಯೋಜಕ ಸುರೇಶ ತಳವಾರ ಸ್ವಾಗತಿಸಿದರು. ಶಿಕ್ಷಕ ರಾಜು ತಳವಾರ ನಿರೂಪಿಸಿದರು. ವಿನಯ ಕಾಂಬಳೆ ಸಂವಿಧಾನ ಪೀಠಿಕೆ ಓದಿದರು. ವಿಶಾಲ ಕೆಂಪರಾಯಗೋಳ ವಂದಿಸಿದರು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತ್ಯುತ್ತಮ ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನಸಂಖ್ಯೆ ಆಧರಿಸಿ ಮೂಲಸೌಕರ್ಯ ಒದಗಿಸಲು ಆದ್ಯತೆ
ಸಿದ್ದು ನ್ಯಾಮಗೌಡ ಸೌಹಾರ್ದ ಬ್ಯಾಂಕ್‌ಗೆ ₹5 ಕೋಟಿ ಲಾಭ