ಮನುಕುಲದ ಶ್ರೇಷ್ಠ ಚಿಂತಕ ಅಂಬೇಡ್ಕರ್‌

KannadaprabhaNewsNetwork |  
Published : Apr 15, 2024, 01:20 AM IST
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬಾಬಾಸಾಹೇಬ ಅಂಬೇಡ್ಕರ್ ಜಯಂತಿ ಆಚರಣೆ | Kannada Prabha

ಸಾರಾಂಶ

ವಿಜಯಪುರ: ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಂವಿಧಾನಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್‌ ಅವರ 133ನೇ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸುವುದರೊಂದಿಗೆ ಆಚರಿಸಲಾಯಿತು. ಬಳಿಕ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಡಾ.ಬಾಬಾಸಾಹೇಬ ಅಂಬೇಡ್ಕರ್‌ ಅವರು ಮಾನವ ಕುಲದ ಶ್ರೇಷ್ಠ ಚಿಂತಕ. ದೀನ ದಲಿತರ ಹಾಗೂ ದುರ್ಬಲ ವರ್ಗದವರ ವಿಮೋಚನೆಗಾಗಿ ಜನಿಸಿದ ಮಹಾನಾಯಕ.

ಕನ್ನಡಪ್ರಭ ವಾರ್ತೆ ವಿಜಯಪುರ

ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಂವಿಧಾನಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್‌ ಅವರ 133ನೇ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸುವುದರೊಂದಿಗೆ ಆಚರಿಸಲಾಯಿತು. ಬಳಿಕ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಡಾ.ಬಾಬಾಸಾಹೇಬ ಅಂಬೇಡ್ಕರ್‌ ಅವರು ಮಾನವ ಕುಲದ ಶ್ರೇಷ್ಠ ಚಿಂತಕ. ದೀನ ದಲಿತರ ಹಾಗೂ ದುರ್ಬಲ ವರ್ಗದವರ ವಿಮೋಚನೆಗಾಗಿ ಜನಿಸಿದ ಮಹಾನಾಯಕ. ಇಂತಹ ಮಹಾನ್

ಚೇತನ ಈ ಜಗತ್ತಿನಲ್ಲಿ, ಅದರಲ್ಲೂ ಜಾತಿ ವ್ಯವಸ್ಥೆ ತುಂಬಿ ತುಳುಕುತ್ತಿದ್ದ ಭಾರತದಲ್ಲಿ ಹುಟ್ಟಿದ್ದೇ ಒಂದು ಮಹಾ ವಿಸ್ಮಯ. ಡಾ.ಬಾಬಾಸಾಹೇಬ ಅಂಬೇಡ್ಕರ್‌ ಅವರು ಕೇವಲ ದಲಿತರಿಗಾಗಿ ಮಾತ್ರ ಕೆಲಸ ಮಾಡಿದ್ದಾರೆ ಎನ್ನುವುದು ತಪ್ಪು. ಡಾ.ಅಂಬೇಡ್ಕರ್ ಅವರು ಈ ದೇಶದ ಪ್ರತಿಯೊಬ್ಬರಿಗಾಗಿಯೂ ಕೆಲಸ ಮಾಡಿದ್ದಾರೆ. ಇಂದು ದೇಶದ ಎಲ್ಲ ಜಾತಿಗಳ ಪ್ರತಿಯೊಬ್ಬರೂ ಕೂಡ ಡಾ.ಬಾಬಾಸಾಹೇಬ ಅಂಬೇಡ್ಕರ್‌ ಅವರು ಮಾಡಿದ ಕೆಲಸದ ಫಲಾನುಭವಿಗಳಾಗಿದ್ದಾರೆ, ಅಷ್ಟೇ ಅಲ್ಲ ತುಂಬಾ ಸಂಕಷ್ಟದ ಪರಿಸ್ಥಿತಿಯಲ್ಲಿದ್ದ ಮಹಿಳೆಯರಿಗೆ ಹಕ್ಕುಗಳನ್ನು ನೀಡಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಕಾರಣರಾದವರೇ ಅಂಬೇಡ್ಕರ್ ಅವರು. ಈ ದೇಶದ ರಿಸರ್ವ್ ಬ್ಯಾಂಕ್, ಕೃಷಿ, ಕಾರ್ಮಿಕ, ನೀರಾವರಿ, ಅರ್ಥವ್ಯವಸ್ಥೆಯಂತಹ ಅನೇಕ ಕ್ಷೇತ್ರಗಳಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ ಅವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ ಅಧ್ಯಕ್ಷೆ ಕಾಂತಾ ನಾಯಕ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರುಕ್ಸಾನಾ ಉಸ್ತಾದ, ಕಾಂಗ್ರೆಸ್ ಮುಖಂಡ ಡಿ.ಎಚ್. ಕಲಾಲ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಚಾಂದಸಾಬ ಗಡಗಲಾವ, ಮಹಾದೇವಿ ಗೋಕಾಕ, ಸುಬಾಷ ಕಾಲೇಬಾಗ, ಪೀರಪ್ಪ ನಡುವಿನಮನಿ, ಅಫ್ಜಲ್ ಜಾನವೆಕರ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಮೀರಅಹ್ಮದ ಬಕ್ಷಿ, ಜಿಲ್ಲಾ ಕಾಂಗ್ರೆಸ್ ಅಂಗ ಘಟಕಗಳ ಅಧ್ಯಕ್ಷ ಶಬ್ಬೀರ ಜಾಗೀರದಾರ, ನಿಂಗಪ್ಪಾ ಸಂಗಾಪೂರ, ದೇವಾನಂದ ಲಚ್ಯಾಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಹೇಬಗೌಡ ಬಿರಾದಾರ, ವಸಂತ ಹೊನಮೊಡೆ, ಹಾಜಿಲಾಲ ದಳವಾಯಿ, ಚನಬಸಪ್ಪ ನಂದರಗಿ, ಶರಣಪ್ಪ ಯಕ್ಕುಂಡಿ, ಅಸ್ಫಾಕ ಮನಗೂಳಿ, ಹಾಜಿಲಾಲ ದಳವಾಯಿ, ಸಂತೋಷ ಬಾಲಗಾಂವಿ, ಲಕ್ಷ್ಮೀ ಕ್ಷೀರಸಾಗರ, ಸತೀಶ ಅಡವಿ, ತಾಜುದ್ದೀನ ಖಲೀಫಾ, ಬಾಬು ಯಾಳವಾರ, ಅಕಬರ ನಾಯಕ, ಬಿ.ಎಸ್. ಬ್ಯಾಳಿ, ಕಾಶಿಬಾಯಿ ಹಡಪದ, ಲಾಲಸಾಬ ಕೊರಬು, ಎಮ್.ಎಮ್. ಮುಲ್ಲಾ, ಕೃಷ್ಣಾ ಲಮಾಣಿ, ಸಂಜಯ ಚವ್ಹಾಣ, ನಾಗೇಶ ತಾಳಿಕೋಟಿ, ಭಾರತಿ ಹೊಸಮನಿ, ಶಮಿಮಾ ಅಕ್ಕಲಕೋಟ, ಇಲಿಯಾಸ ಅಹ್ಮದ ಸಿದ್ದಿಕಿ, ಲಕ್ಷ್ಮಣ ಇಲಕಲ್, ಅಯುಬಖಾನ ನದಾಫ್, ನಿಸಾರ ಮುಜಾವರ, ಗಂಗಾಬಾಯಿ ಕಣಮುಚನಾಳ, ಅನ್ನಪೂರ್ಣ ಬೀಳಗಿಕರ, ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ