ಪಾಂಡವಪುರ ಬಸ್ ಡಿಪೋದಲ್ಲಿ ಅಂಬೇಡ್ಕರ್ ಜಯಂತಿ

KannadaprabhaNewsNetwork |  
Published : Apr 15, 2026, 01:45 AM IST
14ಕೆಎಂಎನ್ ಡಿ20 | Kannada Prabha

ಸಾರಾಂಶ

ಪಾಂಡವಪುರ ಡಿಫೋ ಘಟಕದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ನೌಕರರು ಸಹ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದೀರಾ. ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸುವುದು ನಮ್ಮೆಲ್ಲ ಕರ್ತವ್ಯ. ಉಳಿದೆಲ್ಲ ಡಿಪೋಗಳಿಗೆ ಓಲಿಕೆ ಮಾಡಿದರೆ ಇಲ್ಲಿನ ನೌಕರರು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ಡಿಪೋನಲ್ಲಿ ಸಾರಿಗೆ ನೌಕರರ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಪಟ್ಟಣದ ಬಸ್ ಡಿಪೋ ಆವರಣದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಸಿ ಬಳಿಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕೇಕ್‌ ಕತ್ತರಿಸುವ ಮೂಲಕ ಜಯಂತಿಯನ್ನು ಸಾರಿಗೆ ಇಲಾಖೆ ವಿಭಾಗೀಯ ನಿಯಂತ್ರಣಾಧಿಕಾರಿ ಶರಣ್‌ಬಸವರಾಜು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ನಾವೆಲ್ಲರು ಸಹ ಸಂವಿಧಾನಶಿಲ್ಪಿ ಅಂಬೇಡ್ಕರ್ ಅವರು ವಿಚಾರಧಾರೆಗಳು, ಚಿಂತನೆ ಧ್ಯೇಯೋದ್ದೇಶಗಳನ್ನು ತಿಳಿದುಕೊಂಡು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು.

ಪಾಂಡವಪುರ ಡಿಫೋ ಘಟಕದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ನೌಕರರು ಸಹ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದೀರಾ. ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸುವುದು ನಮ್ಮೆಲ್ಲ ಕರ್ತವ್ಯ. ಉಳಿದೆಲ್ಲ ಡಿಪೋಗಳಿಗೆ ಓಲಿಕೆ ಮಾಡಿದರೆ ಇಲ್ಲಿನ ನೌಕರರು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

ಪಾಂಡವಪುರ- ಶ್ರೀರಂಗಪಟ್ಟಣ- ಮದ್ದೂರು ಹೊಸ ಮಾರ್ಗ ರಚಿಸುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಶೀಘ್ರವೇ ಕ್ರಮ ವಹಿಸಲಾಗುವುದು ಎಂದರು. ಇದೇ ವೇಳೆ ವರ್ಗಾವಣೆಗೊಂಡ ಚಾಲಕ ಸಿದ್ದಪ್ಪ ಅವರನ್ನು ಅಭಿನಂದಿಸಲಾಯಿತು.

ಈ ವೇಳೆ ಸೆಕ್ಷನ್ ಅಧಿಕಾರಿ ರವೀಂದ್ರ, ಲೆಕ್ಕಾಧಿಕಾರಿ ರವಿಕುಮಾರ್, ಡಿಪೋ ಮೇನೆಜರ್ ಮಮತ, ವಿಭಾಗೀಯ ತಾಂತ್ರಿಕ ಅಧಿಕಾರಿ ಚುಂಚಯ್ಯ, ವಕೀಲ ನಲ್ಲಹಳ್ಳಿ ಸುರೇಶ್, ಸೇರಿದಂತೆ ನೌಕರರು, ಸಿಬ್ಬಂದಿ ಹಾಜರಿದ್ದರು.ನಾಡಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ

ಹಲಗೂರು:ನಾಡಕಚೇರಿ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮದಿನವನ್ನು ಸಡಗರದಿಂದ ಆಚರಿಸಲಾಯಿತು.

ಉಪ ತಹಸೀಲ್ದಾರ್ ಕೆ.ನಟರಾಜ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ಮಾಲೆ ಅರ್ಪಿಸಿ ಪೂಜೆ ಸಲ್ಲಿಸಿದ ನಂತರ, 135ನೇ ವರ್ಷದ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿದರು.ನಂತರ ಮಾತನಾಡಿದ ಅವರು, ಪ್ರತಿ ವರ್ಷದಂತೆ ಏ.14ರಂದು ನಾಡಕಚೇರಿಯಲ್ಲಿ ಎಲ್ಲಾ ಸಿಬ್ಬಂದಿಯವರು ಒಗ್ಗಟ್ಟಾಗಿ ಸೇರಿ ಅಂಬೇಡ್ಕರ್ ಜಯಂತಿ ಆಚರಿಸಿದ್ದೇವೆ. ಸಮಾಜದಲ್ಲಿ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಎಲ್ಲಾ ವರ್ಗದವರಿಗೆ ನ್ಯಾಯ ಸಿಗುವಂತೆ ಅನುಕೂವಾಗುವಂತಹ ಸಂವಿಧಾನ ರಚಿಸಿದ್ದಾರೆ ಎಂದರು.

ಇದೇ ವೇಳೆ ನಾಡ ಕಚೇರಿಯಲ್ಲಿ ಅಳವಡಿಸಿರುವ ಮಹಾತ್ಮ ಗಾಂಧೀಜಿ ಭಾವಚಿತ್ರ ಸೇರಿದಂತೆ ಗಣ್ಯರ ಭಾವಚಿತ್ರಗಳಿಗೆ ಮತ್ತು ಮುತ್ತತ್ತಿರಾಯ, ಹೆಬ್ಬೆಟ್ಟದ ಬಸವೇಶ್ವರ, ಗುಂಡಾಪುರದ ಬೆಟ್ಟದರಮ್ಮನ ಭಾವಚಿತ್ರಗಳಿಗೆ ಪುಷ್ಪ ಮಾಲೆ ಅರ್ಪಿಸಿ ವಿಶೇಷವಾಗಿ ಪೂಜೆ ಸಲ್ಲಿಸಲಾಯಿತು.ಈ ವೇಳೆ ಕಚೇರಿ ಸಿಬ್ಬಂದಿಯಾದ ರಾಜಸ್ವ ನಿರೀಕ್ಷಕರಾದಮಧುಸೂದನ್, ಗ್ರಾಮ ಆಡಳಿತಾಧಿಕಾರಿ ಸೋಮಣ್ಣ, ಸಿದ್ದರಾಯಿಮೌಳಿ , ಲತಾ ಹಾಗೂ ಗ್ರಾಮಸೇವಕರಾದ ಶಿವಪ್ರಕಾಶ್, ಮಹಾದೇವಸ್ವಾಮಿ ,ಕನಕ, ಪುಟ್ಟಸ್ವಾಮಿ, ಅನಿಲ್, ಬಿ.ಎಸ್. ನವೀನ, ನಂಜುಂಡ ,ನಂದನ್, ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್ಲರ ಧ್ವನಿಗೆ ಶಕ್ತಿಯಾಗಿದ್ದ ಬಾಬಾ ಸಾಹೇಬರು: ರಮೇಶ್‌ ಬಂಡಿಸಿದ್ದೇಗೌಡ
ಅಂಬೇಡ್ಕರ್ ಜತೆ ಬಾಬೂಜಿ ಪೋಟೋ ಇಟ್ಟಿದ್ದಕ್ಕೆ ಆಕ್ಷೇಪ