ಕನ್ನಡಪ್ರಭ ವಾರ್ತೆ ಜಮಖಂಡಿತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಬಾರ್‌ ಮುಂದೆ ನಿಲ್ಲಿಸಿದ್ದ ಮಹಿಂದ್ರಾ ಕಂಪನಿಗೆ ಸೇರಿದ ಎಕ್ಸಯುವಿ 300 ಕಾರು ಸ್ಫೋಟಗೊಂಡು ಸಾಕಷ್ಟು ಸುದ್ದಿಯಾಗಿತ್ತು. ಆದರೆ, ಕಾರ್ ಸ್ಫೋಟಕ್ಕೆ ನಿಖರವಾದ ಕಾರಣಗಳು ಇನ್ನೂ ಪತ್ತೆಯಾಗಿಲ್ಲ. ಮಂಗಳವಾರ ಉತ್ತರ ವಲಯ ಐಜಿಪಿ ಸಂದೀಪ ಪಾಟೀಲ, ಎಸ್‌.ಪಿ. ಸಿದ್ದಾರ್ಥ ಗೊಯಲ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಬಾರ್‌ ಮುಂದೆ ನಿಲ್ಲಿಸಿದ್ದ ಮಹಿಂದ್ರಾ ಕಂಪನಿಗೆ ಸೇರಿದ ಎಕ್ಸಯುವಿ 300 ಕಾರು ಸ್ಫೋಟಗೊಂಡು ಸಾಕಷ್ಟು ಸುದ್ದಿಯಾಗಿತ್ತು. ಆದರೆ, ಕಾರ್ ಸ್ಫೋಟಕ್ಕೆ ನಿಖರವಾದ ಕಾರಣಗಳು ಇನ್ನೂ ಪತ್ತೆಯಾಗಿಲ್ಲ. ಮಂಗಳವಾರ ಉತ್ತರ ವಲಯ ಐಜಿಪಿ ಸಂದೀಪ ಪಾಟೀಲ, ಎಸ್‌.ಪಿ. ಸಿದ್ದಾರ್ಥ ಗೊಯಲ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಪಿ ಸಿದ್ದಾರ್ಥ ಗೊಯಲ್‌, ಸ್ಫೋಟದ ತನಿಖೆ ನಡೆಯುತ್ತಿದೆ. ಎಫ್‌ಎಸ್‌ಎಲ್‌ ತಂಡ ಹಾಗೂ ಫಾರೆನ್‌ಸಿಕ್‌ ನವರು ತನಿಖೆ ನಡೆಸಿ ಅಗತ್ಯವಾದ ಸಾಕ್ಷಗಳನ್ನು ಸಂಗ್ರಹಿಸಿದ್ದಾರೆ. ಅವರು ವರದಿ ಸಲ್ಲಿಸಿದ ನಂತರ ಸತ್ಯಾಂಶ ಹೊರಬೀಳಲಿದೆ. ಘಟನೆಯ ಕುರಿತು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ ಎಂದರು. ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಇದ್ದರು.