ಮುದಗಲ್: ಐತಿಹಾಸಿಕ ಮುದಗಲ್ ಪಟ್ಟಣದ ಪುರಸಭೆ ಕಾರ್ಯಾಲಯ ಹಾಗೂ ನಾಡ ಕಾರ್ಯಾಲಯ, ಪೋಲಿಸ್ ಠಾಣೆ ಮತ್ತು ಶಾಲೆ ಕಾಲೇಜುಗಳಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 133ನೇ ಜಯಂತಿ ಆಚರಣೆ ಮಾಡಿದರು.
ಪೋಲಿಸ್ ಠಾಣೆಯಲ್ಲಿ ಪಿಎಸ್ಐ ಸದ್ದಾಮ್ ಹುಸೇನ್ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರು ಶರಣಪ್ಪ ಕಟ್ಟಿಮನಿ, ಬಸವರಾಜ ಬಂಕದಮನಿ ವೆಂಕಟೇಶ ಹಿರೇಮನಿ, ಕೃಷ್ಣ ಛಲುವಾದಿ, ಲಖನ್''''''''ಟಿಪ್ಪುಸುಲ್ತಾನ್, ಕ್ರೈಂ ಪಿಎಸ್ಐ ಮಲ್ಲಪ್ಪ, ಪೊಲೀಸ್ ಸಿಬ್ಬಂದಿ ಅಮರೇಶ್, ನಾಡ ಕಾರ್ಯಾಲಯ ಸಿಬ್ಬಂದಿ ಮುನ್ನಿರ್ ಧಳಪತಿ, ದೀಪಾ, ಪುರಸಭೆ ಸಿಬ್ಬಂದಿ ಝಕೀಯಾ, ಮಹಾಲಿಂಗರಾಯ, ಜಿಲಾನಿ ಪಾಷ, ಬಸವರಾಜ ಕೊಟ್ಟೂರು, ಪವನ್ ಕುಮಾರ ಶಾಮೀದ್ ಇಪ್ತಾಖಾರ್, ರವಿ, ಪೌರಕಾರ್ಮಿಕರು ಸೇರಿದಂತೆ ಮುಂತಾದವರು ಇದ್ದರು.