ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಪಟ್ಟಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಬಳಿಕ ಎಂಜಿಎಸ್ವಿ ಮೈದಾನದಲ್ಲಿ ಬುದ್ಧನಮನ ಸಲ್ಲಿಸಿ, ಬಳಿಕ ಅಲಂಕೃತಗೊಂಡಿದ್ದ ತೆರೆದ ವಾಹನದಲ್ಲಿಟ್ಟಿದ್ದ ಅಂಬೇಡ್ಕರ್ ಭಾವಚಿತ್ರಕ್ಕೆ ಬಸ್ತೀಪುರದ ಯಜಮಾನರು ಪುಷ್ಪನಮನ ಅರ್ಪಿಸಿದ ಬಳಿಕ ಮೆರವಣಿಗೆಗೆ ಚಾಲನೆ ದೊರೆಯಿತು. ಎಂಜಿಎಸ್ವಿ ಮೈದಾನದಿಂದ ಮಂಗಳವಾದ್ಯದ ಮೂಲಕ ಹೊರಟ ಮೆರವಣಿಗೆ ಶ್ರೀನಿವಾಸ ಟಾಕೀಸ್ ರಸ್ತೆ ಮೂಲಕ ಬಸ್ತೀಪುರಕ್ಕೆ ಆಗಮಿಸಿತು. ಈ ವೇಳೆ ತಮಟೆ ಸದ್ದಿಗೆ ಯುವಕರು ಹಾಗೂ ಗ್ರಾಮಸ್ಥರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಶಾಂತರಾಜು, ಮಾಜಿ ಶಾಸಕ ಎಸ್ ಜಯಣ್ಣ ಆಪ್ತ ಸಹಾಯಕ ಬಸ್ತಿಪುರ ಪ್ರಕಾಶ್, ಬಸ್ತೀಪುರ ಬಡಾವಣೆಯ ಯಜಮಾನ ಪುಟ್ಟಮಾದಯ್ಯ, ಸಿದ್ದರಾಜು ಸಣ್ಣಮಾದಯ್ಯ, ಶಿವಕುಮಾರ್, ರವಿ, ಸೋಮಣ್ಣ , ಮಹೇಶ್, ಸಿದ್ದರಾಜು ಬತಯ್ಯ, ಸಿದ್ದರಾಜು ರಾಚಯ್ಯ, ಸೋಮಸುಮಮದರ್, ಟಿ.ನಂಜಯ್ಯ, ಮಾದೇಶ, ಮುದ್ದ ಮಾದ, ಮುಖಂಡರುಗಳಾದ ಬಸ್ತೀಪುರ ರವಿ, , ಮಾದೇಶ , ಸುರೇಶ್, ಪುಟ್ಟರಾಜು, ದೊಡ್ಡಾಳು, ನಗರಸಭೆ ಸದಸ್ಯ, ಸ್ವಾಮಿನಂಜಪ್ಪ, ಬ್ಲೂ ಸ್ಟಾರ್ ಜೈ ಭೀಮ್ ಬಾಯ್ಸ್ ತಂಡದ ಸಂಜು, ರಾಜು, ಸಿದ್ದರಾಜು, ರವಿ, ಅಭಯ್, ಕೆಮಚ, ಹೇಮಂತ್, ಸುಪ್ರೀತ್, ಕೆಂಪರಾಜು, ಪಾಮಿ, ನಿಂಗರಾಜು, ಮೋಹನ್, ಶಾಂತರಾಜು, ಉದಯ್ ಕುಮಾರ್, ದರ್ಶನ್, ನಿಶಾಂತ್, ಸಿದ್ದಪ್ಪ, ಅಭಿ, ನವೀನ್ ಇದ್ದರು.