ಪಾವಗಡ: ಸಂವಿಧಾನ ಅರ್ಥೈಸಿಕೊಳ್ಳುವ ಮೂಲಕ ಪ್ರಗತಿ ಕಾಣುವಂತೆ ತಾಲೂಕು ಕಾಂಗ್ರೆಸ್ ಮುಖಂಡ, ಬ್ಯಾಡನೂರು ಗ್ರಾಪಂ ಅಧ್ಯಕ್ಷ ಗುಂಡರ್ಲಹಳ್ಳಿ ಅಡಿಟರ್ ಗೋಪಾಲಕೃಷ್ಣ ಕರೆ ನೀಡಿದರು.
ಈ ದೇಶಕ್ಕೆ ಅಂಬೇಡ್ಕರ್ ಕೊಡುಗೆ ಅಪಾರವಾಗಿದೆ. ಅವರು ತಮ್ಮ ಸಂವಿಧಾನದ ಮೂಲಕ ಎಲ್ಲ ವರ್ಗದ ಜನತೆಗೆ ಸಾಮಾಜಿಕ ನ್ಯಾಯ ಕಲ್ಪಿಸಿದ್ದಾರೆ. ದೇಶದ ಸುಭದ್ರತೆ,ರಕ್ಷಣೆ ಹಾಗೂ ಪ್ರತಿಯೊಬ್ಬರ ಪ್ರಗತಿಗೆ ಅದ್ಯತೆ ನೀಡಿದ್ದಾರೆ. ಅಂತಹ ಮಹನ್ ನಾಯಕನನ್ನು ನಾವು ಸ್ಮರಿಸಬೇಕಿದೆ ಎಂದರು.
ಹಿರಿಯ ಮುಖಂಡರಾದ ಬಲರಾಮರೆಡ್ಡಿ, ನಿವೃತ್ತ ಮುಖ್ಯೋಪಾಧ್ಯಾಯ ನರಸಪ್ಪ, ಮದ್ದಿಬಂಡೆ ಎಂ.ಜೆ.ಕೃಷ್ಣಮೂರ್ತಿ, ಗೋವಿಂದರಾಜು,ನಾಗಪ್ಪ ಓಬಳ ನರಸಿಂಹಪ್ಪ, ಗಂಗಾಧರಪ್ಪ ನರಸಿಂಹಪ್ಪ ಗುಂಡಪ್ಪ ಇತರರು ಇದ್ದರು.