ಸ್ವಾತಂತ್ರ್ಯ, ಸಮಾನತೆ, ತಳಹದಿಯ ಮೇಲೆ ಮಾತ್ರ ಒಂದು ಆದರ್ಶವಾದ ಸಮಾಜ ನಿರ್ಮಿಸಿಲು ಸಾಧ್ಯ. ಅಂತಹ ಶ್ರೇಷ್ಠ ಸಮಾಜ ನಿರ್ಮಾಣಕ್ಕಾಗಿ ಕ್ರಾಂತಿ ಅಗತ್ಯ ಎಂಬುದನ್ನು ಮನಗಂಡ ಅಂಬೇಡ್ಕರ್ ಅವರು ತಮ್ಮ ಜೀವನದ ಉದ್ದಕ್ಕೂ ಹೋರಾಟ ನಡೆಸಿ ಶೋಷಿತ ಜನಾಂಗಕ್ಕೆ ಸಮಾನತೆ, ಸ್ವಾಂತಂತ್ರ್ಯ, ಶಿಕ್ಷಣ, ಸ್ವಾವಲಂಬನೆ ನೀಡಿ ಅವರ ಬೌದ್ಧಿಕ ವಿಕಾಸಕ್ಕೆ ಅವಕಾಶ ನೀಡಬೇಕಾದ ಅಗತ್ಯತೆಯನ್ನು ಅವರು ಸಮಾಜಕ್ಕೆ ಸಾರಿದರು ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಆಲೂರು
ಸಮಾಜದಲ್ಲಿನ ಅಸಮಾನತೆ, ಅನ್ಯಾಯದ ವಿರುದ್ಧ ಹೋರಾಟ ನಡೆಸಿ, ಶೋಷಿತ ಜನಾಂಗದ ಸರ್ವಾಂಗೀಣ ಪ್ರಗತಿಗೆ ಹಾಗೂ ಸಾಮಾಜಿಕ ನ್ಯಾಯಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಮಹಾ ಚೇತನ ಡಾ ಬಿ. ಆರ್ ಅಂಬೇಡ್ಕರ್ ಅವರು ಎಂದು ತಹಸೀಲ್ದಾರ್ ಎಚ್. ಮಲ್ಲಿಕಾರ್ಜುನ್ ತಿಳಿಸಿದರು.ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ ಬಿ. ಆರ್ ಅಂಬೇಡ್ಕರ್ 135ನೇ ವರ್ಷದ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸ್ವಾತಂತ್ರ್ಯ, ಸಮಾನತೆ, ತಳಹದಿಯ ಮೇಲೆ ಮಾತ್ರ ಒಂದು ಆದರ್ಶವಾದ ಸಮಾಜ ನಿರ್ಮಿಸಿಲು ಸಾಧ್ಯ. ಅಂತಹ ಶ್ರೇಷ್ಠ ಸಮಾಜ ನಿರ್ಮಾಣಕ್ಕಾಗಿ ಕ್ರಾಂತಿ ಅಗತ್ಯ ಎಂಬುದನ್ನು ಮನಗಂಡ ಅಂಬೇಡ್ಕರ್ ಅವರು ತಮ್ಮ ಜೀವನದ ಉದ್ದಕ್ಕೂ ಹೋರಾಟ ನಡೆಸಿ ಶೋಷಿತ ಜನಾಂಗಕ್ಕೆ ಸಮಾನತೆ, ಸ್ವಾಂತಂತ್ರ್ಯ, ಶಿಕ್ಷಣ, ಸ್ವಾವಲಂಬನೆ ನೀಡಿ ಅವರ ಬೌದ್ಧಿಕ ವಿಕಾಸಕ್ಕೆ ಅವಕಾಶ ನೀಡಬೇಕಾದ ಅಗತ್ಯತೆಯನ್ನು ಅವರು ಸಮಾಜಕ್ಕೆ ಸಾರಿದರು ಎಂದು ತಿಳಿಸಿದರು.ಮಾಜಿ ಶಾಸಕ ಎಚ್. ಕೆ ಕುಮಾರಸ್ವಾಮಿ ಮಾತನಾಡಿ, ಡಾ ಬಿ. ಆರ್. ಅಂಬೇಡ್ಕರ್ ವಿಶ್ವ ಕಂಡ ಸಮಾಜ ಸುಧಾರಕ, ಮಹಾ ಮಾನವತಾವಾದಿ. ಈ ದೇಶದ ಇತಿಹಾಸವನ್ನೇ ಬದಲಾಯಿಸಿದ ಇಂತಹ ಮಹಾತ್ಮ ಶತಮಾನ ಕಳೆದರೂ ಹುಟ್ಟೋದಿಲ್ಲ. ಅವರ ಜೀವನ ಚರಿತ್ರೆಯೇ ಎಂಥವರಲ್ಲೂ ಛಲ ಹೋರಾಟ, ಸಮಾನತೆಗಾಗಿ ತ್ಯಾಗ ಮಾಡುವ ಮನೋಭಾವ ಮೂಡಿಸುವಂತಹದು. ಅವರು ತಮ್ಮ ಜೀವನದುದ್ದಕ್ಕೂ ಅನುಭವಿಸಿದ ಕಷ್ಟ, ಅವಮಾನ ಎಲ್ಲವನ್ನು ಸಹಿಸಿಕೊಂಡು ಶೋಷಿತ ಜನಾಂಗದ ಏಳಿಗೆಗೆ ನನಗಾಗಿ ಬದುಕದೇ ಶೋಷಿತ ಜನಾಂಗಕ್ಕಾಗಿ ಹೋರಾಡಿದ ತಾಳ್ಮೆಯ ಪ್ರತಿರೂಪವೆಂದರೆ ಅವರು ಅಂಬೇಡ್ಕರ್ ಅವರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಹಾಸನ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಮಂಜಯ್ಯ, ಶತಮಾನಗಳಿಂದ ತುಳಿತಕ್ಕೆ ಒಳಗಾದ ಜನಾಂಗದ ಮೂಲಕ ಅಂಬೇಡ್ಕರ್ ಅವರು ಜಾತ್ಯತೀತ, ಸಮಾಜವಾದಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಚಲವಾದ ವಿಶ್ವಾಸವನ್ನು ಹೊಂದಿದ್ದರು, ಮಾನವೀಯತೆಯ ಮೂರ್ತಿಗಳಾಗಿದ್ದ ಅವರು ಇಲ್ಲಿಯವರೆಗೆ ಯಾರೋ ಮಾಡಲಾಗದಂತಹ ಶೈಕ್ಷಣಿಕ ಸಾಧನೆಯನ್ನು ಮಾಡಿದಂತ ಇವರು 29 ಪದವಿಗಳು ಹಾಗೂ 6 ಡಾಕ್ಟರೇಟ್ ಪದವಿಗಳನ್ನು ಅತ್ಯುನ್ನತ ವಿಶ್ವವಿದ್ಯಾಲಯಗಳಲ್ಲಿ ಪಡೆದ ಇವರು ದಿನ ದಲಿತ ನೋವಿಗೆ ಸದಾ ಸ್ಪಂದಿಸುತ್ತಿದ್ದ ಮಹಾಪುರುಷರಾಗಿದ್ದರು, ಶೋಷಿತ ಜನಾಂಗಕ್ಕೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಮತ್ತು ರಾಜಕೀಯ ಸಮಾನ ಅವಕಾಶಗಳನ್ನು ಕಾನೂನುಬದ್ಧವಾಗಿ ಲಭ್ಯವಾಗುವಂತೆ ಹೋರಾಟ ನಡೆಸಿದ ಫಲವಾಗಿ ಪ್ರಪಂಚದಲ್ಲಿಯೇ ಅತಿ ಹೆಚ್ಚು ಕ್ಯೊಟ್ಯಂತರ ಸಂಖ್ಯೆಯಲ್ಲಿ ಪವಿಗಳನ್ನು ಪಡೆದಿದ್ದಾರೆ. ಅಂಬೇಡ್ಕರ್ ಅವರ ಹೆಸರಿನಲ್ಲಿ ಇಂದು ಸಾವಿರದಷ್ಟು ಸಂಘಟನೆಗಳು ಇಡೀ ವಿಶ್ವದಲ್ಲಿ ರೂಪಗೊಂಡಿವೆ, ಜ್ಞಾನ ಪ್ರತೀಕವೆಂದು ತಿಳಿಸಿದ ಅವರು ಪ್ರಗತಿಗೆ ವಿದ್ಯೆಯೇ ಮೂಲ ಎಂಬ ಅಕ್ಷರ ಮಂತ್ರವನ್ನು ಜೋಡಿಸಿದ ಡಾ. ಬಿ ಆರ್ ಅಂಬೇಡ್ಕರ್ ದಲಿತ ಜನಾಂಗದ ಆಶಾಕಿರಣ. ಹಾಗಾಗಿ ಅವರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಂಡರೆ ನವ ಸಮಾಜವನ್ನು ನಿರ್ಮಾಣ ಮಾಡಲು ಉತ್ತಮವಾದ ಬೋಧನೆ, ಚಿಂತನೆ ಮತ್ತು ಮಾರ್ಗದರ್ಶನದ ಮೂಲಕ ಸಾಧ್ಯ ಎಂದು ತಿಳಿಸಿದರು.ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಕೊನೆಪೇಟೆಯಿಂದ ಡಾ. ಬಿ. ಆರ್ ಅಂಬೇಡ್ಕರ್ ಭಾವಚಿತ್ರವನ್ನು ಸರೋಟಿನಲ್ಲಿಟ್ಟು ತಾಲೂಕು ಕಚೇರಿಯವರೆಗೂ ಮೆರವಣಿಗೆ ಮಾಡಲಾಯಿತು. ನಂತರ ಎಸ್.ಎಸ್.ಎಲ್.ಸಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಚಂಚಲ ಕುಮಾರಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ, ತಾಪಂ ಕಾರ್ಯನಿರ್ವಹಕ ಅಧಿಕಾರಿ ಸುಬ್ರಮಣ್ಯ ಶರ್ಮ, ಪ.ಪಂ ಮುಖ್ಯಾಧಿಕಾರಿ ಮಂಜುನಾಥ್, ಸಮಾಜ ಕಲ್ಯಾಣಾಧಿಕಾರಿ ಕೌಸರ್ ಅಹಮದ್, ಜಿಪಂ ಎಇಇ ರಮೇಶ್, ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಎಸ್ ಮಂಜೇಗೌಡ, ಡಿಎಸ್‌ಎಸ್ ಮುಖಂಡರಾದ ಯೋಗೇಶ್, ಬಸವರಾಜು, ಅರಸಪ್ಪ, ದೊರೆಸ್ವಾಮಿ, ಉಮೇಶ್, ಹರೀಶ್, ರವಿ, ಮಂಜು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಅಂಬೇಡ್ಕರ್ ಅಭಿಮಾನಿಗಳು ಹಾಜರಿದ್ದರು, ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಡಾ. ಬಿ. ಆರ್ ಅಂಬೇಡ್ಕರ್ 135ನೇ ವರ್ಷದ ಜಯಂತಿ ಕಾರ್ಯಕ್ರಮದದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಮಾಜಿ ಶಾಸಕ ಎಚ್.ಕೆ ಕುಮಾರಸ್ವಾಮಿ, ತಹಸೀಲ್ದಾರ್ ಮಲ್ಲಿಕಾರ್ಜುನ್, ಹಾಸನ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೋ ಮಂಜಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ, ತಾಪಂ ಕಾರ್ಯನಿರ್ವಹಕ ಅಧಿಕಾರಿ ಸುಬ್ರಮಣ್ಯ ಶರ್ಮ, ಸಮಾಜ ಕಲ್ಯಾಣಾಧಿಕಾರಿ ಕೌಸರ್ ಅಹಮದ್ ಮುಂತಾದವರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.