ಹಿಂದೂ ಸಂಗಮದಲ್ಲಿ ಅಂಬೇಡ್ಕರ್‌ ಚಿತ್ರ : ಕಾನೂನು ಕ್ರಮಕ್ಕೆ ಜಯನ್ ಆಗ್ರಹ

KannadaprabhaNewsNetwork |  
Published : Jan 30, 2026, 02:45 AM IST
28ಅಂಬೇಡ್ಕರ್ | Kannada Prabha

ಸಾರಾಂಶ

: ಉಡುಪಿ ಜಿಲ್ಲೆಯಾದ್ಯಂತ ಹಿಂದೂ ಸಂಘಟನೆಗಳಿಂದ ನಡೆಯುತ್ತಿರುವ ಹಿಂದೂ ಸಂಗಮ ಕಾರ್ಯಕ್ರಮಗಳಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರವನ್ನು ಬಳಸುತ್ತಿರುವ ಬಗ್ಗೆ ದಲಿತ ಹೋರಾಟಗಾರ ಜಯನ್ ಮಲ್ಪೆ ಆಕ್ಷೇಪಿಸಿದ್ದಾರೆ.

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಹಿಂದೂ ಸಂಘಟನೆಗಳಿಂದ ನಡೆಯುತ್ತಿರುವ ಹಿಂದೂ ಸಂಗಮ ಕಾರ್ಯಕ್ರಮಗಳಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರವನ್ನು ಬಳಸುತ್ತಿರುವ ಬಗ್ಗೆ ದಲಿತ ಹೋರಾಟಗಾರ ಜಯನ್ ಮಲ್ಪೆ ಆಕ್ಷೇಪಿಸಿದ್ದಾರೆ.ಉಡುಪಿ ಜಿಲ್ಲೆಯ ಹಲವು ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಹಿಂದೂ ಸಂಗಮದ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮಗಳ ಬ್ಯಾನರ್ ಹಾಗೂ ಕಟೌಟ್‌ಗಳಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಬಳಸಲಾಗುತ್ತಿದೆ. 1956ರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಿಂದೂ ಧರ್ಮ ಬಿಟ್ಟು ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಅದಕ್ಕೆ ಮೊದಲೇ 1935ರಲ್ಲಿ ನಾನು ಹಿಂದುವಾಗಿ ಹುಟ್ಟಿದ್ದರೂ ಹಿಂದುವಾಗಿಯೇ ಸಾಯಲಾರೆ ಎಂದು ಫೋಷಿಸಿದ್ದರು. ಈ ವಾಸ್ತವ ವಿಚಾರ ಗೊತ್ತಿದ್ದರೂ ಅವರಿಗೆ ಅವಮಾನ ಮಾಡುವ ಉದ್ದೇಶದಿಂದಲೇ ಹಿಂದೂ ಸಮಾಜೋತ್ಸವದಲ್ಲಿ ಅವರ ಭಾವಚಿತ್ರ ಬಳಸಲಾಗುತ್ತಿದೆ ಎಂದವರು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

ದಲಿತ ಸಮಾಜವನ್ನು ಮತ್ತು ಅಂಬೇಡ್ಕರನ್ನು ಉದ್ದೇಶಪೂರ್ವಕವಾಗಿ ಅವಮಾನ ಮಾಡುವ ಹಿಂದು ಸಮಾಜೋತ್ಸವದ ಸಂಘಟಕರ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕು ಜಯನ್ ಮಲ್ಪೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎತ್ತಿನಹೊಳೆ ಗುತ್ತಿಗೇಲಿ ಹಲವು ಲೋಪ : ಸಿಎಜಿ
40 ವರ್ಷ ವಯಸ್ಸಾದರೂ ಸಿಗುತ್ತದೆ ಸರ್ಕಾರಿ ಕೆಲಸ