ಅಂಬೇಡ್ಕರ್‌ ಸಂವಿಧಾನ ಭಾರತದ ಉಸಿರು: ಮಹೇಶ

KannadaprabhaNewsNetwork |  
Published : Jan 18, 2025, 12:50 AM IST
ಕಾರ್ಯಕ್ರಮವನ್ನು ಮಹೇಶ ಪೋತದಾರ ಉದ್ಘಾಟಿಸಿದರು. | Kannada Prabha

ಸಾರಾಂಶ

ನಾವು ಇಂದು ಜಾತಿಗೊಬ್ಬ ಶರಣ, ಸಂತ, ಸ್ವಾಮೀಜಿ ಮತ್ತು ನಾಯಕರನ್ನು ಕಟ್ಟಿಕೊಂಡು ಬದುಕುತ್ತಿದ್ದೇವೆ.

ಮುಳಗುಂದ: ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ ಸಂವಿಧಾನವನ್ನು ಇಡೀ ವಿಶ್ವವೇ ಕೊಂಡಾಡುತ್ತಿರುವಾಗ ಈ ಭಾರತದಲ್ಲಿ ಈ ಸಂವಿಧಾನ ಯಾರು ಬರೆದಿದ್ದಾರೆ ಎಂಬ ಸಂಕುಚಿತ ಮನೋಭಾವನೆ ವ್ಯಕ್ತಿಗಳು ಡಾ. ಬಾಬಾಸಾಹೇಬರ್‌ ಸಂವಿಧಾನ ಅಲ್ಲಗಳೆಯಲು ಹೇಸುವುದಿಲ್ಲ. ಜಗತ್ತಿನ ಲಿಖಿತ ಸಂವಿಧಾನಗಳಲ್ಲಿ ಶ್ರೇಷ್ಠ ಸಂವಿಧಾನ ಬಹುಮೇಲ್ಪಂಥಿಯಲ್ಲಿ ನಿಲ್ಲುವ ಸಂವಿಧಾನ ಯಾವುದಾದರೂ ಇದ್ದರೆ ಅದು ಬಾಬಾಸಾಹೇಬರ್‌ ಸಂವಿಧಾನ ಭಾರತದ ಉಸಿರು ಎಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ ಹೇಳಿದರು.

ಸಮೀಪದ ಕಣವಿ ಗ್ರಾಮದಲ್ಲಿ ಕರ್ನಾಟಕ ಸರ್ಕಾರ, ತಾಲೂಕಾಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆ, ವಿವಿಧ ದಲಿತ ಸಂಘಟನೆ, ಸಂಘ ಸಂಸ್ಥೆ ಹಾಗೂ ಸೃಷ್ಠಿ ಜನಪದ ಕಲಾತಂಡ ಸಹಯೋಗದಲ್ಲಿ ಅಸ್ಪೃಶ್ಯ ನಿವಾರಣಾ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಎಸ್.ಸಿ,ಎಸ್.ಟಿ ದೌರ್ಜನ್ಯ ಸಮಿತಿ ಸದಸ್ಯ ಸಂಗಮೇಶ ಹಾದಿಮನಿ ಮಾತನಾಡಿ, ನಾವು ಇಂದು ಜಾತಿಗೊಬ್ಬ ಶರಣ, ಸಂತ, ಸ್ವಾಮೀಜಿ ಮತ್ತು ನಾಯಕರನ್ನು ಕಟ್ಟಿಕೊಂಡು ಬದುಕುತ್ತಿದ್ದೇವೆ.ನಮ್ಮ ನಮ್ಮ ಸಮುದಾಯದ ಆ ಮಹಾಪುರುಷರು ನಮ್ಮ ಸಮುದಾಯ ಮೀರಿ ಬೆಳೆದು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೇ ಉಳಿದಿದ್ದಾರೆ.ಇಂತಹವರ ಹೆಸರನ್ನು ಹೇಳಿಕೊಂಡು ನಾವು ಬದುಕುತ್ತಿರುವುದು ಎಷ್ಟು ಸರಿ.ಇಂದು ನಾವು ಅವರಿಗೆ ಅಪಮಾನ ಮಾಡುವ ರೀತಿಯಲ್ಲಿ ನಡೆದುಕೊಳ್ಳುವುದು ಖೇಧಕರ ಎಂದರು.

ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಎಂ. ಪಾಟೀಲ ಮಾತನಾಡಿದರು. ಕಾರ್ಯಕ್ರಮದಲ್ಲಿ ಹರ್ತಿ ಗ್ರಾಪಂ ಸದಸ್ಯ ಸೋಮರಡ್ಡಿ ನಡೂರ, ಗ್ರಾಪಂ ಅಧ್ಯಕ್ಷೆ ಹಾಲವ್ವ ಕುರಿ, ಉಪಾಧ್ಯಕ್ಷೆ ರೇಣುಕಾ ತಳವಾರ, ಸದಸ್ಯರಾದ ಪಾರ್ವತೆವ್ವ ಕುರ್ತಕೋಟಿ, ಮಹಾದೇವಿ ಬಳಿಗೇರ, ದೇವಕ್ಕ ಅಸುಂಡಿ, ಸಿ.ವಿ. ಪಾಟೀಲ, ಗಂಗಣ್ಣ ಗಡಾದ, ಕೃಷ್ಣಾ ನಾಗಲೋಟಿ, ಯಲ್ಲಪ್ಪ ಕೋರಿ, ಪ್ರಕಾಶ ಕುರ್ತಕೋಟಿ, ನ್ಯಾ. ಜಗನ್ನಾಥ ರಾಮಪುರ, ಗೋಪಾಲ ಲಮಾಣಿ, ಅಶ್ವಿನಿ ಕುರಡಗಿ, ಸುಜಾತಾ ಪಾಟೀಲ, ದೀಪಾ ಶೆಟ್ಟರ್, ವಸಂತ ಎಂ.ಎಲ್., ರಂಗಪ್ಪ ಓಲೆಕಾರ, ರಿಯಾಜ್ ಹಗರಖೇಡ, ಬಿ.ಎಸ್.ಗುಡಿ, ಗಣೇಶ ಲಮಾಣಿ ಇನ್ನೂ ಮುಂತಾದವರು ಇದ್ದರು.

ಬಸವರಾಜ ಈರಣ್ಣವರ ಸ್ವಾಗತಿಸಿ ನಿರೂಪಿಸಿದರು. ಕೊಟ್ರೇಶ ಜಕ್ಕಮ್ಮನವರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!