ಅಂಬೇಡ್ಕರ್ ಆಶಯ ಸೋಲಲು ಬಿಡಬಾರದು: ಡಾ.ಆರಡಿ ಮಲ್ಲಯ್ಯ

KannadaprabhaNewsNetwork |  
Published : Apr 15, 2026, 01:45 AM IST
ಪೋಟೋ: 14ಎಸ್‌ಎಂಜಿಕೆಪಿ02ಶಿವಮೊಗ್ಗದಲ್ಲಿ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಸಹ್ಯಾದ್ರಿ ಕಲಾ ಪರಿಷತ್, ಎನ್‌ಎಸ್‌ಎಸ್, ಎನ್‌ಸಿಸಿ, ರೆಡ್‌ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಯಿತು.  | Kannada Prabha

ಸಾರಾಂಶ

ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಆಶಯಗಳನ್ನು ಸೋಲಲು ಬಿಡಬಾರದು. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆ ಗಳ ಪಾತ್ರ ಬಹಳಿಷ್ಟಿದೆ ಎಂದು ಕೋಣಂದೂರು ಶರಾವತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಆರಡಿ ಮಲ್ಲಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಆಶಯಗಳನ್ನು ಸೋಲಲು ಬಿಡಬಾರದು. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆ ಗಳ ಪಾತ್ರ ಬಹಳಿಷ್ಟಿದೆ ಎಂದು ಕೋಣಂದೂರು ಶರಾವತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಆರಡಿ ಮಲ್ಲಯ್ಯ ಹೇಳಿದರು.

ನಗರದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಸಹ್ಯಾದ್ರಿ ಕಲಾ ಪರಿಷತ್, ಎನ್‌ಎಸ್‌ಎಸ್, ಎನ್‌ಸಿಸಿ, ರೆಡ್‌ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ 135ನೇ ಜನ್ಮ ದಿನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ, ಪ್ರಭುತ್ವ ಸೇರಿದಂತೆ ಶಿಕ್ಷಣ ಸಂಸ್ಥೆಗಳು ರಾಜಕೀಯ ಪಕ್ಷಗಳು ಅಂಬೇಡ್ಕರ್ ಅವರ ಆಶಯಗಳನ್ನು ಕರಗಿಸಲು ಹೊರಟಿರುವುದು ಅಪಾಯದ ಸಂಕೇತವಾಗಿದೆ ಅಥವಾ ತಪ್ಪಾಗಿ ದಾಟಿಸುವುದು ಕೂಡ ನಡೆಯುತ್ತಿದೆ. ಇದು ನಿಲ್ಲಬೇಕು. ಅವರ ತತ್ವ ಆದರ್ಶ ವಿಚಾರಧಾರೆ ಎಲ್ಲವೂ ವರ್ತಮಾನಗೊಳ್ಳಬೇಕು ಎಂದರು.

ಜಾತಿ ವ್ಯವಸ್ಥೆಯನ್ನು ನಾಶಗೊಳಿಸಲು ಹೊರಟಾಗ ಭಾರತದಲ್ಲಿ ಅವರಿಗೆ ಉಳ್ಳವರು ಸಹಕರಿಸಲಿಲ. ಇಂದು ಅನಿವಾರ್ಯಕ್ಕೆ ಕಾಟಾಚಾರಕ್ಕೆ ಅಂಬೇಡ್ಕರ್ ಅವರನ್ನು ನೆನೆಸಿಕೊಳ್ಳಲಾಗುತ್ತಿದೆ ಎಂದು ವಿಷಾದಿಸಿದರು ತಮ್ಮ ಜನರಿಗೆ ನ್ಯಾಯ ಕೊಡಿಸಬೇಕು ಎಂಬ ಅಂಬೇಡ್ಕರ್ ಅವರ ಆಶಯ ಮಾತ್ರ ಈಗ ವ್ಯರ್ಥವಾಗುತ್ತಿದೆ. ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.

ಇಂದು ಶಿಕ್ಷಣ ಸಂಸ್ಥೆಗಳು ಕೂಡ ಅಂಬೇಡ್ಕರ್ ಅವರನ್ನು ಅರ್ಥ ಮಾಡಿಸುವಲ್ಲಿ ವಿಫಲವಾಗಿವೆ. ಇದಕ್ಕೆ ಕಾರಣ ಮೇಷ್ಟ್ರುಗಳಿಗೆ ಅಧ್ಯಯನದ ಕೊರತೆ. ಅಧ್ಯಯನ ಅಧ್ಯಾಪನ, ಸಂಶೋಧನೆ ಅಂಬೇಡ್ಕರ್ ಅವರ ಆಶಯವಾಗಿತ್ತು. ಹಾಗಾಗಿ ಮೇಷ್ಟ್ರುಗಳಿಗೆ ಶಿಬಿರಗಳನ್ನು ಏರ್ಪಡಿಸಿ ಮಕ್ಕಳಿಗೆ ಹೇಗೆ ಪಾಠ ಮಾಡಬೇಕು ಅಂಬೇಡ್ಕರ್ ಅವರನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎಂಬುದನ್ನು ತಿಳಿಸಬೇಕಾಗಿದೆ ಎಂದು ಹೇಳಿದರು.

ಪ್ರಾಂಶುಪಾಲ ಡಾ.ಸಿರಾಜ್ ಅಹಮದ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಸಮಾನತೆ, ಸಾಮಾಜಿಕ ನ್ಯಾಯ, ಶೋಷಣೆ ಮುಕ್ತ ಸಮಾಜದ ಸಂಕೇತವಾಗಿದ್ದಾರೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ವಿಚಾರಧಾರೆಗಳು ದಮನಿತರಿಗೆ ಆತ್ಮಗೌರವ ಹಾಗೂ ಶಕ್ತಿಯನ್ನು ಒದಗಿಸಿವೆ. ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಹಕ್ಕುಗಳನ್ನು ಪಡೆಯುವ ಅವರ ಮೂಲಮಂತ್ರವು ಇಂದಿನ ಯುವ ಪೀಳಿಗೆಗೆ ಪ್ರೇರಣೆಯಾಗಿದೆ ಎಂದರು.

ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ.ಕೆ.ಎನ್.ಮಂಜುನಾಥ್, ಡಾ.ಬಿ.ಎಂ.ಚಂದ್ರಶೇಖರ್, ಡಾ.ಮೇಟಿ ಮಲ್ಲಿಕಾರ್ಜುನ್, ಡಾ.ಶಂಭುಲಿಂಗ ಮೂರ್ತಿ, ಡಾ.ಮಹದೇವಸ್ವಾಮಿ, ಡಾ.ಪ್ರಸನ್ನಕುಮಾರ್, ಡಾ ರೇಣುಕ, ಶೃಂಗಶ್ರೀ, ರಾಧ, ಡಾ.ರಮ್ಯ, ಡಾ.ಶೈಲಜ, ಪ್ರಿಯಂಕ, ಶ್ವೇತಶ್ರೀ, ಡಾ.ಶಬಾನ, ಡಾ.ಗಿರಿಜಮ್ಮ, ಸಂತೋಷ್, ಕುಮಾರಸ್ವಾಮಿ, ಹರೀಶ್, ಶಶಿಕುಮಾರ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್ಲರ ಧ್ವನಿಗೆ ಶಕ್ತಿಯಾಗಿದ್ದ ಬಾಬಾ ಸಾಹೇಬರು: ರಮೇಶ್‌ ಬಂಡಿಸಿದ್ದೇಗೌಡ
ಪಾಂಡವಪುರ ಬಸ್ ಡಿಪೋದಲ್ಲಿ ಅಂಬೇಡ್ಕರ್ ಜಯಂತಿ