ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ತಾಲೂಕು ವಾಜಮಂಗಲ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರ ವಿರೂಪಗೊಳಿಸಿ ಅವಮಾನಿಸಿರುವ ಕಿಡಿಗೇಡಿಗಳನ್ನು ಬಂಧಿಸಲು ಆಗ್ರಹಿಸಿ ಡಾ.ಬಿ.ಆರ್. ಅಂಬೇಡ್ಕರ್ ಹೋರಾಟ ಸಮಿತಿಯು ಮಂಗಳವಾರ ಬೃಹತ್ ಪಾದಯಾತ್ರೆ ಆಯೋಜಿಸಿತ್ತು. ವಾಜಮಂಗಲ ಗ್ರಾಮದಿಂದ ಸಿದ್ಧಾರ್ಥನಗರದ ಬುದ್ಧ ಪ್ರತಿಮೆವರೆಗೂ ಸುಮಾರು 10 ಕಿ.ಮೀ. ಪಾದಯಾತ್ರೆ ಮೂಲಕ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಪ್ರತಿಭಟನಾಕಾರರು, ಪೊಲೀಸರು ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ವಾಜಮಂಗಲದಲ್ಲಿ ಏ.18ರ ರಾತ್ರಿ ಕಿಡಿಗೇಡಿಗಳು ಅಂಬೇಡ್ಕರ್ ನಾಮಫಲಕ ಮತ್ತು ಭಾವಚಿತ್ರಕ್ಕೆ ವಿರೂಪಗೊಳಿಸಿ ಅಪಮಾನಿಸಿದ್ದಾರೆ. ಈ ಘಟನೆ ನಡೆದು 12 ದಿನ ಕಳೆದರೂ ಯಾರೊಬ್ಬರನ್ನು ಪೊಲೀಸರು ಬಂಧಿಸದಿರುವುದು ಇವರ ಆಡಳಿತ ವೈಫಲ್ಯಕ್ಕೆ ಸಾಕ್ಷಿ ಎಂದು ಅವರು ಆರೋಪಿಸಿದರು.ಈ ಘಟನೆಗೆ ಕಾರಣರಾದ ಕಿಡಿಗೇಡಿಗಳನ್ನು ಬಂಧಿಸಿ ನ್ಯಾಯ ದೊರಕಿಸಿಕೊಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ, ತಾಲೂಕುಗಳಲ್ಲೂ ಪ್ರತಿಭಟನರ ನಡೆಸಿ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.ಪ್ರತಿಭಟನಾನಿರತರ ಸ್ಥಳಕ್ಕೆ ಜಿಲ್ಲಾಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಆಗಮಿಸಿ ಮನವಿ ಸ್ವೀಕರಿಸಿದರು. ಬಿಎಸ್ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ, ಮಾಜಿ ಮೇಯರ್ ಪುರುಷೋತ್ತಮ್, ಮುಖಂಡರಾದ ಬೆಟ್ಟಯ್ಯ ಕೋಟೆ, ಶಂಭುಲಿಂಗಸ್ವಾಮಿ, ಆಲಗೂಡು ಶಿವಕುಮಾರ್, ಮಣಿಯಯ್ಯ, ಕಲ್ಲಹಳ್ಳಿ ಕುಮಾರ್, ಹಾರೋಹಳ್ಳಿ ಸುರೇಶ, ಮಲ್ಲಹಳ್ಳಿ ನಾರಾಯಣ, ಬನ್ನಳ್ಳಿ ಸೋಮಣ್ಣ, ಸಿದ್ಧಸ್ವಾಮಿ, ನಗರ್ಲೆ ವಿಜಯಕುಮಾರ, ಚೆನ್ನಯ್ಯ, ಭೀಮರಾಜ, ಶಿವು, ರಾಜಣ್ಣ, ದೂರ ನಂದೀಶ, ಪುಟ್ಟಸ್ವಾಮಿ, ಕುಬೇರ ಮಂಜು, ವಾಜಮಂಗಲ ಮುಖಂಡರಾದ ಕೆ. ಶಿವು, ಚಿನ್ನಸ್ವಾಮಿ, ಸುರೇಶ, ಮಂಜು, ಸಿದ್ದಪ್ಪ, ಸಣ್ಣಪ್ಪ, ಮಹದೇವಸ್ವಾಮಿ ಮೊದಲಾದವರು ಇದ್ದರು.
----ಬಾಕ್ಸ್... ಬಿಜೆಪಿ ಮುಖಂಡರು ಭಾಗಿಫೋಟೋ- 29ಎಂವೈಎಸ್14
----ವಾಜಮಂಗಲದಲ್ಲಿ ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಆದ ಅಪಮಾನವನ್ನು ವಿರೋಧಿಸಿ ವಾಜಮಂಗಲದ ಗ್ರಾಮಸ್ಥರೊಡನೆ ಪಾದಯಾತ್ರೆಯಲ್ಲಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಮಾಜಿ ಸಂಸದ ಮುನಿಸ್ವಾಮಿ, ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಎಂ.ಎಸ್. ಪರಮಾನಂದ, ಜಿಲ್ಲಾಧ್ಯಕ್ಷ ಶೈಲೇಂದ್ರ, ಕಾರ್ತಿಕ್ ಮರಿಯಪ್ಪ, ಗಿರಿಧರ್, ಅನಿಲ್ ಥಾಮಸ್, ಪ್ರತಾಪ್ ಭಾಗವಹಿಸಿದ್ದರು.