ಶರಣ ಸಾಹಿತ್ಯ- ಕನ್ನಡ ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳು: ಮಹಾಲಿಂಗ ಮಹಾಸ್ವಾಮಿ

KannadaprabhaNewsNetwork | Published : Apr 30, 2025 12:30 AM

ಸಾರಾಂಶ

ಶರಣ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ದೇಶದ ಬೇರೆ ಬೇರೆ ಪ್ರದೇಶಗಳಿಂದ ಕಲ್ಯಾಣಕ್ಕೆ ಆಗಮಿಸಿದ ಶರಣರ ಮಾತೃ ಭಾಷೆ ಬೇರೆಯಾಗಿದ್ದರೂ ಕನ್ನಡ ಕಲಿತು ವಚನಗಳನ್ನು ಬರೆದರೆಂದು ಭಾಲ್ಕಿ ಹಿರೇಮಠ ಸಂಸ್ಥಾನದ ಮಹಾಲಿಂಗ ಮಹಾಸ್ವಾಮಿಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಶರಣ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ದೇಶದ ಬೇರೆ ಬೇರೆ ಪ್ರದೇಶಗಳಿಂದ ಕಲ್ಯಾಣಕ್ಕೆ ಆಗಮಿಸಿದ ಶರಣರ ಮಾತೃ ಭಾಷೆ ಬೇರೆಯಾಗಿದ್ದರೂ ಕನ್ನಡ ಕಲಿತು ವಚನಗಳನ್ನು ಬರೆದರೆಂದು ಭಾಲ್ಕಿ ಹಿರೇಮಠ ಸಂಸ್ಥಾನದ ಮಹಾಲಿಂಗ ಮಹಾಸ್ವಾಮಿಗಳು ಹೇಳಿದರು.

ಬಸವ ಉತ್ಸವ-2025 ಅಂಗವಾಗಿ ಕಸಾಪ ಕನ್ನಡ ಭವನದ ಕಲಾ ಸೌಧದಲ್ಲಿ ಏರ್ಪಡಿಸಿರುವ ವಚನಾಧಾರಿತ ಚಿತ್ರಕಲಾ ಪ್ರದರ್ಶನದ ಸಾನಿಧ್ಯ ವಹಿಸಿ ಮಾತನಾಡಿದರು.

ಎಪಿಎಂಸಿ ಮಾಜಿ ಉಪಾಧ್ಯಕ್ಷರೂ ಆದ ಶರಣ ಚಿಂತಕ ರಾಜಕುಮಾರ ಕೋಟೆ ಮಾತನಾಡಿ, ವಚನ ಚಳವಳಿ ಮೂಲಕ ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದ ವಿಶ್ವಗುರು ಬಸವಣ್ಣನವರ ತತ್ವಾದರ್ಶಗಳಿಂದ ನಮ್ಮ ಅಂತರಂಗ ಶುದ್ಧಿಗೊಂಡು ನಮ್ಮ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಾಣಲು ಸಾಧ್ಯವೆಂದರು.

ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ನಮ್ಮ ಮನೆ ಮತ್ತು ಮನಗಳಲ್ಲಿ ಬಸವ ಬೆಳಕು ಬೆಳಗಬೇಕು. ಮೂಢನಂಬಿಕೆ, ಅಂಧಶ್ರದ್ಧೆ ತೊರೆದು ಹೊಸ ಜೀವನ ಕಟ್ಟಿಕೊಳ್ಳಬಹುದು. ಬಸವ ತತ್ವ ಪಾಲನೆಯಿಂದ ಸೌಹಾರ್ದತೆಯಿಂದ ಬದುಕಬಹುದಾಗಿದೆ ಎಂದರು.

ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ಜಪಾನ್ ದೇಶ ಸೇರಿ ವಿದೇಶಗಳಲ್ಲಿ ಬಸವಾದಿ ಶರಣರ ಚಿಂತನೆಗಳನ್ನು ಅಳವಡಿಸಿಕೊಂಡು ಬದುಕುತ್ತಿದ್ದಾರೆಂದರು.

ಚಿತ್ರಕಲಾ ಡಾ. ಎ.ಎಸ್. ಪಾಟೀಲ, ಪತ್ರಕರ್ತ ದೇವೇಂದ್ರಪ್ಪ ಕಪನೂರ, ಶ್ವೇತಾ ಸಿಂಗ್, ಕಲಾ ಸೌಧದ ಸಂಚಾಲಕ ಡಾ. ರೆಹಮಾನ್ ಪಟೇಲ್, ಕಸಾಪ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ . ಧನ್ನಿ, ರಾಜೇಂದ್ರ ಮಾಡಬೂಳ, ಮಹ್ಮದ್ ಅಯಾಜೋದ್ದೀನ್ ಪಟೇಲ್ ಇದ್ದರು.

ಚೈತನ್ಯಮಯಿ ಟ್ರಸ್ಟ್, ಶರಣ ಸಂಸ್ಕೃತಿ ದೃಶ್ಯಕಲಾ ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ನಡೆಸಿದ ವಚನಾಧಾರಿತ ಚಿತ್ರಕಲಾ ಪ್ರದರ್ಶನದಲ್ಲಿ ಶರಣ ವಚನಗಳೊಂದಿಗೆ ಭಾವಚಿತ್ರಗಳು ಪ್ರೇಕ್ಷಕರ ಗಮನ ಸೆಳೆಯಿತು.

ಗುಲ್ಬರ್ಗಾ ನ್ಯಾಯವಾದಿಗಳ ಸಂಘಕ್ಕೆ ಆಯ್ಕೆಯಾದ ಪ್ರಧಾನ ಕಾರ್ಯದರ್ಶಿ ಸಿದ್ಧರಾಮ ವಾಡಿ, ಆರತಿ ಎಂ ರಾಠೋಡ, ಸುಧೀರ ಗಾದಗೆ, ಮಂಜುನಾಥ ಪಾಟೀಲ, ನಿರ್ಮಲಾ ಬಿರಾದಾರ ಅವರನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು.

ಬಸವರಾಜ ಉಪ್ಪಿನ್, ವಿ.ಬಿ. ಬಿರಾದಾರ, ಬಾಬುರಾವ ಪಾಟೀಲ, ಎಂ.ಎನ್. ಸುಗಂಧಿ, ವನೀತಾ ಗುತ್ತೇದಾರ, ಸವಿತಾ ನಾಸಿ, ಜ್ಯೋತಿ ಕೋಟನೂರ, ಡಾ. ಬಸವರಾಜ ಜಾನೆ, ಕುಪೇಂದ್ರ ಬರಗಾಲಿ, ಶರಣು ಹಾಗರಗುಂಡಗಿ, ಡಾ. ಬಸವರಾಜ ಕುಮನೂರ,ನಾಗಪ್ಪ ಎಂ. ಸಜ್ಜನ್, ಎಸ್.ಕೆ.ಬಿರಾದಾರ ಇದ್ದರು.

Share this article