ವಿವಿಧತೆಯಲ್ಲಿ ಏಕತೆ ತೋರಿದ ಮಹಾನ್ ಪುರುಷ ಅಂಬೇಡ್ಕರ್

KannadaprabhaNewsNetwork | Published : Dec 7, 2024 12:34 AM

ಸಾರಾಂಶ

ಎಲ್ಲರೂ ಭಾರತೀಯರು ಎಂಬ ಧ್ಯೇಯದೊಂದಿಗೆ, ಯಾವುದೇ ತಾರತಮ್ಯವಿಲ್ಲದೇ ವಿವಿಧತೆಯಲ್ಲಿ ಏಕತೆಯನ್ನು ತೋರಿದ ಮಹಾನ್ ಪುರುಷ ಡಾ. ಬಿ.ಆರ್‌.ಅಂಬೇಡ್ಕರ್ ಅವರು ಎಂದು ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯ ಆಯುಕ್ತರಾದ ಡಾ. ಸಿ.ಟಿ.ಮೂರ್ತಿ ಸ್ಮರಿಸಿದರು. ಡಾ. ಬಿ.ಆರ್.ಅಂಬೇಡ್ಕರ್ ಅವರ ೬೯ನೇ ಪರಿದಿಬ್ಬಾಣದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಪ್ರತಿಯೊಬ್ಬರ ಜೀವನದಲ್ಲೂ ಡಾ. ಬಾಬಾ ಸಾಹೇಬರು ಅವಿಭಾಜ್ಯ ಅಂಗವಾಗಿದ್ದು, ಅವರು ಎಲ್ಲರಿಗೂ ಅವಶ್ಯವಾಗಿದ್ದಾರೆ ಎಂಬುದರ ಬಗ್ಗೆ ಚಿಂತಿಸಿದಾಗ ಅವರ ಕೊಡುಗೆಯನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ. ಇಂತಹ ಮಹಾನ್ ವ್ಯಕ್ತಿ ನಮ್ಮ ನಾಡಿನಲ್ಲಿ ಉದಯಿಸದೇ ಇದ್ದಿದ್ದರೆ ನಮ್ಮ ಸ್ಥಿತಿಗತಿಯನ್ನು ಊಹಿಸಲು ಅಸಾಧ್ಯವಾಗುತ್ತದೆ. ಎಲ್ಲರೂ ಭಾರತೀಯರು ಎಂಬ ಧ್ಯೇಯದೊಂದಿಗೆ, ಯಾವುದೇ ತಾರತಮ್ಯವಿಲ್ಲದೇ ವಿವಿಧತೆಯಲ್ಲಿ ಏಕತೆಯನ್ನು ತೋರಿದ ಮಹಾನ್ ಪುರುಷ ಡಾ. ಬಿ.ಆರ್‌.ಅಂಬೇಡ್ಕರ್ ಅವರು ಎಂದು ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯ ಆಯುಕ್ತರಾದ ಡಾ. ಸಿ.ಟಿ.ಮೂರ್ತಿ ಸ್ಮರಿಸಿದರು.ಪಟ್ಟಣದ ಹೌಸಿಂಗ್ ಬೋರ್ಡ್‌ ರಸ್ತೆಯಲ್ಲಿರುವ ಕಾರ್ಡ್ಸ್ ಜಿಎಸ್‌ಟಿ ಸುವಿಧ ಕೇಂದ್ರ ಹಾಗೂ ಭಾರತ್ ಒನ್ ಸೇವಾ ಕೇಂದ್ರದ ಕಚೇರಿ ಮುಂಭಾಗದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ೬೯ನೇ ಪರಿದಿಬ್ಬಾಣದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದ ಕಟ್ಟಕಡೇ ವ್ಯಕ್ತಿ ಸರ್ವೋನ್ನತ ಹುದ್ದೆ ಅಲಂಕರಿಸುವಂತಹ ಸವಲತ್ತು ನಿರ್ಮಾಣ ಮಾಡಿದ ಸಂವಿಧಾನ ಗ್ರಂಥದ ಪ್ರತಿಯೊಂದು ಅಕ್ಷರವನ್ನು ಹಾಗೂ ವಾಖ್ಯವನ್ನು ಅರ್ಥಪೂರ್ಣವಾಗಿ ನಿರ್ವಹಿಸುವ ಮೂಲಕ ಒರ್ವ ಶಿಲ್ಪಿಯಂತೆ ಬಹಳ ಅಚ್ಚುಕಟ್ಟಾಗಿ ಪರಿಪೂರ್ಣ ಗೊಳಿಸಿ, ವಿಶ್ವಖ್ಯಾತಿಗಳಿಸಿದ ಗ್ರಂಥ ನೀಡಿದ್ದಾರೆ ಎಂದರು.ತಹಸೀಲ್ದಾರ್‌ ಕೆ.ಕೆ.ಕೃಷ್ಣಮೂರ್ತಿ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನವೆಂಬ ಮಹಾನ್ ಗ್ರಂಥವು ಪ್ರಜೆಗಳಿಗೆ ಮೂಲಭೂತ ಹಕ್ಕುಗಳು, ಕರ್ತವ್ಯ, ಸರ್ಕಾರ ಹಾಗೂ ಪ್ರಜೆಗಳ ನಡುವಿನ ಸಂಬಂಧ, ಪ್ರಾದೇಶಿಕ ನಿರ್ದೇಶಕ ತತ್ವಗಳು ಹಾಗೂ ನೀತಿಗಳನ್ನು ರೂಪಿಸಿ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ನಾಗರಿಕರಿಗೆ ಅವಕಾಶ ನೀಡಬೇಕು ಹಾಗೂ ಜನರ ಕರ್ತವ್ಯದ ಬಗ್ಗೆ ಸವಿಸ್ತಾರವಾಗಿ ತಿಳಿಸಲಾಗಿದೆ. ಅವರು ಎರಡು ವರ್ಷಕ್ಕೂ ಹೆಚ್ಚು ಸಮಯ ವಿನಿಯೋಗಿಸಿ, ಕರಡು ಸಂವಿಧಾನವನ್ನು ರಚಿಸಿ, ಅಗತ್ಯತೆಗೆ ಒತ್ತುಕೊಟ್ಟು, ಬಹಳ ಜವಾಬ್ದಾರಿ ಹಾಗೂ ಸದ್ದುದೇಶದಿಂದ ಸಂವಿಧಾನವನ್ನು ಓರ್ವ ಶಿಲ್ಪಿಯಂತೆ ರಚಿಸಿದ್ದಾರೆ ಅದಕ್ಕೆ ಪೂರಕವಾಗಿ ಭಾರತೀಯರು ಇರಬೇಕೆಂದರು.ಸಹಾಯಕ ಪೊಲೀಸ್ ಅಧೀಕ್ಷಕಿ(ಎಎಸ್ಪಿ) ಐಪಿಎಸ್ ಅಧಿಕಾರಿ ಶಾಲು ಅವರು ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ಕೆ.ಆರ್‌.ನಗರ ತಾ. ಆರೋಗ್ಯಾಧಿಕಾರಿ ಡಾ. ನಟರಾಜ್, ಸಾರ್ವಜನಿಕ ಆಸ್ಪತ್ರೆಯ ಡಾ. ಸತ್ಯಪ್ರಕಾಶ್, ಡಾ. ನಾಗೇಂದ್ರ, ಡಾ. ರೇಖಾ, ಡಾ. ಪ್ರತಿಭಾ, ಡಾ. ಲೋಕೇಶ್, ಶ್ರೇಯಸ್ ವಿಷ್ಣುಪಾದಾಚಾರ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪೃಥ್ವಿರಾಜ್, ಪುರಸಭೆ ಮಾಜಿ ಅಧ್ಯಕ್ಷ ಎಚ್.ವಿ.ಪುಟ್ಟರಾಜು, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶೃತಿ ಗುಂಡಣ್ಣ, ಸುಗ್ಗೆಹಳ್ಳಿ ಪಿಎಸ್ಸೈ ಯತೀಶ್, ವಿಶ್ರಾಂತ ವಿಜ್ಞಾನಿ ಅಣ್ಣಯ್ಯ, ಪುರಸಭೆ ಮಾಜಿ ಸದಸ್ಯ ಕುಮಾರ್, ಕೆ.ಆರ್‌.ಸುದರ್ಶನ್ ಬಾಬು, ಡೊನಾಲ್ಡ್ ರಂಗಸ್ವಾಮಿ, ಉಮೇಶ್, ದೊರೆ, ಪ್ರಸನ್ನ, ಬಾಲು, ನವೀನ್, ವೀಣಾ, ದೀಪಿಕಾ, ಅನುಪಮಾ, ಪ್ರೀತಂ ಇದ್ದರು.

Share this article