ಸಾರಾಂಶ
ಕನ್ನಡಪ್ರಭ ವಾರ್ತೆ ಸವದತ್ತಿ
ಪಟ್ಟಣದ ಹೊಸಪೇಠ ಓಣಿಯಲ್ಲಿ ೨೧ ದಿನಗಳವರೆಗೆ ಪ್ರತಿಷ್ಠಾಪಿಸಿದ ಹಿಂದೂ ಮಹಾಗಣಪತಿಯ ಮೂರ್ತಿಯ ವಿಸರ್ಜನೆಯನ್ನು ಮಂಗಳವಾರ ಅದ್ಧೂರಿಯಾಗಿ ಪಟ್ಟಣದಲ್ಲಿ ಮೆರವಣಿಗೆ ಮಾಡುವ ಮೂಲಕ ಮಲಪ್ರಭಾ ನದಿಯಲ್ಲಿ ವಿಸರ್ಜನೆಗೊಳಿಸಲಾಯಿತು.ಹಿಂದಿನ ದಿವಸ ಹೋಳಿಗೆ ಊಟದ ಪ್ರಸಾದವನ್ನು ಏರ್ಪಡಿಸಿದ್ದ ಹಿಂದೂ ಮಹಾಗಣಪತಿ ಸಮಿತಿಯವರು ವಿವಿಧ ಪೂಜಾ ಕಾರ್ಯಕ್ರಮಗಳನ್ನು ಹಮ್ಮಕೊಂಡಿದ್ದರು.ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಸದ್ದಿನೊಂದಿಗೆ ಯುವಕರು ಕುಣಿದು ಕುಪ್ಪಳಿಸುವ ಮೂಲಕ ಪಟಾಕಿ ಮತ್ತು ಮದ್ದು ಸಿಡಿಸಿ ಸಂಭ್ರಮಿಸಿದರು.
ಪಟ್ಟಣದ ಹೊಸಪೇಠ ಓಣಿಯಿಂದ ಲಿಂಗರಾಜ ಸರ್ಕಲ್, ಗಾಂಧಿಚೌಕ್, ಆನಿ ಅಗಸಿ, ಕಟಕೋಳ ಬ್ಯಾಂಕ್ ಸರ್ಕಲ್ ಮೂಲಕ ಎಪಿಎಂಸಿಯಿಂದ ಮಲಪ್ರಭಾ ನದಿಯಲ್ಲಿ ಹಿಂದೂ ಮಹಾಗಣಪತಿಯ ಮೂರ್ತಿಯನ್ನು ವಿಸರ್ಜನೆಗೊಳಿಸಲಾಯಿತು.ಹಿಂದೂಪರ ಘೋಷಣೆಗಳೊಂದಿಗೆ ಯುವಕರು, ಗಣ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಡಿಎಸ್ಪಿ ಚಿದಂಬರ ಮಡಿವಾಳರ, ಸಿಪಿಐ ಧರ್ಮಾಕರ ಧರ್ಮಟ್ಟಿ, ಮುರಗೋಡ ಸಿಪಿಐ ವೀರೇಶ ಮಠಪತಿ ಸೂಕ್ತ ಬಂದೂಬಸ್ತ ವ್ಯವಸ್ಥೆ ಕೈಗೊಂಡಿದ್ದರು.ಮೊಕಾಶಿ ಓಣಿಯ ಹಿಂದೂವಿ ಸೇನಾ ಸವದತ್ತಿಯವರು ನಿರ್ಮಿಸಿದ ಆಪರೇಶನ್ ಸಿಂಧೂರದ ಬ್ರಹ್ಮೋಸ್ಮ ಕ್ಷಿಪಣಿ ರೂಪಕ ಆಕರ್ಷಣೆಗೊಳಗಾಗಿತ್ತು.ವಿರುಪಾಕ್ಷ ಮಾಮನಿ, ಸತೀಶ ಹೂಗಾರ, ಅಶ್ವಥ ವೈದ್ಯ, ಶಿವಾನಂದ ಹೂಗಾರ, ಮಲ್ಲು ಜಕಾತಿ, ಬಸವರಾಜ ದ್ಯಾಮನ್ನವರ, ಮಲ್ಲಿಕಾರ್ಜುನ ಪುರದಗುಡಿ, ಶಿವಾನಂದ ಪಟ್ಟಣಶೆಟ್ಟಿ, ಉದಯ ಹೂಗಾರ, ಶಿವಯೋಗಿ ಸೊಗಲದ, ಅಲ್ಲಮಪ್ರಭು ಪ್ರಭುನವರ, ಬಸವರಾಜ ಅರಮನಿ, ಸುರೇಶ ಕಂಕ್ರಿ, ಉಮೇಶ ಪಾಟೀಲ, ನಂದೀಶ ಮಲ್ಲವ್ವಗೋಳ, ಅನೀಲ ಕುಂಕುಮಗಾರ, ಪವನ ದೇಸಾಯಿ, ನಿಖಿಲ ಬಾಳೋಜಿ, ವಿನಾಯಕ ಕರಣಿ, ರಮೇಶ ಹವ್ವಳಗೋಳ, ಅಕ್ಷಯ ಇಜಂತಕರ, ಅನೀಲ ಮಡಿವಾಳರ, ಮಂಜುನಾಥ ತಾರೀಹಾಳ, ಬಸವರಾಜ ಕಾಮಕರ, ಮಲ್ಲೇಶ ಗೊರವನಕೊಳ್ಳ, ಬಸವರಾಜ ಕಂಕ್ರಿ, ಸತೀಶ ನನದಗಿ, ಅಲೋಕ ಮಲ್ಲವ್ವಗೋಳ, ರಾಹುಲ ದೊಡಮನಿ, ಮಹೇಶ ಶಿರೂರ, ರಾಜು ಅಂತಕನವರ, ಪ್ರದೀಪ ಬಡಿಗೇರ, ಪ್ರೀತಮ ಶಿರೂರ, ಸಚಿನ ಕಲಾದಗಿ, ಮಂಥನ ದೇಶಪಾಂಡೆ, ರಾಯಪ್ಪ ಕರಿಗಾರ ಮತ್ತು ಇತರರು ಉಪಸ್ಥಿತರಿದ್ದರು.