ರಾಮನಗರ: ದೇಶಕ್ಕೆ ಅದ್ವಿತೀಯ ಸಂವಿಧಾನವನ್ನು ರಚಿಸಿಕೊಡುವ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ನಮ್ಮೆಲ್ಲರ ಸ್ವಾಭಿಮಾನ ಸ್ವಾವಲಂಬನೆ ಮತ್ತು ಗೌರವಯುತ ಬದುಕಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಅನ್ನದಾನಪ್ಪ ಹೇಳಿದರು.
ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಮುಖಂಡ ಮೈಸೂರು ಉಸ್ತುವಾರಿ ಎಂ.ನಾಗೇಶ್ ಮಾತನಾಡಿ, ಸಾಮಾಜಿಕ, ಶೈಕ್ಷಣಿಕವಾಗಿ ಜನರು ಸಂವಿಧಾನ ರಚನೆಗೂ ಮುನ್ನ ಸಾಕಷ್ಟು ನೊಂದಿದ್ದರು. ಅಂತಹ ಜನತೆಗೆ ಸಂವಿಧಾನದ ಮೂಲಕ ಸುಖ ಜೀವನಕ್ಕೆ ಮಾರ್ಗ ತೋರಿದವರು. ಡಾ. ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಪ್ರಪಂಚವೇ ಕೊಂಡಾಡುತ್ತಿದೆ ಎಂದು ತಿಳಿಸಿದರು.
ಡಾ. ಅಂಬೇಡ್ಕರ್ ಅವರು ನಮ್ಮನ್ನಗಲಿ 68 ವರ್ಷವಾಗಿವೆ. ಅಂಬೇಡ್ಕರ್ ಅವರು ಒಬ್ಬ ತತ್ವಜ್ಞಾನಿ, ವಿದ್ವಾಂಸರು, ಸಕಲ ಪಾಂಡಿತ್ಯ ಹೊಂದಿದ್ದರು. ಅವರ ವಿಚಾರಧಾರೆಗಳು ಇಂದು ಪ್ರಪಂಚದಲ್ಲಿ ಪ್ರಚಲಿತವಾಗಿವೆ. ಸಂವಿಧಾನ ನಮಗೆ ಕೊಟ್ಟ ನಂತರ ಅನೇಕ ಕ್ರಾಂತಿಕಾರಿ ಬದಲಾವಣೆಗಳು ದೇಶದಲ್ಲಿ ಆಗಿವೆ ಎನ್ನುವುದಕ್ಕೆ ಹಲವಾರು ಸಾಕ್ಷಿಗಳು ಸಿಗುತ್ತವೆ. ಅಂತಹ ಮಹಾ ವ್ಯಕ್ತಿಯನ್ನು ಗೌರವಿಸುವ ಮೂಲಕ ಸದಾ ಸ್ಮರಿಸುತ್ತಾ ಮುನ್ನಡೆಯಬೇಕು ಎಂದರು.ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಕಾರ್ಯದರ್ಶಿ ಗೌರಮ್ಮ ಶಿವಲಿಂಗೇಗೌಡ, ಜಿಲ್ಲಾಧ್ಯಕ್ಷ ವೆಂಕಟಾಚಲ, ಪ್ರಧಾನ ಕಾರ್ಯದರ್ಶಿ ಮುರುಗೇಶ್, ಜಿಲ್ಲಾ ಸಂಯೋಜಕ ಮಹದೇವ್, ಜಿಲ್ಲಾ ಉಪಾಧ್ಯಕ್ಷರಾದ ಬಳಗೆರೆ ಬೈರಾಜು, ವಿ. ಸ್ವಾಮಿ, ಶ್ರೀನಿವಾಸ್ ರಾವ್ , ಜಿಲ್ಲಾ ಕಾರ್ಯದರ್ಶಿಗಳಾದ ಕೃಷ್ಣಮೂರ್ತಿ, ದೊಡ್ಡಾಲಹಳ್ಳಿ ರಮೇಶ್, ಮುಖಂಡರಾದ ಮೆಳೇಕೋಟೆ ಶಿವಣ್ಣ, ಮಲ್ಲಂಗೆರೆ ಕೃಷ್ಣಪ್ಪ, ಶೋಭಾ, ನಾರಾಯಣಪ್ಪ, ಆಲ್ಬರ್ಟ್, ಜಯಂತ್, ಕೆ. ಗಿರೀಶ್, ಶರತ್ ಉಪಸ್ಥಿತರಿದ್ದರು.
ರಾಮನಗರದ ಚೈತನ್ಯ ಭವನದಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಹಮ್ಮಿಕೊಂಡಿದ್ದ ಭಾರತರತ್ನ ಡಾ. ಅಂಬೇಡ್ಕರ್ ಅವರ 68ನೇ ವರ್ಷದ ಮಹಾ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು ಪಾಲ್ಗೊಂಡಿರುವುದು.