- ಅಸ್ಪೃಶ್ಯತೆ, ಅನಕ್ಷರತೆ, ಮೌಢ್ಯಗಳ ವಿರುದ್ಧ ಹೋರಾಡಿದ್ದರು - - - ಕನ್ನಡಪ್ರಭ ವಾರ್ತೆ ದಾವಣಗೆರೆ ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನದ ಮೂಲಕ ಜಾತಿ ವ್ಯವಸ್ಥೆ ತೊಲಗಿಸಿ ದೇಶದಲ್ಲಿ ಶಾಂತಿ, ಸೌಹಾರ್ದ ಮತ್ತು ಸಮಾನತೆ ಅನುಷ್ಠಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಿದರು ಎಂದು ಪ್ರಾಧ್ಯಾಪಕ ಡಾ. ಎಂ.ಯು. ಲೋಕೇಶ್ ಹೇಳಿದರು.
ಬುದ್ಧ, ಬಸವಣ್ಣನವರ ನಂತರ ಸಮಾನತೆ, ಸಮಸಮಾಜ ಅಭಿವೃದ್ಧಿಯ ತತ್ವ- ಆದರ್ಶಗಳನ್ನು ಜಾರಿಗೊಳಿಸಿ, ನವ ಸಮಾಜದ ಪರಿಕಲ್ಪನೆಯನ್ನು ಪ್ರತಿಷ್ಠಾಪಿಸಲು ಡಾ.ಅಂಬೇಡ್ಕರ್ ಯತ್ನಿಸಿದರು. ಅಸ್ಪೃಶ್ಯತೆ, ಅಸಮಾನತೆ, ಅನಕ್ಷರತೆ, ಮೂಢನಂಬಿಕೆಯಂತಹ ಅಂಧಕಾರಗಳಿಂದ ಕೂಡಿದ ಸಮಾಜವನ್ನು ಪರಿವರ್ತಿಸಿ, ಅಭಿವೃದ್ಧಿಯ ಮುಖ್ಯವಾಹಿನಿಯಲ್ಲಿ ಕೈ ಜೋಡಿಸುವಂತೆ ಮಾಡುವಲ್ಲಿ ಅಂಬೇಡ್ಕರ್ ಕೊಡುಗೆ ಅಪಾರ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಬದಲಾವಣೆಯ ಮಾತುಗಳಾಡಿ, ದೇಶದಲ್ಲಿ ಶಾಂತಿ ಕದಡುವ ಕೆಲಸ ನಡೆಯುತ್ತಿದೆ. ವಿದ್ಯಾರ್ಥಿಗಳು ಅದಕ್ಕೆ ಅವಕಾಶ ನೀಡದೇ, ಅಂಬೇಡ್ಕರ್ ಅವರ ಆಶಯವನ್ನು ರಕ್ಷಿಸುವ ಕೆಲಸಕ್ಕೆ ಮುಂದಾಗಬೇಕು. ಪಟ್ಟಬದ್ಧ ಹಿತಾಸಕ್ತಿಗಳಿಗೆ ಅವಕಾಶ ನೀಡದೇ ಜಾಗೃತರಾಗಿ, ಮತದಾನದ ಮೂಲಕ ನಮ್ಮ ಹಕ್ಕುಗಳನ್ನು ರಕ್ಷಿಸುವ ಸರ್ಕಾರವನ್ನು ರೂಪಿಸಲು ಆದ್ಯತೆ ನೀಡಬೇಕು ಎಂದರು.ಕುಲಸಚಿವ ಡಾ. ಯು.ಎಸ್. ಮಹಾಬಲೇಶ್ವರ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳು ಸತ್ಯನಿಷ್ಠೆ ಪ್ರಾಮಾಣಿಕತೆ ಮೈಗೂಡಿಸಿಕೊಂಡು, ದೇಶದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಬೇಕು. ಡಾ.ಅಂಬೇಡ್ಕರ್ ಬದುಕು, ಮೌಲ್ಯ, ಸಂದೇಶಗಳನ್ನು ಪ್ರೇರಣೆಯಾಗಿ ಸ್ವೀಕರಿಸಿ, ಮಾರ್ಗದರ್ಶಕ ಸೂತ್ರವಾಗಿ ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
- - - -6ಕೆಡಿವಿಜಿ31.ಜೆಪಿಜಿ: