ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು
ಅಂಬಿಗರ ಚೌಂಡಯ್ಯನವರು ಬಸವಣ್ಣನವರ ವಚನ ಚಳವಳಿಗೆ ಮುಖ್ಯ ಆಧಾರ ಸ್ತಂಭವಾಗಿದ್ದರು ಎಂದು ನರಸಿಪುರ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಅಧ್ಯಕ್ಷ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮೀಜಿ ನುಡಿದರು.ನಗರದ ಸ್ಟೇಷನ್ ರಸ್ತೆ ವರ್ತಕರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ನಿಜ ಶರಣ ಅಂಬಿಗರ ಚೌಡಯ್ಯನವರ 904ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು. ಶೋಷಿತ ಸಮುದಾಯದ ದುಃಖ ದುಮ್ಮಾನಗಳನ್ನು ಕಠೋರ ಭಾಷೆಯಲ್ಲಿ ನಿರೂಪಿಸುವ ಧೈರ್ಯ ಹೊಂದಿದ್ದರು. ಸಮಾಜದವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ಮೂಲಕ ಸಂಸ್ಕಾರವಂತರನ್ನಾಗಿ ಬೆಳೆಸಬೇಕು. ಜೊತೆಗೆ ಚೌಡಯ್ಯನವರ ಆದರ್ಶ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದರೆ ಅವರ ಜಯಂತಿಗೆ ಅರ್ಥ ಬರಲಿದೆ ಎಂದರು.
ಶಾಸಕ ಪ್ರಕಾಶ ಕೋಳಿವಾಡ, ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಅರುಣಕುಮಾರ ಪೂಜಾರ, ಬಿಇಒ ಎಂ.ಎಚ್. ಪಾಟೀಲ, ಮಂಜುನಾಥ ಕುಂಬಳೂರು, ಡಾ. ನಾಗರಾಜ ದೊಡ್ಮನಿ, ಮಂಜುನಾಥ ಭೋವಿ, ಡಾ. ಕಾಂತೇಶ ಅಂಬಿಗೇರ, ಶಹರ ಪಿಎಸ್‌ಐ ಗಡ್ಡೆಪ್ಪ ಗುಂಜಿಟಗಿ ಮತ್ತಿತರರು ಮಾತನಾಡಿದರು.ಗಂಗಾಮತ ಸಮಾಜದ ತಾಲೂಕಾಧ್ಯಕ್ಷ ರಾಜು ಜಡಮಲಿ, ನಗರಸಭಾ ಸದಸ್ಯೆ ಚಂಪಾ ಬಿಸಲಳ್ಳಿ, ಲಕ್ಷ್ಮಣ ಸುಣಗಾರ, ಮಂಜುನಾಥ ಪುಟಗನಾಳು, ರಾಮಚಂದ್ರ ಐರಣಿ, ಚಂದ್ರಶೇಖರ ಜಾಡರ, ಕೊಟ್ರೇಶಪ್ಪ ಕುದರಿಹಾಳ, ಕರಬಸಪ್ಪ ಬಾರ್ಕಿ, ಪಿಎಸ್‌ಐ ಹನುಮಂತಪ್ಪ ಅಂಬಿಗೇರ, ಕಾಳಪ್ಪ ಅಂಬಿಗೇರ, ಶಂಕ್ರಪ್ಪ ಅಂಬಿಗೇರ, ಹನುಮಂತ ಸುಣಗಾರ, ಪ್ರಕಾಶ ಜಾಡಮಾಲಿ, ಪ್ರಕಾಶ ಸುಣಗಾರ, ರಘು ಬಾರ್ಕಿ, ಸುನೀಲ ಸುಣಗಾರ, ಅಜ್ಜಪ್ಪ ಜಡಮಲಿ ಮತ್ತಿತರರಿದ್ದರು.
ಇದಕ್ಕೂ ಮುನ್ನ ಅಂಬಿಗರ ಚೌಡಯ್ಯನವರ ಭಾವಚಿತ್ರದ ಮೆರವಣಿಗೆ ಇಲ್ಲಿನ ಸುಣಗಾರ ಓಣಿ ಗಂಗಾ ಪರಮೇಶ್ವರಿ ದೇವಸ್ಥಾನದಿಂದ ಮಂಗಳವಾದ್ಯ ಹಾಗೂ ಕುಂಬ ಮೇಳದೊಂದಿಗೆ ಹೊರಟು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಮಾರಂಭದ ಸ್ಥಳಕ್ಕೆ ಬಂದು ಸೇರಿತು.