ಅಂಬಿಗರ ಚೌಡಯ್ಯ ಅವರ ಆದರ್ಶ ಪಾಲಿಸಿ: ಎಂಎಲ್‌ಎ ರಾಜಾ ವೆಂಕಟಪ್ಪ ನಾಯಕ

KannadaprabhaNewsNetwork |  
Published : Jan 24, 2024, 02:00 AM IST
ಸುರಪುರ ನಗರದ ಭೋಯಿಗಲ್ಲಿಯಲ್ಲಿ ನಿರ್ಮಿಸಿದ ಅಂಬಿಗರ ಚೌಡಯ್ಯ ಭವನ ಉದ್ಘಾಟನೆ ಮತ್ತು ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮಕ್ಕೆ ಶಾಸಕ ರಾಜಾ ವೆಂಕಟಪ್ಪ ನಾಯಕ ಚಾಲನೆ ನೀಡಿ ಮಾತನಾಡಿದರು. | Kannada Prabha

ಸಾರಾಂಶ

ಮೂಢನಂಬಿಕೆ, ಜಾತೀಯತೆ ಹಾಗೂ ಅಸಮಾನತೆ, ಮೇಲು-ಕೀಳು ವಿರುದ್ಧ ಹೋರಾಡಿದ ಶರಣರಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಮೇಲ್ಪಂಕ್ತಿಯಲ್ಲಿದ್ದಾರೆ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.

ಕನ್ನಡಪ್ರಭ ವಾರ್ತೆ ಸುರಪುರ

ಸಮಾಜದಲ್ಲಿ ತಾಂಡವವಾಡುತ್ತಿದ್ದ ಮೂಢನಂಬಿಕೆ, ಜಾತೀಯತೆ ಹಾಗೂ ಅಸಮಾನತೆ, ಮೇಲು-ಕೀಳು ವಿರುದ್ಧ ಹೋರಾಡಿದ ಶರಣರಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಮೇಲ್ಪಂಕ್ತಿಯಲ್ಲಿದ್ದಾರೆ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.

ನಗರದ ಭೋಯಿಗಲ್ಲಿಯಲ್ಲಿ ನೂತನವಾಗಿ ನಿರ್ಮಿಸಿದ ಅಂಬಿಗರ ಚೌಡಯ್ಯ ಭವನ ಉದ್ಘಾಟನೆ ಮತ್ತು ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿಧಾನಸಭಾ ಚುನಾವಣೆಯಲ್ಲಿ ಭೋಯಿಗಲ್ಲಿಯಿಂದ ಅತಿ ಹೆಚ್ಚು ಮತಗಳು ದೊರೆತಿವೆ. ಅಂಬಿಗರ ಸಮುದಾಯ ನನ್ನ ಮೇಲಿಟ್ಟಿರುವ ನಂಬಿಕೆಯನ್ನು ಹುಸಿ ಮಾಡುವುದಿಲ್ಲ. ಮುಖಂಡರು ಕೆಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ಅವುಗಳನ್ನು ಹಂತಹಂತವಾಗಿ ಈಡೇರಿಸುವೆ ಎಂದು ತಿಳಿಸಿದರು.

ಸುರಪುರ ಸಂಸ್ಥಾನದಲ್ಲಿ ಸೇನಿನಾಗಳಾಗಿ ಕಬ್ಬಲಿಗ ಸಮುದಾಯ ಅಪಾರ ಸೇವೆ ಸಲ್ಲಿಸಿದೆ. ಸರ್ಕಾರ ನೀಡುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಮುಂದೆ ಬರಬೇಕು. ಮಕ್ಕಳಿಗೆ ತಪ್ಪದೇ ಶಿಕ್ಷಣ ಕೊಡಿಸಬೇಕು ಎಂದು ಮನವಿ ಮಾಡಿದರು.

ನಿವೃತ್ತ ಪ್ರಾಂಶುಪಾಲ ಡಾ. ರಾಘವೇಂದ್ರ ಗುಡಗುಂಟಿ ಉಪನ್ಯಾಸ ನೀಡಿದರು. ತಹಸೀಲ್ದಾರ್ ವಿಜಯಕುಮಾರ, ತಾಲೂಕು ಪಂಚಾಯಿತಿ ಅಧಿಕಾರಿ ಬಸವರಾಜ ಸಜ್ಜನ್, ಪೌರಾಯುಕ್ತ ಜೀವನ ಕಟ್ಟಿಮನಿ, ನಗರಸಭೆ ಸದಸ್ಯ ಮಾನಪ್ಪ ಚಳ್ಳಿಗಿಡ, ಸಮಾಜದ ತಾಲೂಕು ಅಧ್ಯಕ್ಷ ದೇವೀಂದ್ರಪ್ಪ ಮಾಲಿ ಪಾಟೀಲ್, ತಿಪ್ಪಣ್ಣ ಭೋಯಿ, ಶಿವಣ್ಣ ಕಟ್ಟಿಮನಿ, ಮಾನಪ್ಪ ಸೂಗೂರು, ಮರೆಪ್ಪ ದಾಯಿ, ಯಂಕಣ್ಣ ಕಟ್ಟಿಮನಿ, ವೆಂಕಟೇಶ ಪೋತ್ಲಕರ್, ಜಟ್ಟೆಪ್ಪ ವಾರಿ, ಹೊನ್ನಪ್ಪ ತಳವಾರ ಇತರರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬು ಬೆಳೆಗಾರರಿಗೆ ₹300 ಕೋಟಿ ಬಿಡುಗಡೆ
ಮಾ.2ಕ್ಕೆ 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ