ಅಂಬಿಗರ ಚೌಡಯ್ಯನವರ ಮಾತುಗಳು ಸಂಪ್ರದಾಯಸ್ಥ ಮಡಿವಂತರಿಗೆ ಕರ್ಣಕಠೋರವಾಗಿದ್ದವು. ಅವರು ತತ್ವನಿಷ್ಠ, ಶ್ರೇಷ್ಠ ತತ್ವಜ್ಞಾನಿಯಾಗಿ, ವಚನಕಾರನಾಗಿ ಹೊರಹೊಮ್ಮಿದ್ದರು.
ಶಿರಹಟ್ಟಿ: 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ಸಮಕಾಲೀನರಾದ ನಿಜಶರಣ ಅಂಬಿಗರ ಚೌಡಯ್ಯ ವಿಭಿನ್ನ ವ್ಯಕ್ತಿತ್ವ ಹೊಂದಿದ್ದ ವಚನಕಾರ. ಮುಚ್ಚುಮರೆಯಿಲ್ಲದೆ ಬಿಚ್ಚು ಮನಸ್ಸಿನ ಕಂಡದ್ದನ್ನು ಕಂಡಂತೆ ಹೇಳುವ ನಿಷ್ಠುರ ಮಾತುಗಳಿಗೆ ಹೆಸರಾದವರು ಎಂದು ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ತಿಳಿಸಿದರು.ತಹಸೀಲ್ದಾರ್ ಕಚೇರಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ೯೦೬ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಅಂಬಿಗರ ಚೌಡಯ್ಯನವರ ಮಾತುಗಳು ಸಂಪ್ರದಾಯಸ್ಥ ಮಡಿವಂತರಿಗೆ ಕರ್ಣಕಠೋರವಾಗಿದ್ದವು. ಅವರು ತತ್ವನಿಷ್ಠ, ಶ್ರೇಷ್ಠ ತತ್ವಜ್ಞಾನಿಯಾಗಿ, ವಚನಕಾರನಾಗಿ ಹೊರಹೊಮ್ಮಿದ್ದರು ಎಂದರು.
ಅಂಬಿಗರ ಚೌಡಯ್ಯ ಸಮಾಜದ ತಾಲೂಕಾಧ್ಯಕ್ಷ ಅಶೋಕ ಹುಬ್ಬಳ್ಳಿ ಮಾತನಾಡಿ, ೧೨ನೇ ಶತಮಾನದ ಶರಣರೆಲ್ಲರಲ್ಲಿಯೂ ಕುಲ ಜಾತಿ, ಮತ, ಪಂಥಗಳಿರಲಿಲ್ಲ. ತತ್ವ ಸಿದ್ಧಾಂತ ಒಪ್ಪಿಕೊಂಡು ಶರಣರಾಗಿ ಸಮಾಜ ಪರಿವರ್ತನೆಗಾಗಿ ಸಮ ಸಮಾಜ ಕಟ್ಟಲು ಒಗ್ಗೂಡಿದರು. ತಿಳಿನೀರಿನಲ್ಲಿ ಸಕ್ಕರೆ, ಉಪ್ಪು, ಮಣ್ಣು ಹಾಕಿದರೆ ಮೂರು ಪದಾರ್ಥಗಳು ನೀರಿನಲ್ಲಿ ಕರಗುತ್ತವೆ. ನಮಗೆ ಕೇವಲ ಸಕ್ಕರೆ ನೀರು ಮಾತ್ರ ಬೇಕು, ಉಪ್ಪು ವಿಲೀನವಾದ ನೀರು ಬೇಡ ಎಂದರೆ ಸಿಗಲು ಸಾಧ್ಯವೇ? ಹಾಗೇ ಗುರುವಾದವನಿಗೆ ಯಾರು ಮೇಲಲ್ಲ, ಯಾರೂ ಕೀಳಲ್ಲ. ಎಲ್ಲ ಶರಣರು ಒಂದೇ ಎನ್ನುವ ಭಾವತತ್ವ ಬಸವಾದಿ ಶರಣರು ಒತ್ತಿ ಸಾರಿದರು ಎಂದರು. ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿದರು. ಕೆಪಿಸಿಸಿ ಕಾರ‍್ಯದರ್ಶಿ ಸುಜಾತಾ ದೊಡ್ಡಮನಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಹುಮಾಯೂನ್ ಮಾಗಡಿ, ಸಬ್ ರಜಿಸ್ಟ್ರಾರ್ ಶರಣಪ್ಪ ಪವಾರ, ಎಚ್.ಎಂ. ದೇವಗಿರಿ, ಹೊನ್ನಪ್ಪ ಶಿರಹಟ್ಟಿ, ರವಿ ಗುಡಿಮನಿ, ಪ್ರವೀಣ ಹುಬ್ಬಳ್ಳಿ, ಆನಂದ ಕೋಳಿ, ಬಾಬಾಜಾನ ಕೋಳಿವಾಡ, ಶಫಿ ಹೆಸರೂರ, ಪ್ರಕಾಶ ಸುಣಗಾರ, ಮಂಜು ಹುಬ್ಬಳ್ಳಿ, ಪ್ರಶಾಂತ ಹುಬ್ಬಳ್ಳಿ, ಕೃಷ್ಣಪ್ಪ ಹುಬ್ಬಳ್ಳಿ, ಕಾರ್ತಿಕ ಸುಣಗಾರ, ಉಮ್ಮಣ್ಣ ಸುಣಗಾರ, ನಿಂಗಪ್ಪ ಹುಬ್ಬಳ್ಳಿ, ಸಂಜು ಹುಬ್ಬಳ್ಳಿ, ಪ್ರದೀಪ ಹುಬ್ಬಳ್ಳಿ, ಚಂದ್ರಶೇಖರ ಹುಬ್ಬಳ್ಳಿ, ಶಂಕರಪ್ಪ ಬಾರ್ಕಿ, ನಿಂಗಪ್ಪ ವಡವಿ, ಶರಣಪ್ಪ ಹುಬ್ಬಳ್ಳಿ ಮುಂತಾದವರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.