ಕಾರವಾರ: ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದರಿಂದ ಅಪಘಾತಗಳು ಹೆಚ್ಚಾಗುತ್ತಿದ್ದು, ಎನ್.ಪಿ.ಸಿ.ಐ.ಎಲ್ ಕೈಗಾದವರು ಆ್ಯಂಬುಲೆನ್ಸ್ ನೀಡಿರುವುದು ಸ್ಥಳೀಯರಿಗೆ ಸಹಾಯವಾಗಲಿದೆ. ಈ ಆ್ಯಂಬುಲೆನ್ಸ್ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಸತೀಶ ಸೈಲ್ ಹೇಳಿದರು.ಇಲ್ಲಿನ ನಗರಸಭೆ ಆವರಣದಲ್ಲಿ ಎನ್.ಪಿ.ಸಿ.ಐ.ಎಲ್ ಕೈಗಾದಿಂದ ಆ್ಯಂಬುಲೆನ್ಸ್ ವಾಹನ ಹಸ್ತಾಂತರ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಅನುದಾನದಿಂದ ವಿದ್ಯಾರ್ಥಿನಿಲಯಗಳಿಗೆ ಸಾಮಗ್ರಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ
ಕೈಗಾ ಸೈಟ್ ಡೈರೆಕ್ಟರ್ ವಿನೋದಕುಮಾರ ಮಾತನಾಡಿ, ಕೈಗಾದ ಸಿಎಸ್‌ಆರ್ ಅನುದಾನದಡಿ ಕೈಗಾ ವ್ಯಾಪ್ತಿಯ ಪ್ರದೇಶಗಳನ್ನು ಅಭಿವೃದ್ಧಿ ಪಡಿಸುತ್ತಿದ್ದು, ಶಿಕ್ಷಣ ಆರೋಗ್ಯ, ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದೆ. ಕಳೆದ ಬಾರಿ ಒಂದು ಆ್ಯಂಬುಲೆನ್ಸ್ ನೀಡಲಾಗಿದ್ದು, ಈ ಬಾರಿಯು ಒಂದು ಆ್ಯಂಬುಲೆನ್ಸ್ ನೀಡಲಾಗಿದೆ. ಪ್ರತಿ
ವರ್ಷದಲ್ಲಿ ₹10-15 ಕೋಟಿಯನ್ನು ಕೈಗಾ ವ್ಯಾಪ್ತಿ ಬರುವ ಹಳ್ಳಿಗಳ ಜನ ಸಾಮ್ಯಾನರಿಗೆ ಸಹಾಯಮಾಡುವ ದೃಷ್ಟಿಯಿಂದ ಹಾಗೂ ಅಭಿವೃದ್ಧಿಗೆ ಖರ್ಚು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.ವಿಧಾನ ಪರಿಷತ್ ಸದಸ್ಯ ಗಣಪತಿ ಡಿ. ಉಳ್ವೇಕರ, ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ, ಕೈಗಾದ ಅಧಿಕಾರಿಗಳಾದ ಎಸ್.ಜಿ. ತಿಪ್ಪೇಸ್ವಾಮಿ, ಗಣೇಶ ಗಾವಂಕರ, ಜಗದೀಶ ಗುನಗಾ, ನಗರಸಭೆ ಉಪಾಧ್ಯಕ್ಷೆ ಪ್ರೀತಿ ಜೋಶಿ, ಪೌರಯುಕ್ತ ಜಗದೀಶ ಹುಲಗಜ್ಜಿ ಇದ್ದರು.