ಅಮಿತ್ ಶಾ ಭಾರತೀಯ ಪೌರತ್ವ ರದ್ದತಿಗೆ ಒತ್ತಾಯ

KannadaprabhaNewsNetwork |  
Published : Dec 22, 2024, 01:30 AM IST
ಸುರಪುರ ನಗರದಲ್ಲಿ ಗೃಹಮಂತ್ರಿ ಅಮಿತ್ ಶಾ ಅವರ ಭಾರತೀಯ ಪೌರತ್ವ ರದ್ದುಪಡಿಸಬೇಕೆಂದು ಒತ್ತಾಯಿಸಿ ದಸಂಸ (ಅಂಬೇಡ್ಕರವಾದ)ದಿಂದ ಪ್ರತಿಭಟಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.  | Kannada Prabha

ಸಾರಾಂಶ

Amit Shah demands cancellation of Indian citizenship

-ಸುರಪುರದಲ್ಲಿ ದಸಂಸ ವತಿಯಿಂದ ಪ್ರತಿಭಟನೆ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಕೆ

------

ಕನ್ನಡಪ್ರಭ ವಾರ್ತೆ ಸುರಪುರ

ಅಂಬೇಡ್ಕರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಗೃಹಮಂತ್ರಿ ಅಮಿತ್ ಶಾ ಅವರ ಭಾರತೀಯ ಪೌರತ್ವ ರದ್ದುಪಡಿಸಿ ಕ್ಯಾಬಿನೆಟ್‌ನಿಂದ ವಜಾಗೊಳಿಬೇಕು. ದೇಶದ್ರೋಹ ಪ್ರಕರಣದಡಿ ಬಂಧಿಸಬೇಕು ಎಂದು ಆಗ್ರಹಿಸಿ ದಸಂಸ ಸಮಿತಿ ಪ್ರತಿಭಟಿಸಿ ತಹಸೀಲ್ದಾರ್ ಎಚ್.ಎ. ಸರಕಾವಸ್‌ಗೆ ಮನವಿ ಸಲ್ಲಿಸಲಾಯಿತು.

ಮುಖಂಡರು ಮಾತನಾಡಿ, ಶತ ಶತಮಾನಗಳಿಂದ ಇದ್ದ ಜಾತಿ ವರ್ಣ ವ್ಯವಸ್ಥೆಯ ದಾಸ್ಯದ ಸಂಕೋಲೆಯಿಂದ ಬಿಡುಗಡೆಗೊಳಿಸಿದ ಅಂಬೇಡ್ಕರ್. ಇಡೀ ದೇಶ ಇವತ್ತು ಸ್ವಾಭಿಮಾನದಿಂದ ತಲೆ ಹತ್ತಿ ನಡೆಯುತ್ತಿದೆ ಎಂದರೆ, ಅದಕ್ಕೆ ಬಾಬಾಸಾಹೇಬರ ಹೋರಾಟವೇ ಕಾರಣ. ಶೋಷಿತ ತಳ ಸಮುದಾಯದವರು ಅಕ್ಷರ, ಅಧಿಕಾರ, ಸಮಾನತೆಯಿಂದ ವಂಚಿತರಾಗಿದ್ದರು. ಅಕ್ಷರದ ಮಾತು ದೂರವಾಗಿತ್ತು. ಇದನ್ನು ತೊಡೆದು ಹಾಕಿದವರು ಸಂವಿಧಾನ ಶಿಲ್ಪಿ ಎಂದರು.

ಕೇಂದ್ರ ಸರ್ಕಾರದ ಗೃಹ ಮಂತ್ರಿಗಳು ದೇಶದ ನಾಗರಿಕರ ಅಭಿವೃದ್ಧಿ ಬಗ್ಗೆ ಮಾತನಾಡದೆ ಕೀಳುಮಟ್ಟದ ಪದಗಳನ್ನು ಬಳಸಿರುವುದನ್ನು ನೋಡಿದರೆ ಮನುಸ್ಮೃತಿಯನ್ನು ಮತ್ತೊಮ್ಮೆ ಜಾರಿಗೊಳಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಗೃಹಮಂತ್ರಿಗಳ ವಿರುದ್ಧ ದೇಶ ದ್ರೋಹ ದೂರು ದಾಖಲಿಸಿ ಬಂಧಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.

ಸಂಘಟನೆಯ ಪ್ರಮುಖರಾದ ಮಾಳಪ್ಪ ಕಿರದಳ್ಳಿ, ಶರಣಪ್ಪ ತಳವಾರಗೇರಾ, ನಾಗಣ್ಣ ಬಡಿಗೇರ, ರಾಮಣ್ಣ ಕಲ್ಲದೇವನಹಳ್ಳಿ, ಮಲ್ಲಿಕಾರ್ಜುನ ಹಾದಿಮನಿ, ಪರಶುರಾಮ ಮಹಲ್‌ರೋಜಾ, ಗೊಲ್ಲಾಳಪ್ಪ ಕಟ್ಟಿಮನಿ, ಪರಶುರಾಮ ಸಾಸನೂರು, ಪ್ರಕಾಶ ಕಟ್ಟಿಮನಿ, ಶರಣು ಅಂಬರಖೇಡ, ಲಾಲು ಚವ್ಹಾಣ, ಕೃಷ್ಣ ಚವ್ಹಾಣ, ಕೆಂಚಪ್ಪ, ಸಾಯಬಣ್ಣ ಕಿರದಳ್ಳಿ, ಶರಣಪ್ಪ ಕನ್ನೆಳ್ಳಿ, ನಿಂಗಪ್ಪ ಕನ್ನೆಳ್ಳಿ, ಬಸವರಜ ಎಂಟಮನಿ ಇದ್ದರು.

------

ಫೋಟೊ; ಸುರಪುರ ನಗರದಲ್ಲಿ ಗೃಹಮಂತ್ರಿ ಅಮಿತ್ ಶಾ ಅವರ ಭಾರತೀಯ ಪೌರತ್ವ ರದ್ದುಪಡಿಸಬೇಕೆಂದು ಒತ್ತಾಯಿಸಿ ದಸಂಸ ಪ್ರತಿಭಟಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

21ವೈಡಿಆರ್8

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ರಾಜಕಾರಣಕ್ಕೆ ಎಚ್‌ಡಿಕೆ ಪರೋಕ್ಷ ಇಂಗಿತ
ಜೈಲಿನ ಬ್ಯಾರಕ್‌ಗಳಿಗೆ ಸಿಸಿಟಿವಿ ಕ್ಯಾಮೆರಾ!