ಅಮ್ಜದ್‌ನನ್ನು ಗುಂಡಿಕ್ಕಿ ಕೊಲ್ಲಬೇಕು: ಮುತಾಲಿಕ್‌ ಹೇಳಿಕೆ

KannadaprabhaNewsNetwork |  
Published : Feb 03, 2025, 12:30 AM IST
ಪಟ್ಟಣದ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಮ್ಜದ್ ಪ್ರಕರಣದ ಬಗ್ಗೆ ಮಾಹಿತಿ ಪಡೆಯುತ್ತೀರುವ ಶ್ರೀ ರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ | Kannada Prabha

ಸಾರಾಂಶ

10 ವರ್ಷಗಳಿಂದ ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಅಮ್ಜದ್‌ ಎಂಬಾತನನ್ನು ಗುಂಡಿಟ್ಟು ಕೊಲ್ಲಬೇಕಾಗಿದೆ. ಇಂತಹ ವಿಕೃತ ಮನಸ್ಸಿನ ಪ್ರವೃತ್ತಿ ನಾಶ ಮಾಡಬೇಕೆಂದರೆ, ಕೋರ್ಟು ಕಚೇರಿಗೆ ಅಲೆದಾಡಿಸದೇ ತಕ್ಷಣವೇ ಶೂಟ್ ಮಾಡಬೇಕು ಎಂದು ರಾಜ್ಯ ಶ್ರೀರಾಮ ಸೇನೆ ಸಂಘಟನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಚನ್ನಗಿರಿಯಲ್ಲಿ ಹೇಳಿದ್ದಾರೆ.

- ಚನ್ನಗಿರಿ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ । ಪೊಲೀಸರ ಸಮಯಪ್ರಜ್ಞೆಗೆ ಶ್ಲಾಘನೆ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

10 ವರ್ಷಗಳಿಂದ ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಅಮ್ಜದ್‌ ಎಂಬಾತನನ್ನು ಗುಂಡಿಟ್ಟು ಕೊಲ್ಲಬೇಕಾಗಿದೆ. ಇಂತಹ ವಿಕೃತ ಮನಸ್ಸಿನ ಪ್ರವೃತ್ತಿ ನಾಶ ಮಾಡಬೇಕೆಂದರೆ, ಕೋರ್ಟು ಕಚೇರಿಗೆ ಅಲೆದಾಡಿಸದೇ ತಕ್ಷಣವೇ ಶೂಟ್ ಮಾಡಬೇಕು ಎಂದು ರಾಜ್ಯ ಶ್ರೀರಾಮ ಸೇನೆ ಸಂಘಟನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.

ಭಾನುವಾರ ಪೊಲೀಸ್ ಠಾಣೆಗೆ ಭೇಟಿ ನೀಡಿ, ಆರೋಪಿ ಅಮ್ಜದ್ ಪ್ರಕರಣದ ತನಿಖೆ ವಿವರಗಳನ್ನು ಪಡೆದು ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ದೇಶದ ನ್ಯಾಯಾಲಯದ ವಿಚಾರಣೆಗಳು ವಿಳಂಬವಾಗುತ್ತಿವೆ. ಮುಂದಿನ 3 ತಿಂಗಳೊಳಗೆ ಎಲ್ಲ ವಿಚಾರಣೆ ನಡೆಸಿ, ಆತನಿಗೆ ಗಲ್ಲು ಶಿಕ್ಷೆ ನೀಡಬೇಕು. ಇಲ್ಲದಿದ್ದರೆ, ಹಿಂದೂ ಸಮಾಜ ಕಲ್ಲು ಎಸೆದು ಅವನನ್ನು ಕೊಂದು ಹಾಕಲಿದೆ ಎಂದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು. ಇಂತಹ ಕಳಂಕಿತ ವ್ಯಕ್ತಿಗೆ ದಯೆ, ಜಾಮೀನು, ಕೋರ್ಟು ಎನ್ನದೇ ಕಠಿಣ ಶಿಕ್ಷಣ ನೀಡಬೇಕು ಎಂದು ಆಗ್ರಹಿಸಿದರು.

ಚನ್ನಗಿರಿಯಿಂದ ಆತನನ್ನು ಬಚಾವ್ ಮಾಡುವ ಸಲುವಾಗಿ 9 ಜನರು ಸಹಕಾರ ನೀಡಿದ್ದರು. ಆದರೆ, ಪೊಲೀಸ್ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಬಂಧಿಸಿರುವುದು ಶ್ಲಾಘನೀಯ. ಆರೋಪಿ ಅಮ್ಜದ್‌ನನ್ನು ಬಚಾವ್ ಮಾಡಲು ಮುಂದಾದವರನ್ನು ಮೊದಲು ಬಂಧಿಸಬೇಕು ಎಂದರು.

ಈ ಕೃತ್ಯ ಖಂಡಿಸಿ ನಾಳೆ ವಿಎಚ್‌ಪಿ, ಬಜರಂಗದಳ ನೇತೃತ್ವದಲ್ಲಿ ಚನ್ನಗಿರಿ ಬಂದ್‌ಗೆ ಕರೆ ನೀಡಿದ್ದೇವೆ. ಇದಕ್ಕೆ ಸಮಸ್ತ ಹಿಂದೂ ಸಮಾಜ ಬೆಂಬಲ ನೀಡಲಿದೆ. ನಮ್ಮ ಶ್ರೀರಾಮ ಸೇನೆಯು ಸಹಾ ಬೆಂಬಲ ನೀಡಿದೆ. ಫೆ.6ರಂದು ಶ್ರೀ ರಾಮ ಸೇನೆ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದ್ದೇವೆ ಎಂದರು.

ಈ ಸಂದರ್ಭ ವಿವಿಧ ಹಿಂದೂಪರ ಸಂಘಟನೆಗಳ ಪ್ರಮುಖರಾದ ತರಕಾರಿ ಮಂಜುನಾಥ್, ವಸಂತ್ ಕುಮಾರ್, ನಾಗರಾಜ್, ಸುರೇಶ್, ದಿಲೀಪ್, ವಿನಯ್ ಪವಾರ್, ಕಿರಣ್ ಕೋರಿ, ನೇತಾಜಿ, ರಾಕೇಶ್, ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಜರಿದ್ದರು.

- - - -2ಕೆಸಿಎನ್‌ಜಿ2.ಜೆಪಿಜಿ:

ಚನ್ನಗಿರಿ ಪಟ್ಟಣದ ಪೊಲೀಸ್ ಠಾಣೆಗೆ ಭೇಟಿ ನೀಡಿದ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಲೈಂಗಿಕ ದೌರ್ಜನ್ಯ ಆರೋಪಿ ಅಮ್ಜದ್ ಪ್ರಕರಣ ಬಗ್ಗೆ ಮಾಹಿತಿ ಪಡೆದುಕೊಂಡರು.

PREV

Recommended Stories

ದ.ಕ.ದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಚಾಲನೆ
ಕದ್ರಿ ದೇವಸ್ಥಾನ ಪ್ರಾಂಗಣದಲ್ಲಿ ‘ಮುದ್ದು ಕೃಷ್ಣ’ ವೇಷ ಸ್ಪರ್ಧೆ