ಗದಗ: ಅಜ್ಜನ ಜಾತ್ರೆಯಲ್ಲಿ ನಮ್ಮ ಯಾತ್ರೆಯನ್ನು ಕಂಡುಕೊಳ್ಳುತ್ತೇವೆ. ಕೋಟಿಗೊಬ್ಬ ಶರಣರಲ್ಲಿ ಶ್ರೇಷ್ಠ ಶರಣರು ಚನ್ನವೀರಶರಣರಾಗಿರುವರು ಎಂದು ಅಗಡಿ, ಚಿಕ್ಕೇರೂರು ಕಚವಿಯ ಅಕ್ಕಿಮಠದ ಗುರುಲಿಂಗ ಸ್ವಾಮಿಗಳು ಹೇಳಿದರು.
ಅಹಂಕಾರವನ್ನು ದೂರಿಕರಿಸಬೇಕು. ತುಳಿದು ಬದುಕುವುದಕ್ಕಿಂತ ತಿಳಿದು ಬದುಕಬೇಕು ಎಂಬ ಕವಿವಾಣಿಯ ಉಕ್ತಿಯಂತೆ ಬದುಕುವುದು ಅವಶ್ಯವಿದೆ. ಇಂದು ಅತಿಯಾದ ಮೊಬೈಲ್ ಬಳಕೆಯು ನಮಗೆ ಹೆಚ್ಚು ತೊಂದರೆದಾಯಕವಾಗಿದೆ. ದುಡಿದು ತಿನ್ನುವ ರೂಢಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಶಿವಶಾಂತವೀರ ಶರಣರು ಮಾತನಾಡಿ, ಶ್ರೀಮಠದ ಜಾತ್ರೆ ಮನುಷ್ಯನ ಬದುಕನ್ನು ಖಾತ್ರಿ ಪಡಿಸುವ ಜಾತ್ರೆಯಾಗಿದೆ. ಇಲ್ಲಿ ಭಕ್ತ ಹಿತಚಿಂತನೆ ಮೂಲಕ ಜನರಲ್ಲಿ ಸದ್ಭಾವನೆ, ಸದ್ವಿಚಾರಗಳನ್ನು ಬೆಳೆಸುವುದಾಗಿದೆ. ಸಮಾಜಮುಖಿಯಾಗಿ ಕಾರ್ಯಚಟುವಟಿಕೆಯನ್ನು ಆಯೋಜಿಸುವದು ಅವುಗಳ ಸದುಪಯೋಗ ಪಡೆದುಕೊಂಡು ಜೀವನವನ್ನು ಸಾರ್ಥಕಗೊಳಿಸಿಕೊಳ್ಳುವುದಾಗಿದೆ ಎಂದರು.ಪ್ರಗತಿಪರ ಕೃಷಿ ಮಹಿಳೆ ಕವಿತಾ ಮಿಶ್ರಾ ಮಾತನಾಡಿ, ರೈತರು ಋತುಮಾನಾಧಾರಿತ ಬೆಳೆ ಪದ್ಧತಿ ರೂಢಿಸಿಕೊಂಡು ಸಮಾಜದಲ್ಲಿ ಯಾರಿಗೂ ಕಡಿಮೆ ಇರದ ರೀತಿಯಲ್ಲಿ ಜೀವನ ಮಟ್ಟವನ್ನು ರೂಪಿಸಿಕೊಳ್ಳಬೇಕು ಎಂದರು.
ಈ ವೇಳೆ ಪ್ರಗತಿಪರ ಕೃಷಿ ಮಹಿಳೆ ಕವಿತಾಳದ ಕವಿತಾ ಮಿಶ್ರಾ, ಬೆಂಗಳೂರಿನ ಚಲನಚಿತ್ರ ಹಿನ್ನೆಲೆ ಗಾಯಕ, ಜಾನಪದ ಕಲಾವಿದ ಕಡುಬಗೆರೆ ಮುನಿರಾಜ, ಬಾಗಲಕೋಟೆಯ ಐ.ಐ.ಟಿ. ಸಂಶೋಧನಾರ್ಥಿ ಅನ್ನಪೂರ್ಣಾ ಬಸಯ್ಯ ಬಳೂಲಮಠ ಅವರಿಗೆ ಶ್ರೀ ಶರಣರ ಮಠ ಹಾಗೂ ನವಲಗುಂದದ ಶ್ರೀ ಸಿದ್ಧಲಿಂಗನಗೌಡ ಎಸ್. ಜಂಗ್ಲೆಪ್ಪಗೌಡ್ರ ಮೆಮೋರಿಯಲ್ ಉಮಾ ವಿದ್ಯಾಶ್ರೀ ಟ್ರಸ್ಟ್ ಸಹಯೋಗದಲ್ಲಿ ಶರಣಶ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.ಇದೇ ಸಂದರ್ಭದಲ್ಲಿ ನೂತನವಾಗಿ ಶ್ರೀಮಠದಲ್ಲಿ ಹರಕೆಯ ತೇರನ್ನು ಲೋಕಾರ್ಪಣೆಗೊಳಿಸಲಾಯಿತು. ಕೇಂದ್ರ ಮಾಜಿ ಸಚಿವ ಬಸವರಾಜ ಪಾಟೀಲ ಅನ್ವರಿ ಅವರನ್ನು ಸನ್ಮಾನಿಸಲಾಯಿತು. 36 ಜೋಡಿ ನೂತನ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಬೆಂಗಳೂರಿನ ಗಾಯಕ ಕಡುಬಗೆರೆಯ ಮುನಿರಾಜು ಹಾಗೂ ತಂಡದವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ಜರುಗಿ ಎಲ್ಲರ ಮನಸೂರೆಗೊಂಡಿತು.
ಹನುಮಂತ ಅಲ್ಕೋಡ ಹಾಗೂ ತಂಡದವರಿಂದ ಪ್ರಾರ್ಥನೆ ಹಾಗೂ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಿತು.ಬಳೂಟಗಿಯ ಹಿರೇಮಠದ ಶ್ರೀ ಶಿವಕುಮಾರ ಸ್ವಾಮಿಗಳು, ರಬಕವಿಯ ಗುರುಸಿದ್ಧ ಸ್ವಾಮಿಗಳು, ಕಂಪಸಾಗರ ಅಭಿನವ ನಾಗಭೂಷಣ ಸ್ವಾಮಿಗಳು, ಹೆಬ್ಬಾಳದ ಪ್ರಕಾಶ ಶರಣರು ಸಮ್ಮುಖ ವಹಿಸಿದ್ದರು. ಬಿ.ವೈ. ಡೊಳ್ಳಿನ ಶರಣಶ್ರೀ ಪ್ರಶಸ್ತಿ ವಾಚನ ಮಾಡಿದರು. ಸವಿತಾ ಶಿವಕುಮಾರ ಸ್ವಾಗತಿಸಿದರು. ಶಿವಲಿಂಗ ಶಾಸ್ತ್ರೀಗಳು ಸಿದ್ಧಾಪೂರ ವಂದಿಸಿದರು.