ಕನ್ನಡಪ್ರಭ ವಾರ್ತೆ ತರೀಕೆರೆ
ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸರ್ಕಾರದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಿಂದ ಮುಖ್ಯಮಂತ್ರಿಗಳ 100 ದಿನಗಳ ಕಾರ್ಯಕ್ರಮದಡಿ ಹಮ್ಮಿಕೊಳ್ಳಲಾದ ಜಾಬ್ ಲಿಂಕ್ಡ್ 100 ಐಟಿಐ ಯೋಜನೆ ಹೆಚ್ಚುವರಿ ಕೌಶಲ್ಯ ತರಬೇತಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ನಮ್ಮ ಕಂಪನಿ ಮತ್ತು ತರೀಕೆರೆ ಸಂಸ್ಥೆ ನಾವು ಒಡಂಬಡಿಕೆ ಮಾಡಿದ್ದರ ಫಲವಾಗಿ ರಾಜ್ ದೀಪ್ ಇಂಡಸ್ಟ್ರೀಸ್ ಯಿಂದ ಈಗಾಗಲೇ ಸಿಎನ್.ಸಿ. ತರಬೇತಿದಾರಿಗೆ ಒಜೆಟಿ ಪಡೆಯಲು ಆವಕಾಶ ಮಾಡಿದ್ದೇವೆ. ಇನ್ನೂ ಫಿಟರ್ ಹಾಗೂ ಕೋಪಾ ವೃತ್ತಿ ತರಬೇತಿದಾರರಿಗೂ ಮುಂದಿನ ದಿನಗಳಲ್ಲಿ ಆವಕಾಶ ಮಾಡಲಾಗುವುದು ಎಂದು ತಿಳಿಸಿದರು.ಸಂಸ್ಥೆ ಪ್ರಭಾರಿ ಪ್ರಾಚಾರ್ಯ ರವಿ ದಳವಾಯಿ ಮಾತನಾಡಿ ಸಂಸ್ಥೆಯಲ್ಲಿ ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ಆಧುನಿಕ ಕೈಗಾರಿಕಾ ಕ್ಷೇತ್ರಕ್ಕೆ ಅಗತ್ಯವಿರುವ ಹೆಚ್ಚುವರಿ ಕೌಶಲ್ಯ ನೀಡಿ ಉದ್ಯೋಗಾವಕಾಶ ಹೆಚ್ಚಿಸುವುದು ಈ ಯೋಜನೆ ಮುಖ್ಯ ಉದ್ದೇಶ. ನ. 2 ರಿಂದ ಏ. 27ರ ವರೆಗೆ ತರಬೇತಿ ನಡೆಯಲಿದ್ದು, ಪ್ರಾಯೋಗಿಕ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಪ್ರಮುಖ ಕೈಗಾರಿಕೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ತರಬೇತಿದಾರರಿಗೆ ಅಪ್ರೆಂಟಿಸ್ ಶಿಪ್ ಹಾಗೂ ನೇರ ಉದ್ಯೋಗ ಸಂಪರ್ಕ ಕಲ್ಪಿಸುವ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
- 5ಕೆಟಿಆರ್.ಕೆ.5ಃ
-----------------