ಅಮೃತ್ ನೋನಿ ಆರ್ಥೊಪ್ಲಸ್ ಕ್ಲಿನಿಕಲ್ ಟ್ರಯಲ್ ಯಶಸ್ವಿ

KannadaprabhaNewsNetwork |  
Published : Jan 23, 2025, 12:47 AM IST
ಪೊಟೋ: 21ಎಸ್‌ಎಂಜಿಕೆಪಿ09ಶಿವಮೊಗ್ಗದ ಪತ್ರಿಕಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎ. ಕೆ.ಶ್ರೀನಿವಾಸಮೂರ್ತಿ ಮಾತನಾಡಿದರು. | Kannada Prabha

ಸಾರಾಂಶ

ಶಿವಮೊಗ್ಗ: ಅಮೃತ ನೋನಿ ಉತ್ಪನ್ನಗಳ ತಯಾರಕರಾದ ವ್ಯಾಲ್ಯೂ ಪ್ರಾಡಕ್ಟ್ ಪ್ರೈವೇಟ್ ಲಿಮಿಟೆಡ್, ಸಿಟಿಆರ್‌ಐ-ಆರ್‌ಇಜಿ- ಇಂಡಿಯಾದ ಮಾರ್ಗಸೂಚಿಗಳ ಅಡಿಯಲ್ಲಿ ನಡೆಸಲಾದ ಅಮೃತ ನೋನಿ ಆರ್ಥೊಪ್ಲಸ್‌ಗೆ ಸಂಬಂಧಿಸಿದ ಡಬಲ್ ಬೈಂಡೆಡ್ ಮತ್ತು ರಾಂಡಮೈಜ್ ಹೂಮನ್ ಕ್ಲಿನಿಕಲ್ ಟ್ರಯಲ್‌ಗಳು ಯಶಸ್ವಿಯಾಗಿವೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎ.ಕೆ.ಶ್ರೀನಿವಾಸಮೂರ್ತಿ ತಿಳಿಸಿದರು.

ಶಿವಮೊಗ್ಗ: ಅಮೃತ ನೋನಿ ಉತ್ಪನ್ನಗಳ ತಯಾರಕರಾದ ವ್ಯಾಲ್ಯೂ ಪ್ರಾಡಕ್ಟ್ ಪ್ರೈವೇಟ್ ಲಿಮಿಟೆಡ್, ಸಿಟಿಆರ್‌ಐ-ಆರ್‌ಇಜಿ- ಇಂಡಿಯಾದ ಮಾರ್ಗಸೂಚಿಗಳ ಅಡಿಯಲ್ಲಿ ನಡೆಸಲಾದ ಅಮೃತ ನೋನಿ ಆರ್ಥೊಪ್ಲಸ್‌ಗೆ ಸಂಬಂಧಿಸಿದ ಡಬಲ್ ಬೈಂಡೆಡ್ ಮತ್ತು ರಾಂಡಮೈಜ್ ಹೂಮನ್ ಕ್ಲಿನಿಕಲ್ ಟ್ರಯಲ್‌ಗಳು ಯಶಸ್ವಿಯಾಗಿವೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎ.ಕೆ.ಶ್ರೀನಿವಾಸಮೂರ್ತಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಪ್ರಯೋಗಗಳನ್ನು ಆಸ್ಟಿಯೋ ಆರ್ಥೈಟಿಸ್ (ಅಸ್ಥಿ ಸಂಧಿವಾತ), ರುಮಟಾಯ್ಸ್ ಆರ್ಥೈಟಿಸ್ (ರುಮಟಾಯ್ ಸಂಧಿವಾತ) ಮತ್ತು ಗೌಟ್ ನಂತಹ ಕಾಯಿಲೆಗಳ ಮೇಲೆ ನಡೆಸಲಾಗಿದೆ ಎಂದರು.ಹೆಚ್ಚು ಜನ ಆರ್ಥೈಟಿಸ್‌ನಿಂದ ಬಳಲುತ್ತಿದ್ದಾರೆ. ಇದು ಜನಸಂಖ್ಯೆಯ ಶೇ.15 ರಷ್ಟಿದೆ. ಕ್ಯಾನ್ಸರ್, ಏಡ್ಸ್ ಮತ್ತು ಡಯಾಬಿಟೀಸ್‌ಗಿಂತಲೂ ಇದು ಹೆಚ್ಚು ವ್ಯಾಪಕವಾಗಿದೆ. ಆರ್ಥೈಟಿಸ್ ಬಗೆಗೆ ಹೆಚ್ಚು ಅರಿವು ಮೂಡಿಸುವ ಅಗತ್ಯವಿದೆ. ಅಧ್ಯಯನಗಳ ಪ್ರಕಾರ, 100ಕ್ಕೂ ಹೆಚ್ಚು ಪ್ರಕಾರಗಳ ಆರ್ಥೈಟಿಸ್ ಇದೆ, ಅವುಗಳಲ್ಲಿ ಆಸ್ತಿಯೋ ಆರ್ಥೈಟಿಸ್, ರುಮಟಾಯ್ಡ್ ಆರ್ಥೈಟಿಸ್ ಮತ್ತು ಗೌಟ್ ಜನರಲ್ಲಿ ಹೆಚ್ಚು ಸಾಮಾನ್ಯವಾಗಿವೆ. ಆರ್ಥೈಟಿಸ್‌ಗೆ ಸಂಪೂರ್ಣ ಚಿಕಿತ್ಸೆ ಲಭ್ಯವಿಲ್ಲದ ಕಾರಣ, ನಾವು ಹೆಚ್ಚು ಸುರಕ್ಷಿತ ಮತ್ತು ಪರಿಣಾಮಕಾರಿಯಾದ ಔಷಧಿಗಳ ಮೂಲಕ ಉತ್ತಮ ನಿರ್ವಹಣಗೆ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದರು.ಈ ನಿಟ್ಟಿನಲ್ಲಿ ವ್ಯಾಲ್ಯೂ ಪ್ರಾಡಕ್ಟ್ ಪ್ರೈವೇಟ್ ಲಿಮಿಟೆಡ್, ಆಧುನಿಕ ಸಂಶೋಧನೆಗಳೊಂದಿಗೆ ಅನುಭವಿ ಆಯುರ್ವೇದ ವೈದ್ಯರು ಮತ್ತು ವಿಜ್ಞಾನಿಗಳ ಸಹಯೋಗದೊಂದಿಗೆ ಮತ್ತು ಸುಧಾರಿತ ಆರ್‌ ಎಂಡ್ ಡಿ ಸಂಶೋಧನಾ ತಂತ್ರಗಳನ್ನು ಬಳಸಿಕೊಂಡು ಅಮೃತ ನೋನಿ ಅರ್ಥ್ ಪ್ಲಸ್ ಅನ್ನು ಅಭಿವೃದ್ಧಿಪಡಿಸಿದೆ ಎಂದು ತಿಳಿಸಿದರು.ಅತ್ಯುತ್ತಮವಾದ ಯಶಸ್ಸು ಸಾಧಿಸಿರುವ ಈ ಉತ್ಪನ್ನವು ಭಾರತದಲ್ಲಿ ಆಸ್ಟ್ರಿಯೋ ಆರ್ಥೈಟಿಸ್, ರುಮಟಾಯ್ ಆರ್ಥೈಟಿಸ್ ಮತ್ತು ಗೌಟ್ ನಿರ್ವಹಣೆಗಾಗಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಉತ್ಪನ್ನವಾಗಿ ಹೊರಹೊಮ್ಮಿದೆ. ಇದರ ವಿಶಿಷ್ಟ ಮತ್ತು ಪರಿಣಾಮಕಾರಿ ಸೂತ್ರದಿಂದಾಗಿ ೩೦ ಲಕ್ಷಕ್ಕೂ ಹೆಚ್ಚು ಸಂತೃಪ್ತ ಗ್ರಾಹಕರು ತಮ್ಮ ಮಂಡಿ ನೋವು, ಬೆನ್ನು ನೋವು, ಸೊಂಟ ನೋವಿನಂತಹ ಕೀಲು ನೋವಿನ ಸಮಸ್ಯೆಗಳಿಗೆ ಗಮನಾರ್ಹ ಪರಿಹಾರವನ್ನು ಕಂಡುಕೊಂಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.ಈ ಉತ್ಪನ್ನದಲ್ಲಿ ಬಳಸಲಾದ ನೋನಿ ಹಾಗೂ ಔಷಧೀಯ ಗಿಡಮೂಲಿಕೆಗಳು ಅದರ ಜನಪ್ರಿಯತೆ ಮತ್ತು ಪರಿಣಾಮಕಾರಿತ್ರ್ಯಕ್ಕೆ ಕಾರಣವಾಗಿದೆ. ದೀರ್ಘಕಾಲೀನ ಕೀಲುನೋವಿನ ಸಮಸ್ಯೆಗಳಿಗೆ ಪರಿಹಾರವಾಗಿ ಬಳಸಲು ಇದು ಅತ್ಯುತ್ತಮ ಆಯ್ಕೆಯಾಗಿದೆ ಎಂದರು.ಕ್ಲಿನಿಕಲ್ ಟ್ರಯಲ್‌ :ಅಮೃತ ನೋನಿ ಅರ್ಥೋಪ್ಲಸ್ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಇನ್ನಷ್ಟು ದೃಢೀಕರಿಸಲು, ಸಿಟಿಆರ್‌ಐ-ಆರ್‌ಇಜಿ- ಇಂಡಿಯಾದ ಮಾರ್ಗಸೂಚಿಗಳಡಿ ನಲಂದಾ ಕ್ಲಿನ್ಸರ್ವ್ ಸಂಸ್ಥೆಯ ಸಹಯೋಗದೊಂದಿಗೆ ವಾರಾಣಾಸಿಯಲ್ಲಿ ಹೂಮನ್ ಕ್ಲಿನಿಕಲ್ ಟ್ರಯಲ್ ಅನ್ನು ನಡೆಸಲಾಯಿತು.

ಈ ಪ್ರಯೋಗದಲ್ಲಿ ಆಸ್ಟ್ರಿಯೋ ಆರ್ಥೈಟಿಸ್, ರುಮಟಾಯ್ಡ್ ಆರ್ಥೈಟಿಸ್ ಮತ್ತು ಗೌಟ್ ಸಂಶೋಧನೆಗೆ ಪ್ರತಿಯೊಂದಕ್ಕೊಂದರಂತೆ ಪ್ರತ್ಯೇಕವಾಗಿ 40 ರೋಗಿಗಳನ್ನು ಆಯ್ಕೆ ಮಾಡಿ, ಆಕ್ಟಿವ್ ಮತ್ತು ಪ್ಲಾಸಿಬೊ ಗುಂಪುಗಳಾಗಿ ಆಯ್ಕೆ ಮಾಡಿ 2 ತಿಂಗಳಿಗೊಮ್ಮೆ ಎಂಬಂತೆ 6 ತಿಂಗಳಲ್ಲಿ ಮೂರು ಭಾರಿ ಭೇಟಿ ಮಾಡುವ ಮೂಲಕ ಈ ಪ್ರಯೋಗವನ್ನು ಪೂರ್ಣಗೊಳಿಸಲಾಯಿತು ಎಂದು ವಿವರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕಿ ಅಂಬುಜಾಕ್ಷಿ ಶ್ರೀನಿವಾಸಮೂರ್ತಿ, ಸಿಇಒ ಇಂಚರಾ ನಾಡಿಗ್, ಲೀಗಲ್ ಹೆಡ್ ಶಶಿಕಾಂತ್ ನಾಡಿಗ್, ಆಯುರ್ವೇದ ವೈದ್ಯರಾದ ಡಾ.ಮಹಂತಸ್ವಾಮಿ ಹಿರೇಮಠ, ಡಾ.ಸಂದೀಪ್ ಬೆಣಕಲ್, ಡಾ.ಸೌರಭ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!