ಅಂತರ್ಜಲ ಹೆಚ್ಚಿಸಿದ ಅಮೃತ ಸರೋವರಗಳು

KannadaprabhaNewsNetwork | Published : Jul 21, 2024 1:15 AM

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕೈಗೊಂಡಿರುವ ಅಮೃತ ಸರೋವರಗಳು ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಕಾರಣವಾಗಿವೆ. ಈ ಅಮೃತ ಸರೋವರಗಳು ಮಳೆಗಾಲದಲ್ಲಿ ತುಂಬಿ ಎಪ್ರೀಲ್‌, ಮೇ ತಿಂಗಳ ಬೇಸಿಗೆಯಲ್ಲಿ ಪಶು, ಪಕ್ಷಿ ಮತ್ತು ರೈತರಿಗೆ ನೆರವಾಗಲಿವೆ.

ಖಾಜು ಸಿಂಗೆಗೋಳಕನ್ನಡಪ್ರಭ ವಾರ್ತೆ ಇಂಡಿ:ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕೈಗೊಂಡಿರುವ ಅಮೃತ ಸರೋವರಗಳು ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಕಾರಣವಾಗಿವೆ. ಈ ಅಮೃತ ಸರೋವರಗಳು ಮಳೆಗಾಲದಲ್ಲಿ ತುಂಬಿ ಎಪ್ರೀಲ್‌, ಮೇ ತಿಂಗಳ ಬೇಸಿಗೆಯಲ್ಲಿ ಪಶು, ಪಕ್ಷಿ ಮತ್ತು ರೈತರಿಗೆ ನೆರವಾಗಲಿವೆ.

ಅಮೃತ ಸರೋವರಗಳ ನಿರ್ಮಾಣದಿಂದ ಅಂತರ್ಜಲ ಮಟ್ಟ ವೃದ್ಧಿಸಿ ಗ್ರಾಮಗಳಲ್ಲಿ ನೀರಿನ ಸಮಸ್ಯೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿವೆ. ನರೇಗಾ ಯೋಜನೆಯಡಿಯಲ್ಲಿ ನಿರ್ಮಾಣ ಮಾಡಿದ ಅಮೃತ ಸರೋವರಗಳಿಂದ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿನ ಬಾವಿ, ಬೋರ್‌ವೆಲ್‌ಗಳಿಗೆ ಅಂತರ್ಜಲ ಹಚ್ಚಾಗಲಿದೆ. ತೆರೆದ ಬಾವಿ, ಬೋರ್‌ವೆಲ್‌ಗಳು ರೀಚಾರ್ಜ್‌ ಆಗಿವೆ. ಹರಿದು ಹೋಗುವ ನೀರನ್ನು ತಡೆದು ಇಂಗಿಸುವ ಕಾರ್ಯದಿಂದ ತೆರೆದ ಬಾವಿ, ಕೊಳವೆ ಬಾವಿಗಳು ಮರುಜೀವ ಪಡೆದು ಕೃಷಿ ಮತ್ತು ಕುಡಿಯಲು ನೀರಿನ ಲಭ್ಯತೆ ಹೆಚ್ಚಿಸಿವೆ. ದುಡಿಯುವ ಕೈಗಳಿಗೆ ಕೆಲಸ ನೀಡುವ ಉದ್ದೇಶದಿಂದ ಆರಂಭಿಸಿರುವ ಈ ಯೋಜನೆಯ ಮಾಡಿದ್ದರಿಂದ ಸರೋವರದ ಅಕ್ಕಪಕ್ಕದ ರೈತರು ಈಗ ಸಂತಸಗೊಂಡಿದ್ದಾರೆ.ಸರ್ಕಾರದಿಂದ ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಅಮೃತ್‌ಸರೋವರ ಯೋಜನೆಯಡಿಯಲ್ಲಿ ತಾಲೂಕಿನ 38 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 10 ಗ್ರಾಮಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಈ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ಸಾವಳಸಂಗ, ಬಬಲಾದ, ಅಂಜುಟಗಿ, ಚೋರಗಿ, ಹಿಂಗಣಿ, ಕ್ಯಾತನಕೇರಿ, ಬಬಲಾದ ಅರಣ್ಯ ಪ್ರದೇಶ, ಕೂಡಗಿ, ನಿಂಬಾಳ, ಅರ್ಜನಾಳ ಗ್ರಾಮಗಳಲ್ಲಿ ನೀರಿನ ಸಮಸ್ಯೆ ನಿಯಂತ್ರಣಕ್ಕೆ ಸಹಕಾರಿಯಾಗಿವೆ.ಒಂದು ಎಕರೆ, ಒಂದೂವರೇ ಹಾಗೂ ಎರಡು ಎಕರೆ ಪ್ರದೇಶದಲ್ಲಿ ಅಮೃತ ಸರೊವರಗಳನ್ನು ನಿರ್ಮಾಣ ಮಾಡಿದ್ದು, ಪ್ರತಿ ಸರೋವರದಿಂದ 80 ಬೋರ್‌ವೆಲ್‌ಗಳು ಹಾಗೂ 100 ತೆರೆದ ಬಾವಿಗಳು ರಿಚಾರ್ಜ್‌ ಆಗಲಿವೆ. ಒಟ್ಟು 2 ಸಾವಿರ ಎಕರೆ ಪ್ರದೇಶದ ವ್ಯಾಪ್ತಿಯಲ್ಲಿ ಅಂತರ್ಜಲಮಟ್ಟ ವೃದ್ಧಿಯಾಗಲಿದೆ.

ಮಳೆಗಾಲದಲ್ಲಿ ಸರೋವರದಲ್ಲಿ ನೀರು ಸಂಗ್ರಹಣೆಯಾಗಿ ಸರೋವರದ ಸುತ್ತಲೂ ಇರುವ ಸಮಾರು 2 ಸಾವಿರ ಹೆಕ್ಟರ್‌ ಪ್ರದೇಶಕ್ಕೆ ಈ ನೀರು ಬಳಕೆಯಾಗಲಿದೆ.

-----------------------------------

ಕೋಟ್‌ 1

ಅಮೃತ ಸರೋವರ ಯೋಜನೆಯ ಉದ್ದೇಶದಂತೆ ಗ್ರಾಮೀಣ ಪ್ರದೇಶದಲ್ಲಿ ಸುಂದರವಾದ ಕೆರೆಗಳು ನಿರ್ಮಾಣವಾಗಬೇಕು. ವಿಶ್ರಾಂತಿಗೆ ಬೆಂಚ್‌ಗಳು ,ವಾಕಿಂಗ್‌ ಟ್ರ್ಯಾಕ್‌, ಐಲ್ಯಾಂಡ್‌ ಸುತ್ತಲೂ ತಂತಿ ಬೇಲಿ ಹಾಕಿ ಆಕರ್ಷನೀಯವಾಗಿ ಮಾಡಲಾಗಿದ್ದು, ನರೇಗಾ ಅಮೃತ ಸರೋವರಗಳ ನಿರ್ಮಾಣದಲ್ಲಿ ವಿಜಯಪುರ ಜಿಲ್ಲೆ ಮುಂದಿದೆ. ಬರಕ್ಕೆ ಹೆಸರುವಾಸಿಯಾದ ವಿಜಯಪುರ ಜಿಲ್ಲೆಯಲ್ಲಿ ಈ ಯೋಜನೆಯಿಂದ ಸ್ವಲ್ಪಮಟ್ಟಿಗೆ ನೀರಿನ ಸಮಸ್ಯೆ ನೀಗಲಿದೆ.

ವಿಜಯಕುಮಾರ ಆಜೂರ, ಉಪ ಕಾರ್ಯದರ್ಶಿ,ಜಿಪಂ

-------------------------------------------

ಕೋಟ್‌ 2ಇಂಡಿ ತಾಲೂಕಿನ 38 ಗ್ರಾಮ ಪಂಚಾಯಿತಿ ವ್ಯಾಪ್ತಿಯ 10 ಗ್ರಾಮಗಳಲ್ಲಿ ನರೇಗಾ ಯೋಜನೆಯಡಿಯಲ್ಲಿ ಅಮೃತ ಸರೋವರಗಳು ನಿರ್ಮಾಣವಾಗಿವೆ. ಅಮೃತ ಸರೋವರಗಳ ನಿರ್ಮಾಣದ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂಬರುವ ದಿನದಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಯಲ್ಲಿಯೂ ಅಮೃತ ಸರೋವರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.ಬಾಬು ರಾಠೋಡ, ಇಒ, ತಾಪಂ,ಇಂಡಿ.

--------------------------------------

ಕೊಟ್‌-3ನರೇಗಾ ಯೋಜನೆಯಡಿಯಲ್ಲಿ ಶಿಶುಪಾಲನಾ ಕೇಂದ್ರಗಳು, ಅಮೃತ ಸರೋವರಗಳ ನಿರ್ಮಾಣ, ಶಾಲಾ ಕಾಂಪೌಂಡ್‌ , ಭೋಜನಾಲಯ ಸೇರಿ ಹಲವು ಕಾಮಗಾರಿಗಳು ಇಂಡಿ ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಕೈಗೊಳ್ಳಲಾಗಿದೆ. ಭೀಕರ ಬರಕ್ಕೆ ಹೆಸರಾದ ಇಂಡಿ ತಾಲೂಕಿನಲ್ಲಿ ಬೇಸಿಗೆ ಬಂದರೆ ವಸತಿ ಪ್ರದೇಶಕ್ಕೆ ಕುಡಿಯುವ ನೀರಿನ ಸಮಸ್ಯೆ ತಲೆದೊರುತ್ತದೆ. ಹೀಗಾಗಿ ಅಮೃತ ಸರೋವರಗಳಿಂದ ಅಂತರ್ಜಲ ಮಟ್ಟ ವೃದ್ಧಿಯಾಗಲಿದೆ. ನೀರಿನ ಸಮಸ್ಯೆ ಕಡಿಮೆ ಆಗುತ್ತದೆ ಎಂಬ ಉದ್ದೇಶದಿಂದ ನಿರ್ಮಾಣ ಮಾಡಲಾಗಿದೆ. ಇಲ್ಲಿ ವಿಶ್ರಾಂತಿಗಾಗಿ ಗಿಡಗಳನ್ನು ನೆಡಲಾಗಿದೆ. ವಾಕಿಂಗ್‌ ಟ್ರ್ಯಾಕ್‌, ಬೆಂಚ್‌ ಹಾಕಲಾಗಿದೆ.ಸಂಜಯ ಖಡಗೇಕರ, ಎಡಿ,ನರೇಗಾ,ತಾಪಂ,ಇಂಡಿ

--------------------------------------

ಕೋಟ್‌-4ಇಂಡಿ ತಾಲೂಕಿನ ಚವಡಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೋರಗಿ, ಚವಡಿಹಾಳ ಗ್ರಾಮಗಳಲ್ಲಿ ಅಮೃತ ಸರೋವರಗಳನ್ನು ನರೇಗಾದಲ್ಲಿ ನಿರ್ಮಾಣ ಮಾಡಲಾಗಿದೆ. ಅಮೃತ ಸರೋವರಗಳ ನಿರ್ಮಾಣ ಕಾರ್ಯದಲ್ಲಿ ಕೂಲಿಕಾರರಿಗೆ ಕೂಲಿ ನೀಡಿ ಕಾಮಗಾರಿ ನಿರ್ಮಾಣ ಮಾಡಲಾಗಿದೆ. ಇದರಿಂದ ಸರೋವರದ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲಮಟ್ಟ ಹೆಚ್ಚಾಗಿದ್ದು, ದುಡಿಯುವ ಕೈಗಳಿಗೆ ಕೆಲಸ ಸಿಕ್ಕಿದೆ.ಸಿ.ಜಿ.ಪಾರೆ, ಪಿಡಿಒ,ಚವಡಿಹಾಳ,ಗ್ರಾಪಂ

..

Share this article